For Quick Alerts
ALLOW NOTIFICATIONS  
For Daily Alerts
 

ನಾನು ಜೀವಂತವಾಗಿ, ಆರೋಗ್ಯವಾಗಿದ್ದೇನೆ: ಸಾವಿನ ಗಾಳಿಸುದ್ದಿಯಿಂದ ಬೇಸರವಾಗಿದೆ ಎಂದ ಹೀತ್ ಸ್ಟ್ರೀಕ್

ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಹೀತ್ ಸ್ಟ್ರೀಕ್ ತಮ್ಮ ಸಾವಿನ ಕುರಿತಾದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದು ಜೀವಂತವಾಗಿದ್ದೇನೆ ಎಂದಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಗಾಳಿಸುದ್ದಿಯಿಂದಾಗಿ ಬೇಸರವುಂಟಾಗಿದೆ ಎಂದಿದ್ದಾರೆ. ಹೀತ್ ಸ್ಟ್ರೀಕ್ ಅವರ ಸಾವಿನ ಕುರಿತಾಗಿ ಅವರ ಸಹ ಆಟಗಾರನಾಗಿದ್ದ ಹೆನ್ರಿ ಒಲೊಂಗಾ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದ ಮಾಹಿತಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವುಂಟಾಗಿತ್ತು.

ಆದರೆ ಅದಾದ ಬಳಿಕ ಒಲೊಂಗಾ ಅವರು ತಮಗೆ ಸ್ವತಃ ಹೀತ್ ಸ್ಟ್ರೀಕ್ ಸಂದೇಶ ಕಳುಹಿಸಿ ತಾನು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೆ ಈ ಹಿಂದಿನ ಟ್ವೀಟ್‌ಅನ್ನು ಡಿಲೀಟ್ ಕೂಡ ಮಾಡಿದ್ದಾರೆ. ಆದರೆ ಅದಾಗಲೇ ಈ ಸುದ್ದಿ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿ ಈ ವಿಚಾರವಾಗಿ ಸ್ವತಃ ಹೀತ್ ಸ್ಟ್ರೀಕ್ ಅವರು ಪ್ರತಿಕ್ರಿತೆ ನೀಡಿದ್ದಾರೆ.

Heath Streak confirms he is Alive and Well said hurt by the news

ಹೀತ್ ಸ್ಟ್ರೀಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿ 'ಮಿಡ್‌-ಡೇ' ವರದಿ ಮಾಡಿದ್ದು ನಾನು ಜೀವಂತವಾಗಿದ್ದು ಆರೋಗ್ಯವಾಗಿದ್ದೇನೆ" ಎಂದು ಹೇಳಿರುವುದಾಗಿ ಉಲ್ಲೇಖಿಸಿದೆ. ವಾಟ್ಸ್‌ಆಪ್ ಸಂದೇಶದಲ್ಲಿ ಹೀತ್ ಸ್ಟ್ರೀಕ್ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಮಾಡಿದೆ.

49ರ ಹರೆಯದ ಹೀತ್ ಸ್ಟ್ರೀಕ್ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಹೀತ್ ಸ್ಟ್ರೀಕ್ "ಈ ಸುದ್ದು ಕೇವಲ ಗಾಳಿ ಸುದ್ದು ಮಾತ್ರವಲ್ಲ ಸುಳ್ಳು ಸುದ್ದಿ. ನಾನು ಆರೋಗ್ಯವಾಗಿ ಜೀವಂತವಾಗಿದ್ದೇನೆ. ನಮ್ಮ ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಯಾರೋ ಒಬ್ಬರು ಹೇಳಿದ ಮಾತನ್ನು ಪರಿಶೀಲಿಸದೆ ಹರಡಬಹುದು ಎಂದು ತಿಳಿದು ನಾನು ತುಂಬಾ ಬೇಸರಗೊಂಡಿದ್ದೇನೆ" ಎಂದು ಹೀತ್ ಸ್ಟ್ರೀಕ್ ಹೇಳಿರುವುದಾಗಿ ಮಿಡ್‌ಡೇ ವರದಿ ಮಾಡಿದೆ.

ಮುಂದುವರಿದು "ಈ ಸುದ್ದಿಯನ್ನು ಹರಡಿದ ಮೂಲಗಳು ಕ್ಷಮೆಯಾಚಿಸಬೇಕು. ನಾನು ಜೀವಂತವಾಗಿದ್ದು ಆರೋಗ್ಯವಾಗಿದ್ದೇನೆ. ಈ ಸುದ್ದಿಯಿಂದ ನಾನು ಬೇಸರಗೊಂಡಿದ್ದೇನೆ" ಎಂದು ವಾಟ್ಸ್‌ಆಪ್ ಸಂದೇಶದಲ್ಲಿ ಪ್ರಕ್ರಿಯೆ ನೀಡಿರುವುದಾಗಿ ಮಿಡ್‌ಡೇ ವರದಿ ಮಾಡಿದೆ.

ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ. 2000-2004ರ ಅವಧಿಯಲ್ಲಿ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದರು. ಒಟ್ಟಾರೆಯಾಗಿ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು 65 ಟೆಸ್ಟ್ ಪಂದ್ಯಗಳನ್ನು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬಂಟಿಯಾಗಿ ಮೇಲಕ್ಕೆತ್ತುವ ಪ್ರಯತ್ನ ನಡೆಸಿದ್ದರು ಹೀತ್ ಸ್ಟ್ರೀಕ್.

ಹೀತ್ ಸ್ಟ್ರೀಕ್ ಬೌಲಿಂಗ್ ಮೂಲಕ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಸಾಕಷ್ಟು ಕೊಡುಗೆ ನೀಡಿ ಗಮನಸೆಳೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್ ಆಡಿರುವ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 1990 ಟೆಸ್ಟ್ ರನ್ ಬಾರಿಸಿದ್ದರೆ ಏಕದಿನ ಮಾದರಿಯಲ್ಲಿ 2943 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಔಟಾಗದೆ 127 ರನ್ ಗಳಿಸಿದ್ದು ಅವರ ಏಕೈಕ ಟೆಸ್ಟ್ ಶತಕವಾಗಿದೆ. ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 28.14ರ ಸರಾಸರಿಯಲ್ಲಿ 216 ವಿಕೆಟ್‌ಗಳನ್ನು ಪಡೆದಿದ್ದರೆ ಏಕದಿನ ಮಾದರಿಯಲ್ಲಿ 29.8 ಸರಾಸರಿಯಲ್ಲಿ 239 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 455 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. 4933 ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆಹಾಕಿದ್ದರು.

1993ರಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಾನು ಆಡಿದ ಎರಡನೇ ಟೆಸ್ಟ್ ಪಂದ್ಯ ರಾವಲ್ಪಿಂಡಿ ಟೆಸ್ಟ್‌ನಲ್ಲಿ 8 ವಿಕೆಟ್‌ಗಳನ್ನು ಪಡೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಅಲ್ಲಿಂದ ಬಳಿಕ ಹೀತ್ ಸ್ಟ್ರೀಕ್ ಹಿಂದಿರುಗಿ ನೋಡಿರಲಿಲ್ಲ. ಬೌಲರ್ ಆಗಿ ಮಾತ್ರವಲ್ಲದೆ ಆಲ್‌ರೌಂಡರ್ ಆಗಿ ಜಿಂಬಾಬ್ವೆ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಿದ್ದಾರೆ.

Story first published: Wednesday, August 23, 2023, 13:35 [IST]
Other articles published on Aug 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+