2022ರಲ್ಲಿ ನಾಯಕತ್ವದಿಂದ ಕೆಳಗಿಳಿದ ಐವರು ಕ್ರಿಕೆಟಿಗರು ಇವರು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ರಾಷ್ಟ್ರವನ್ನು ಮುನ್ನಡೆಸಬೇಕು ಎಂಬುದು ಬಹುತೇಕ ಕ್ರೀಡಾಪಟುಗಳ ಕನಸಾಗಿರುತ್ತದೆ. ಇದು ಕ್ರಿಕೆಟ್‌ನಲ್ಲಿಯೂ ಹೊರತಾಗಿರುವುದಿಲ್ಲ. ಎಲ್ಲಾ ಕ್ರಿಕೆಟ್ ಆಟಗಾರರು ಕುಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ತಂಡವನ್ನು ಮುನ್ನಡೆಸಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಆದರೆ ಅದು ಕೆಲವರ ಪಾಲಿಗಷ್ಟೇ ಸಾಧ್ಯವಾಗಿರುತ್ತದೆ. ಕೆಲ ಆಟಗಾರರು ತಂಡವನ್ನು ಮುನ್ನಡೆಸಲು ಸಮರ್ಥರಾಗಿದ್ದರೂ ಅಂತಾ ಅವಕಾಶಗಳು ಆ ಆಟಗಾರರ ಪಾಲಿಗೆ ಬಂದಿರುವುದಿಲ್ಲ. ಅಂಥಾ ಅನೇಕ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿದೆ.
ಇನ್ನು ಕೆಲ ಆಟಗಾರರು ತಂಡದ ನಾಯಕತ್ವ ವಹಿಸಿಕೊಂಡ ನಂತರ ಆ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗುತ್ತಾರೆ. ಕೆಲ ಬಾರಿ ನಾಯಕನಾದ ಬಳಿಕ ಆಟಗಾರರು ತಮ್ಮ ವೈಯಕ್ತಿಕ ಪ್ರದರ್ಶನದಲ್ಲಿ ಹಿನ್ನಡೆ ಅನುಭವಿಸುತ್ತಾರೆ. ನಾಯಕತ್ವದ ಒತ್ತಡವನ್ನು ಕೆಲವರಿಂದ ನಿಭಾಯಿಸುವುದು ಅಸಾಧ್ಯವಾಗುತ್ತದೆ. ಕ್ರಿಕೆಟ್ ಇತಿಹಾಸದಲ್ಲಿ ಹೀಗೆ ನಾನಾ ಕಾರಣಗಳಿಂದ ನಾಯಕತ್ವದಿಂದ ಕೆಳಗಿಳಿದ ಸಾಕಷ್ಟು ಶ್ರೇಷ್ಠ ಆಟಗಾರರನ್ನು ಕಂಡಿದ್ದೇವೆ.
2022ರಲ್ಲಿ ಕೂಡ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಕೆಲ ಪ್ರಮುಖ ತಂಡಗಳ ನಾಯಕರು ನಾನಾ ಕಾರಣಗಳಿಂದಾಗಿ ನಾಯಕತ್ವದ ಜವಾಬ್ಧಾರಿಯಿಮದ ಕೆಳಗಿಳಿದಿದ್ದಾರೆ. ಹಾಗಾದರೆ ಆ ಐವರು ಆಟಗಾರರು ಯಾರು? ಮುಂದೆ ಓದಿ..

ಸ್ಕಾಟ್ಲೆಂಡ್ ನಾಯಕ ಕೈಲ್ ಕೋಟ್ಜರ್
ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ನಾಯಕನಾಗಿದ್ದ ಕೈಲ್ ಕೋಟ್ಜರ್ ಸುದೀರ್ಘ ಕಾಲದಿಂದ ಸ್ಕಾಟ್ಲೆಂಡ್ ತಂಡದ ನಾಯಕನಾಗಿ ಮುನ್ನಡೆಸಿದ್ದಾರೆ. ಕಳೆದ ವರ್ಷ ಕೈಲ್ ಕೋಟ್ಜರ್ ಐಸಿಸಿ ದಶಕದ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಗೆ ಭಾಜನವಾಗಿದ್ದರು. ಸ್ಕಾಟ್ಲೆಂಟ್ ತಂಡವನ್ನು ಟಿ20 ವಿಶ್ವಕಪ್‌ನಲ್ಲಿಯೂ ಅವರು ಮುನ್ನಡೆಸಿದ್ದರು. ಇದೀಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ತಂಡದ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾವನ್ನು ಸುದೀರ್ಘ ಕಾಲದಿಂದ ಮೂರು ಮಾದರಿಯಲ್ಲಿಯೂ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ ಬಳಿಕ ಭಾರತ ವೈಟ್‌ಬಾಲ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಅದಾದ ಬಳಿಕ ಟೆಸ್ಟ್ ತಂಡದ ನಾಯಕನಾಗ ಮುಂದುವರಿದಿದ್ದ ಕೊಹ್ಲಿ ಕಳೆದ ದಕ್ಷಿಣ ಆಪ್ರಿಕಾ ವಿರುದ್ಧಧ ಸರಣಿಯ ಮುಕ್ತಾಯದ ಬಳಿಕ ದಿಢೀರ್ ಆಗಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದರು.

ನಿವೃತ್ತಿ ಘೋಷಿಸಿ ತಂಡದ ನಾಯಕತ್ವದಿಂದ ಕೆಳಗಿಳಿದ ಪೊಲಾರ್ಡ್
ವೆಸ್ಟ್ ಇಂಡೀಸ್ ತಂಡದ ನಾಯಕನಾಗಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮುನ್ನಡೆಸುತ್ತಿದ್ದ ಕಿರಾನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಅಂತ್ಯಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪೊಲಾರ್ಡ್ ತಮ್ಮ ನಿವೃತ್ತಿ ಘೋಷನೆ ಮಾಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ತಮಡದ ನಾಯಕತ್ವ ಕೂಡ ಬದಲಾಗಿದೆ. ಯುವ ಆಟಗಾರ ನಿಕೋಲಸ್ ಪೂರನ್ ವೆಸ್ಟ್ ಇಂಡಿಸ್ ತಂಡದ ನಾಯಕತ್ವದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿ ಮಿಂಚಿರುವ ಪೊಲಾರ್ಡ್ ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿದ್ದರು. ಈ ಬಾರಿಯ ಐಪಿಎಲ್‌ನಲ್ಲಿಯೂ ಪೊಲಾರ್ಡ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಲೀಗ್ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ನಾಯಕನಾಗಿದ್ದ ಜೋ ರೂಟ್
ಇನ್ನು ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕನಾಗಿದ್ದ ಜೋ ರೂಟ್ ಕೂಡ ಈ ವರ್ಷ ನಾಯಕತ್ವದಿಂದ ಕೆಳಗಿಳಿದ ಆಟಗಾರರ ಪಟ್ಟಿಯಲ್ಲಿದ್ದಾರೆ. ಜೋ ರೂಟ್ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಪ್ರದರ್ಶನ ಕಳಪೆಯಾಗಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್ ಸರಣಿ ಹಾಗೂ ವೆಸ್ಟ್ ಇಮಡೀಸ್ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಿತ್ತು. ಈ ಸೋಲಿನ ಜವಾಬ್ಧಾರಿ ವಹಿಸಿಕೊಂಡ ಜೋ ರೂಟ್ ಟೆಸ್ಟ್ ತಮಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಬಾಂಗ್ಲಾ ನಾಯಕ ಮಾಮಿನುಲ್ ಹಕ್
ಇನ್ನು ಬಾಂಗ್ಲಾದೇಶದ ಟೆಸ್ಟ್ ತಂಡದ ನಾಯಕನಾಗಿದ್ದ ಮಾಮಿನುಲ್ ಹಕ್ ಇತ್ತೀಚೆಗಷ್ಟೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಹಕ್ ನೇತೃತ್ವದಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವನ್ನು ಸಾಧಿಸಿತ್ತು. ಆದರೆ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಮಾಮಿನುಲ್ ಹಕ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ನಾಯಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಅಸಾಧ್ಯವಾಗುತ್ತಿದ್ದು ವೈಯಕ್ತಿಕ ಪ್ರದರ್ಶನದ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಾರಣವನ್ನು ಮುಂದಿಟ್ಟು ಹಕ್ ಟೆಸ್ಟ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಇದೀಗ ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ ಆಯ್ಕೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications