ಟಿ20 ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್ ಯಾಕಿರಬೇಕು?: ಇಲ್ಲಿದೆ ಕಾರಣ
ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಏಷ್ಯಾ ಕಪ್ 2022 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಪಂತ್ ಆಯ್ಕೆಯಾಗಿರಲಿಲ್ಲ ಬದಲಾಗಿ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲಾಗಿತ್ತು. ಆದರೆ, ರವೀಂದ್ರ ಜಡೇಜಾ ಗಾಯದ ಕಾರಣದಿಂದ ಹೊರಗುಳಿದ ನಂತರ ರಿಷಬ್ ಪಂತ್‌ಗೆ ಆದ್ಯತೆ ನೀಡಲಾಯಿತು. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರ ಇರಬೇಕು ಎನ್ನುವುದು ಇದರ ಹಿಂದಿನ ತರ್ಕವಾಗಿತ್ತು.
ಆದರೂ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಪಂತ್ ವಿಫಲರಾದರು. ತಾವು ಆಡಿದ ಪಂದ್ಯಗಳಲ್ಲಿ ಕ್ರಮವಾಗಿ 14, 17 ಮತ್ತು 20 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಇಂಗ್ಲೆಂಡ್ ಪ್ರವಾಸದ ವೇಳೆ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸುವ ಮೂಲಕ ಅವರು ಭರವಸೆ ಮೂಡಿಸಿದ್ದರು, ಆದರೆ ಏಷ್ಯಾಕಪ್‌ನಲ್ಲಿ ಅದೇ ಹಳೆಯ ಕಥೆ ಮುಂದುವರೆಸಿದ್ದಾರೆ. ಆದರೂ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಬೇಕು ಎಂದು ಕ್ರಿಕೆಟ್ ತಜ್ಞರು ಹೇಳುತ್ತಿದ್ದಾರೆ, ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

ಟಿ20 ಮಾದರಿಯಲ್ಲಿ ಉತ್ತಮವಾಗಿಲ್ಲ ಪಂತ್ ಆಟ
58 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ರಿಷಬ್ ಪಂತ್ 23.94 ಸರಾಸರಿಯಲ್ಲಿ 934 ರನ್ ಗಳಿಸಿದ್ದಾರೆ. 126.21 ಸ್ಟ್ರೈಕ್ ರೇಟ್ ಹೊಂದಿರುವ ಪಂತ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಹಲವರು ರಿಷಬ್ ಪಂತ್ ಬದಲಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ರಿಷಬ್ ಪಂತ್‌ರನ್ನು ಯಾಕೆ ಆಯ್ಕೆ ಮಾಡಬೇಕು ಎಂದು ಹಲವು ಕ್ರಿಕೆಟ್ ತಜ್ಞರು ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. ಏಷ್ಯಾಕಪ್‌ನಲ್ಲಿ ವಿಫಲರಾಗಿದ್ದರೂ ವಿಶ್ವಕಪ್‌ನಲ್ಲಿ ಪಂತ್ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Asia Cup 2022: ಪಂದ್ಯಾವಳಿಯ ಅತಿ ಹೆಚ್ಚು ರನ್-ಸ್ಕೋರರ್ & ವಿಕೆಟ್ ಟೇಕರ್‌ಗಳ ಪಟ್ಟಿ

ಆಸ್ಟ್ರೇಲಿಯಾದಲ್ಲಿ ರಿಷಬ್ ಪಂತ್ ಉತ್ತಮ ಪ್ರದರ್ಶನ
ರಿಷಬ್ ಪಂತ್ ಬ್ಯಾಟರ್ ಆಗಿ ಸಾಬೀತಾದ ಮ್ಯಾಚ್ ವಿನ್ನರ್. ಅತ್ಯಂತ ಕಠಿಣ ಸಂದರ್ಭಗಳಲ್ಲಿ ಮತ್ತು ಬ್ಯಾಟರ್‌ಗಳಿಗೆ ಅತ್ಯಂತ ಸವಾಲಿನ ವಾತಾವರಣದಲ್ಲಿ ರನ್ ಗಳಿಸಿದ್ದಾರೆ. ಪಂತ್ ಇದುವರೆಗೆ 5 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ, ಅವುಗಳಲ್ಲಿ ನಾಲ್ಕು ಶತಕಗಳು ವಿದೇಶಗಳಲ್ಲಿ ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಎರಡು, ಆಸ್ಟ್ರೇಲಿಯಾದಲ್ಲಿ ಒಂದು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಒಂದು ಶತಕ ಬಂದಿದೆ.
ರಿಷಬ್ ಪಂತ್ ಹಿಂದಿನ ಆಸ್ಟ್ರೇಲಿಯಾ ಭೇಟಿಯ ಸಮಯದಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಡ್ನಿ ಟೆಸ್ಟ್‌ನಲ್ಲಿ 97 ರನ್ ಗಳಿಸಿ ಆಸ್ಟ್ರೇಲಿಯಾ ಪಾಳದಯಲ್ಲಿ ಭೀತಿ ಹುಟ್ಟಿಸಿದ್ದರು. ನಂತರ ಬ್ರಿಸ್ಬೇನ್ ಟೆಸ್ಟ್‌ನಲ್ಲಿ 89 ರನ್ ಗಳಿಸಿದ ಪಂತ್ ಭಾರತ ಗೆಲ್ಲಲು ಕಾರಣರಾಗಿದ್ದರು.
ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ರಿಷಬ್ ಪಂತ್ ಅಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.

ಕಠಿಣ ಪರಿಸ್ಥಿತಿಯಲ್ಲೂ ಬ್ಯಾಟಿಂಗ್
ರಿಷಬ್ ಪಂತ್ ಭಾರತಕ್ಕಾಗಿ ಹಲವಾರು ಸಂದರ್ಭಗಳಲ್ಲಿ ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಎಂದು ಸಾಬೀತುಪಡಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ, ತಂಡ ಒತ್ತಡದಲ್ಲಿದ್ದಾಗ ಕೂಡ ರಿಷಬ್ ಪಂತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ.
2018 ರ ಓವಲ್ ಟೆಸ್ಟ್‌ನಲ್ಲಿ ಅವರ ಟೆಸ್ಟ್ ಶತಕದೊಂದಿಗೆ ಪ್ರಾರಂಭವಾಯಿತು, ನಂತರ 2019ರಲ್ಲಿ ಸಿಡ್ನಿಯಲ್ಲಿ ಅಜೇಯ 159 ರನ್ ಗಳಿಸಿತು. ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದರು. 2022ರ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಅವರು ಶತಕ ಗಳಿಸಿದ್ದು ಕೂಡ ಒತ್ತಡದ ಸಂದರ್ಭದಲ್ಲಿಯೇ.
ಇಂಗ್ಲೆಂಡ್ ವಿರುದ್ಧದ ಸರಣಿಯ ನಿರ್ಣಾಯಕ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಅತ್ಯುತ್ತಮ ಆಟವಾಡಿದ್ದರು. 260 ರನ್ ಚೇಸ್ ಮಾಡಬೇಕಾದ ಸಂದರ್ಭದಲ್ಲಿ ಶತಕ ಬಾರಿಸಿದ್ದ ಅವರು, ಪಂದ್ಯವನ್ನು ಗೆಲ್ಲಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರ ಬೇಕು
ದಿನೇಶ್ ಕಾರ್ತಿಕ್ ಮೊದಲ ಆಯ್ಕೆಯಾಗಿದ್ದರು, ಟಿ20 ವಿಶ್ವಕಪ್‌ನಲ್ಲಿ ಪಂತ್‌ಗೆ ಮಣೆ ಹಾಕಲು ಮುಖ್ಯ ಕಾರಣ ಆತ ಎಡಗೈ ಬ್ಯಾಟರ್ ಎನ್ನುವುದು. ಭಾರತದ ಅಗ್ರ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟರ್ ಇಲ್ಲ.
ಸದ್ಯ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದಿದ್ದು, ರಿಷಬ್ ಪಂತ್‌ಗೆ ಆದ್ಯತೆ ನೀಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಲಗೈ ಆಟಗಾರರಿಗೆ ಹೋಲಿಸಿದರೆ ಎಡಗೈ ಆಟಗಾರನು ಲೆಗ್-ಸ್ಪಿನ್ನರ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications