'ಆರೋಗ್ಯ ಮೊದಲು, ಆಮೇಲೆ ಐಪಿಎಲ್' ಎಂದ ವಿವಿಎಸ್ ಲಕ್ಷ್ಮಣ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಟು ಫ್ರಾಂಚೈಸಿಗಳಲ್ಲಿ 4 ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಅನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಮಾನತುಗೊಳಿಸಿದೆ.
ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಲೇ ಇರುವುದರಿಂದ ಐಪಿಎಲ್ ಅನ್ನು ಅಮಾನತುಗೊಳಿಸಿರುವ ಬಿಸಿಸಿಐ ನಿರ್ಧಾರಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಕೂಡ ಐಪಿಎಲ್ ಅಮಾನತನ್ನು ಬೆಂಬಲಿಸಿದ್ದಾರೆ.
'ಐಪಿಎಲ್ ಬಯೋಬಬಲ್‌ಗೆ ಕೋವಿಡ್ ಸೋಂಕು ಪ್ರವೇಶಿಸಿದ್ದು ದುರದೃಷ್ಟಕರ. ನಾಲ್ಕು ಫ್ರಾಂಚೈಸಿಗಳ ಬಯೋಬಬಲ್ ಒಳಗೆ ಮುನ್ನೆಚ್ಚರಿಕೆ ನಿಯಮ ಮೀರಿದ್ದರಿಂದ ಐಪಿಎಲ್ ಅನ್ನು ಅಮಾನತುಮಾಡಿರುವ ನಿರ್ಧಾರ ಒಳ್ಳೆಯದು,' ಎಂದು ಟೈಮ್ಸ್ ಆಫ್ ಇಂಡಿಯಾ ಕಾಲಮ್‌ನಲ್ಲಿ ಲಕ್ಷ್ಮಣ್ ಹೇಳಿದ್ದಾರೆ.
ಇಂಥ ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯ ಮುಖ್ಯ. ಐಪಿಎಲ್ ಆಮೇಲೆ,' ಎಂದು ಲಕ್ಷ್ಮಣ್ ತಿಳಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿಯ ಡೇನಿಯಲ್ ಸ್ಯಾಮ್ಸ್, ಡೆಲ್ಲಿಯ ಅಕ್ಷರ್ ಪಟೇಲ್, ಕೆಕೆಆರ್‌ನ ನಿತೀಶ್ ರಾಣಾ, ಆರ್‌ಸಿಬಿಯ ದೇವದತ್ ಪಡಿಕ್ಕಲ್, ಮುಂಬೈ ವಿಕೆಟ್ ಕೀಪಿಂಗ್ ಮಾರ್ಗದರ್ಶಕ ಕಿರಣ್ ಮೋರೆಗೆ ಕೊರೊನಾ ಪಾಸಿಟಿವ್ ಬಂದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications