WPL: ಭಾರತೀಯ ಆಟಗಾರ್ತಿಯರೇ ಪ್ರಮುಖ ಆಕರ್ಷಣೆ, ಹರಾಜಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಮಹಿಳಾ ಐಪಿಎಲ್ ಮಿನಿ ಹರಾಜು ಮುಂಬೈನಲ್ಲಿ ಇಂದು ನಡೆಯಿತು. ಲೀಗ್‌ನ ಎಲ್ಲ ಐದು ತಂಡಗಳು ಒಟ್ಟು 17.65 ಕೋಟಿ ರೂಪಾಯಿಯೊಂದಿಗೆ ಆಟಗಾರರನ್ನು ಖರೀದಿಸಲು ತಯಾರಾಗಿದ್ದವು. ಈ ಹಣದಿಂದ ಐದು ಮಾಲೀಕರು ಸೇರಿ ಒಟ್ಟು 30 ಆಟಗಾರರನ್ನು ಖರೀದಿಸಬೇಕಿತ್ತು. ಈ ಹರಾಜಿನಲ್ಲಿ ಮಾಲೀಕರು ಒಟ್ಟು 12.75 ಕೋಟಿ ರೂ. ಖರ್ಚು ಮಾಡಿ ತಮ್ಮಲ್ಲಿರುವ ಖಾಲಿ ಸ್ಲಾಟ್‌ಗಳನ್ನು ಫುಲ್ ಮಾಡಿದವು.
ಮಹಿಳಾ ಆಕ್ಷನ್‌ನಲ್ಲೂ ಅನ್‌ಕ್ಯಾಪ್ಡ್ ಪ್ಲೇಯರ್‌ಗಳಿಗೆ ಭಾರೀ ಮೊತ್ತ ಸಿಕ್ಕಿದೆ. ಇನ್ನು ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಲು ಮಾಲೀಕರು ಮನಸ್ಸು ಮಾಡಲಿಲ್ಲ. ಈ ಹರಾಜಿನ ಅತ್ಯಂತ ಪ್ರಮುಖ ಅಂಶಗಳು ಇಲ್ಲಿವೆ.
ಹರಾಜಿನಲ್ಲಿ ಒಟ್ಟು 21 ಭಾರತೀಯ ಆಟಗಾರ್ತಿಯರು ಹಾಗೂ 9 ವಿದೇಶಿ ಆಟಗಾರ್ತಿಯರು ಹರಾಜು ಆದರು. ಎಲ್ಲ ಐದು ಫ್ರಾಂಚೈಸಿಗಳು ಒಟ್ಟು 12 ಭಾರತೀಯ ಆಟಗಾರ್ತಿಯರು ಹಾಗೂ 6 ವಿದೇಶಿ ಆಟಗಾರ್ತಿಯರಿಗೆ ಮಣೆ ಹಾಕಿದೆ. ಇನ್ನು ಕೆಲವು ಫ್ರಾಂಚೈಸಿಗಳ ಬಳಿ ಒಳ್ಳೆಯ ಮೊತ್ತವನ್ನು ಇನ್ನು ಪರ್ಸ್‌ನಲ್ಲಿ ಉಳಿದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಬಳಿ 5 ಲಕ್ಷ, ಯುಪಿ ಬಳಿ 1.90 ಕೋಟಿ, ಗುಜರಾತ್ ಬಳಿ 1.45 ಕೋಟಿ, ಆರ್‌ಸಿಬಿ ಬಳಿ 1.05 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ 465 ಲಕ್ಷ ಉಳಿದಿದೆ. ಈ ರೀತಿ ಎಲ್ಲ ಫ್ರಾಂಚೈಸಿಗಳ ಪರ್ಸ್‌ನಲ್ಲಿ ಒಟ್ಟು 4.90 ಕೋಟಿ ಉಳಿದಂತಾಗಿದೆ.
ಈ ಆಗಾರ್ತಿಯರಿಗೆ ಕೋಟಿ ಕೋಟಿ ಹಣ
ಈ ಮಿನಿ ಹರಾಜಿನಲ್ಲಿ 5 ಆಟಗಾರ್ತಿಯರು ಕೋಟ್ಯಾಧಿಶರಾಗಿದ್ದಾರೆ. ಭಾರತದ ಕಾಶವಿ ಗೌತಮಿ ಅತಿ ಹೆಚ್ಚು ಹಣಕ್ಕೆ ಬಿಕರಿಯಾದ ಆಟಗಾರ್ತಿ. ಇವರು ತಮ್ಮ ಬೇಸ್ ಪ್ರೈಸ್‌ಗಿಂತಲು 20 ಪಟ್ಟು ಹೆಚ್ಚು ಹಣವನ್ನು ಪಡೆದರು. ಒಬ್ಬ ಅನ್ ಕ್ಯಾಪ್ಡ್ ಆಟಗಾರ್ತಿಗೆ ಇಷ್ಟು ಹಣ ಸಿಕ್ಕಿದ್ದು ಎಲ್ಲರ ಚಿತ್ತವನ್ನು ಕದ್ದಿದೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಏನಾಬೆಲ್ ಸದರ್ಲೆಂಡ್ ಅವರು ಸಹ ಈ ಆಕ್ಷನ್‌ನಲ್ಲಿ ಎರಡು ಕೋಟಿ ಪಡೆಯುವ ಮೂಲಕ ಅತಿ ಹೆಚ್ಚು ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಅನ್‌ಕ್ಯಾಪ್ಡ್ ಭಾರತೀಯ ಆಟಗಾರ್ತಿ ವೃಂದಾ ದಿನೇಶ್ 1.30 ಕೋಟಿ ರೂ., ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಶಬನೀಮ್ ಇಸ್ಲಾಇಲ್ 1.2 ಕೋಟಿ ರೂ. ಆಸ್ಟ್ರೇಲಿಯಾದ ಬ್ಯಾಟರ್ ಕಿಬಿ ಲಿಚ್‌ಫಿಲ್ಡ್ ಒಂದು ಕೋಟಿಯನ್ನು ಪಡೆದು ಗುಜರಾತ್ ಜೈಂಟ್ಸ್ ತಂಡವನ್ನು ಸೇರಿದ್ದಾರೆ.
12 ಆಟಗಾರ್ತಿಯರು ತಲಾ 10 ಲಕ್ಷಗಳು ಮತ್ತು ಒಂದು ಆಟಗಾರ್ತಿ 15, 20 ಲಕ್ಷ ರೂ ಪಡೆದರು. 9 ಆಟಗಾರ್ತಿಯರ ಮೇಲೆ ಫ್ರಾಂಚೈಸಿ 30 ಲಕ್ಷ ಖರ್ಚು ಮಾಡಿದೆ. ಇನ್ನು ಐದು ಆಟಗಾರ್ತಿಯರು ಒಟ್ಟು ಕೋಟಿ ರೂ. ಗೂ ಹೆಚ್ಚು ಹಣವನ್ನು ಪಡೆದಿದ್ದಾರೆ.
ಅನ್‌ಸೋಲ್ಡ್ ಆದ ಆಟಗಾರ್ತಿಯರು
ಈ ಮಹಿಳಾ ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಬೇಸ್ ಪ್ರೈಸ್ ಹೊಂದಿರುವ ಆಟಗಾರ್ತಿಯರಿಗೆ ಫ್ರಾಂಚೈಸಿ ಮಣೆ ಹಾಕಲಿಲ್ಲ. ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಡೆಂಡ್ರಾ ಡ್ರಾಟಿನ್ ಹಾಗೂ ಆಸ್ಟ್ರೇಲಿಯಾದ ಕಿಮ್ ಗರ್ತ್ ಅವರ ಮೂಲ ಬೆಲೆ 50 ಲಕ್ಷ ಆಗಿತ್ತು. ಇವರನ್ನು ಬಿಟ್ಟರೆ 40 ಲಕ್ಷ ಬೇಸ್ ಪ್ರೈಸ್‌ನ ನಾಲ್ಕು ಆಟಗಾರ್ತಿಯರು ಅನ್‌ಸೋಲ್ಡ್ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications