Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಅತಿಹೆಚ್ಚು ಸಿಕ್ಸರ್ ಬಾರಿಸಿಕೊಂಡಿರುವ ಬೌಲರ್ ಯಾರು ಗೊತ್ತಾ?

Here is the list of bowlers who conceded most sixes in IPL

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಉಳಿದಿರುವ 31 ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ಐಪಿಎಲ್ ಮೊಟಕುಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ನಿರ್ಮಾಣವಾಗಿರುವ ಹಲವಾರು ದಾಖಲೆಗಳ ಚರ್ಚೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಆಟಗಾರರು ನಿರ್ಮಿಸಿರುವ ಬೇಡವಾದ ದಾಖಲೆಗಳ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿವೆ. ಆಟಗಾರರು ತಮ್ಮ ಹೆಸರಿಗೆ ಬರೆದುಕೊಂಡಿರುವ ಬೇಡವಾದ ದಾಖಲೆಗಳ ಪೈಕಿ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿಕೊಂಡ ಬೌಲರ್ ದಾಖಲೆ ಕೂಡ ಒಂದು.

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಅತಿಹೆಚ್ಚು ಸಿಕ್ಸರ್ ಬಾರಿಸಿಕೊಂಡು ತಂಡವನ್ನು ಒತ್ತಡಕ್ಕೆ ಸಿಲುಕಿಸಿ, ದುಬಾರಿ ಎನಿಸಿಕೊಂಡಿರುವ ಬೌಲರ್‌ಗಳೆಂದರೆ : ಪಿಯೂಷ್ ಚಾವ್ಲಾ 181, ಅಮಿತ್ ಮಿಶ್ರಾ 175, ರವೀಂದ್ರ ಜಡೇಜಾ 156, ಯುಜುವೇಂದ್ರ ಚಹಾಲ್ 146 ಹಾಗೂ ಹರ್ಭಜನ್ ಸಿಂಗ್ 145 ಸಿಕ್ಸರ್. ಅತಿಹೆಚ್ಚು ಸಿಕ್ಸರ್ ಬಾರಿಸಿಕೊಂಡ ಬೌಲರ್‌ಗಳ ಪಟ್ಟಿಯಲ್ಲಿರುವ ಈ ಟಾಪ್ 5 ಬೌಲರ್‌ಗಳೂ ಸ್ಪಿನ್ನರ್‌ಗಳೇ.

Story first published: Friday, May 14, 2021, 8:55 [IST]
Other articles published on May 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+