SRH vs KKR: ಕ್ಲಾಸೆನ್ ವೇಗದ ಶತಕ: ಸನ್‌ರೈಸರ್ಸ್ ಗೆಲುವಿನ ವಿದಾಯ
ಭರವಸೆಯ ಬ್ಯಾಟರ್ ಹ್ಯಾನ್ರಿಕ್ ಕ್ಲಾಸೇನ್ ಬಾರಿಸಿದ ಶತಕ ಹಾಗೂ ಆರಂಭಿಕ ಟ್ರಾವಿಸ್ ಹೆಡ್ ಸಿಡಿಸಿದ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದೆ. ಈ ಮೂಲಕ 18ನೇ ಆವೃತ್ತಿಯ ಲೀಗ್‌ಗೆ ಕಳೆದ ಬಾರಿಯ ರನ್ನರ್ ಅಪ್ ಹೈದರಾಬಾದ್ ಗೆಲುವಿನ ವಿದಾಯ ಹೇಳಿದೆ. ಕೆಕೆಆರ್ ಕೊನೆಯ ಪಂದ್ಯದಲ್ಲೂ ನಿರಾಸೆ ಮೂಡಿಸಿದೆ.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ ಸನ್ 3 ವಿಕೆಟ್‌ಗೆ 278 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹಾಲಿ ಚಾಂಪಿಯನ್ ಕೆಕೆಆರ್ ಆಡಿದ 18.3 ಓವರ್‌ಗಳಲ್ಲಿ 168 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಹೈದರಾಬಾದ್ ಆಡಿದ 14 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 13 ಅಂಕಗಳನ್ನು ಕಲೆ ಹಾಕಿದೆ. ಕೆಕೆಆರ್ 12 ಅಂಕಗಳೊಂದಿಗೆ ಟೂರ್ನಿಗೆ ಗುಡ್ ಬಾಯ್ ಹೇಳಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭ ಭರ್ಜರಿಯಾಗಿತ್ತು. ಸನ್ ತಂಡ ತನ್ನ ಘನತೆಗೆ ತಕ್ಕ ಆಟವನ್ನೇ ಆಡಿತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೊಡಿ ಮೊದಲ ವಿಕೆಟ್‌ಗೆ 6.5 ಓವರ್‌ಗಳಲ್ಲಿ 92 ರನ್ ಕಲೆ ಹಾಕಿತು. ಅಭಿಷೇಕ್ ಶರ್ಮಾ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 32 ರನ್ ಸಿಡಿಸಿ ಸುನಿಲ್ ನರೈನ್‌ಗೆ ವಿಕೆಟ್ ಒಪ್ಪಿಸಿದರು.
ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಹೆನ್ರಿಕ್ ಕ್ಲಾಸೆನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಇವರು ಆರಂಭಿಕ ಟ್ರಾವಿಸ್ ಹೆಡ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 35 ಎಸೆತಗಳಲ್ಲಿ 83 ರನ್ ಸೇರಿಸಿತು. ಈ ಜೋಡಿಯ ಆಟಕ್ಕೂ ನರೈನ್ ಬ್ರೇಕ್ ಹಾಕಿದರು. ಈ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಟ್ರಾವಿಸ್ ಹೆಡ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿದರು.
ಹ್ಯಾನ್ರಿಕ್ ಕ್ಲಾಸೆನ್ ಅಬ್ಬರ
ಹ್ಯಾನ್ರಿಕ್ ಕ್ಲಾಸೆನ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡು ಬ್ಯಾಟ್ ಮಾಡಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ಇವರನ್ನು ಸೇರಿಕೊಂಡ ಇಶಾನ್ ಕಿಶನ್ ನಾಲ್ಕನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 83 ರನ್ ಸೇರಿಸಿತು. ಇಶಾನ್ 29 ರನ್ ಸಿಡಿಸಿ ಔಟ್ ಆದರು.

ಹ್ಯಾನ್ರಿಕ್ ಕ್ಲಾಸೆನ್ ಅಮೋಘ ಬ್ಯಾಟಿಂಗ್ ನಡೆಸಿದರು. ಕ್ಲಾಸೆನ್ ತಮ್ಮ ಐಪಿಎಲ್ ವೃತ್ತಿ ಜೀವನದ ಎರಡನೇ ಶತಕ ಬಾರಿಸಿದರು. ಇವರು 39 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಸಿಡಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು 37 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.
ಕೆಕೆಆರ್ ಕಳಪೆ ಆರಂಭ
ಸವಾಲಿನ ಗುರಿಯನ್ನು ಹಿಂಬಾಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಕೆಕೆಆರ್ ತಂಡದ ಸ್ಟಾರ್ ಆಟಗಾರರಾದ ಕ್ವಿಂಟನ್ ಡಿಕಾಕ್, ಸುನಿಲ್ ನರೈನ್ (31) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಅಜಿಂಕ್ಯ ರಹಾನೆ (15), ಅಂಗ್‌ಕ್ರಿಷ್ ರಂಘುವಂಶಿ (14), ರಮಣದೀಪ್ ಸಿಂಗ್ (13), ಹರ್ಷಿತ್ ರಾಣಾ (34), ಮನೀಶ್ ಪಾಂಡೆ (37) ರನ್ ಕಲೆ ಹಾಕುವಲ್ಲಿ ವಿಫಲರಾದರು. ಸನ್ ತಂಡದ ಪರ ಈಶಾನ್ ಮಲಿಂಗ್, ಹರ್ಷಾ ದುಬೆ, ಜಯದೇವ್ ಉನಾದ್ಕಟ್ ತಲಾ ಮೂರು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications