Heinrich Klassen: ದಕ್ಷಿಣ ಆಫ್ರಿಕಾ ಪರ ವಿಶೇಷ ದಾಖಲೆ ಬರೆದ ಹೆನ್ರಿಚ್ ಕ್ಲಾಸೆನ್
ಪ್ರಸ್ತುತ ಸೂರ್ಯಕುಮಾರ್ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರಸಾದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಈಗಾಗಲೇ ಮೊದಲ ಟಿ20 ಪಂದ್ಯ ಗೆದ್ದು ಸರಣಿಯಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಈ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಮತ್ತು ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ವಿಶೇಷ ದಾಖಲೆ ಸೃಷ್ಟಿಸಿದ್ದಾರೆ. ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕ್ಲಾಸೆನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಕೇವಲ 25 ರನ್ ಗಳಿಸಿ ಔಟಾದರು. ಆದರೆ ಅವರು ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಮಾಡಿದ್ದಾರೆ.
ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕ್ಲಾಸೆನ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು. ಈ ಮೂಲಕ ಅವರು ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಸೇರಿದಂತೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಕ್ಲಬ್ ಸೇರಿಕೊಂಡರು. ಇದಲ್ಲದೆ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಮತ್ತು ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕ್ಲಾಸೆನ್ 2024ರಲ್ಲಿ ಒಟ್ಟು 53 ಟಿ20 ಪಂದ್ಯಗಳಲ್ಲಿ 100 ಸಿಕ್ಸರ್ ಬಾರಿಸಿದ್ದಾರೆ. ಕ್ರಿಸ್ ಗೇಲ್ 2011, 2012, 2013, 2015, 2016, 2017 ಕ್ಯಾಲೆಂಡರ್ ವರ್ಷಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್‌ನ ಮತ್ತೊರ್ವ ಆಲ್‌ರೌಂಡರ್ ಆಂಡ್ರೆ ರಸೆಲ್ 2019ರಲ್ಲಿ 46 ಟಿ20 ಪಂದ್ಯಗಳಲ್ಲಿ 101 ಸಿಕ್ಸರ್ ಸಿಡಿಸಿದ್ದಾರೆ. ನಿಕೋಲಸ್ ಪೂರನ್ 2024ರಲ್ಲಿ ಇದುವರೆಗೆ ಆಡಿರುವ 68 ಟಿ20 ಪಂದ್ಯಗಳಲ್ಲಿ 165 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
2024ರಲ್ಲಿ ಕ್ಲಾಸೆನ್ ಹಲವು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ಮಿಂಚಿದ್ದಾರೆ. ಡರ್ಬನ್ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ಟೈಟಾನ್ಸ್ ಮತ್ತು ಸಿಯಾಟಲ್ ಓರ್ಕಾಸ್ ತಂಡಗಳ ಪರ ಆಡಿದ್ದಾರೆ. ಡರ್ಬನ್ ಸೂಪರ್ ಜೈಂಟ್ಸ್ ಪರ 13 ಟಿ20 ಪಂದ್ಯಗಳಲ್ಲಿ 37 ಸಿಕ್ಸರ್, ಸನ್ ರೈಸರ್ಸ್ ಹೈದರಾಬಾದ್ ಪರ 16 ಪಂದ್ಯಗಳಲ್ಲಿ 38 ಸಿಕ್ಸರ್, ಸಿಯಾಟಲ್ ಓರ್ಕಾಸ್ ಪರ 3 ಸಿಕ್ಸರ್ ಹಾಗೂ ಟೈಟಾನ್ಸ್ ಪರ 8 ಸಿಕ್ಸರ್ ಸಿಡಿಸಿದ್ದಾರೆ.
ಐಪಿಎಲ್ 2023ರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿದ ಕ್ಲಾಸೆನ್, ಐಪಿಎಲ್ 2025ರ ಮೆಗಾ ಹರಾಜಿಗೆ ಮುನ್ನ ಅವರನ್ನು 23 ಕೋಟಿ ರೂ.ಗೆ ಹೈದರಾಬಾದ್ ಫ್ರಾಂಚೈಸಿ ಉಳಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಈಗ ಅವರು ಉಳಿದ ಮೂರು ಟಿ20 ಪಂದ್ಯಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸುವ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications