Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಿಇಒ ರಾಜೀನಾಮೆ

Hemant Dua steps down as Delhi Daredevils CEO

ನವದೆಹಲಿ, ಆಗಸ್ಟ್ 28: ಸುದೀರ್ಘ ಕಾಲದಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಿಇಒ ಹೇಮಂತ್ ದುವಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಜೆಎಸ್‌ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಪ್ರಕಟಿಸಿದೆ.

ದುವಾ ಅವರು ಸೆಪ್ಟೆಂಬರ್ 1ರಿಂದ ಜೆಎಸ್‌ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್‌ನ ಮಂಡಳಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಿಇಒ ಆಗಿ ಆರು ವರ್ಷದ ಅವಧಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಒಮ್ಮೆಯೂ ನಾಕೌಟ್ ಹಂತಕ್ಕೆ ತಲುಪಲು ಸಾಧ್ಯವಾಗದೆ ಇರುವುದು ಈ ನಿರ್ಧಾರ ಕೈಗೊಳ್ಳಲು ಕಾರಣ ಎನ್ನಲಾಗಿದೆ.

ಯುವರಾಜ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಫಾರ್ಮ್‌ನಲ್ಲಿಲ್ಲದ ಕ್ರಿಕೆಟಿಗರಿಗೆ ದುಬಾರಿ ಹಣ ನೀಡಿ ಖರೀದಿ ಮಾಡಿದ್ದ ನಿರ್ಧಾರ ಕಟು ಟೀಕೆಗಳಿಗೆ ಒಳಗಾಗಿತ್ತು. 2018ರ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ಕಳಪೆ ಪ್ರದರ್ಶನ ನೀಡಿತ್ತು.

ಕೆಲವು ಕಾಲಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ನನ್ನ ಜೀವನದ ಭಾಗವಾಗಿತ್ತು. ಪ್ರಾಂಚೈಸಿ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಫ್ರಾಂಚೈಸಿಯ ಸುಧಾರಣೆಗಾಗಿ ನಾನು ಸದಾ ಲಭ್ಯವಿರುತ್ತೇನೆ. ಡಿಡಿ ಮತ್ತು ಅದರ ಹೊಸ ಮ್ಯಾನೇಜ್‌ಮೆಂಟ್‌ಗೆ ಒಳಿತಾಗಲಿ ಮತ್ತು ನಮ್ಮದೇ ನಗರ ದೆಹಲಿಗೆ ಟ್ರೋಫಿಯನ್ನು ಗೆದ್ದು ತರುವಂತಾಗಲಿ ಎಂದು ಹೇಮಂತ್ ಟ್ವೀಟ್ ಮಾಡಿದ್ದಾರೆ.

ತಂಡದ ಆಡಳಿತದಲ್ಲಿನ ಬದಲಾವಣೆಯು ಕೋಚ್ ಸ್ಥಾನದ ಮೇಲೆ ಪರಿಣಾಮ ಬೀರಿಲ್ಲ. ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಎರಡು ವರ್ಷದ ಒಪ್ಪಂದದ ಅನ್ವಯ 2019ರವರೆಗೂ ಕಾರ್ಯನಿರ್ವಹಿಸಲಿದ್ದಾರೆ.

ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸಿಇಒ ಅಮೃತ್ ಥಾಮಸ್ ಮತ್ತು ಮುಖ್ಯ ಕೋಚ್ ಡೇನಿಯಲ್ ವೆಟೋರಿ ಅವರನ್ನುಬದಲಿಸುವುದಾಗಿ ಘೋಷಿಸಿತ್ತು. ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಆರನೇ ಸ್ಥಾನ ಪಡೆದಿತ್ತು.

Story first published: Tuesday, August 28, 2018, 18:44 [IST]
Other articles published on Aug 28, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+