For Quick Alerts
ALLOW NOTIFICATIONS  
For Daily Alerts
 

ಮುಂಬೈ ತಂಡದಲ್ಲಿದ್ದಾಗ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಈ ಆಟಗಾರರು ಇಂದು ಸ್ಟಾರ್ ಪ್ಲೇಯರ್ಸ್!

Here is the list of Players who were underutilized by Mumbai Indians

ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿರುವಂತಹ ತಂಡ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ತನ್ನದೇ ಆದ ಹಲವಾರು ದೊಡ್ಡ ದೊಡ್ಡ ದಾಖಲೆಗಳು ಮತ್ತು ಮೈಲಿಗಲ್ಲುಗಳನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ತಂಡ ಇದುವರೆಗೂ ನಡೆದಿರುವ ಟಿ ಟ್ವೆಂಟಿ ಲೀಗ್‌ಗಳಲ್ಲಿ ಒಟ್ಟು 7 ಟ್ರೋಫಿಗಳನ್ನು ಗೆದ್ದು ಬೀಗಿದೆ.

ಹೌದು ಇದುವರೆಗೂ 5 ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಗಳು ಹಾಗೂ 2 ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಮುಂಬೈ ಇಂಡಿಯನ್ಸ್ ತಂಡ ತನ್ನ ಮುಡಿಗೇರಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ಮಾಡಿರುವ ಈ ಸಾಧನೆಯನ್ನು ಇದುವರೆಗೂ ಸಹ ಯಾವುದೇ ಐಪಿಎಲ್ ತಂಡ ಕೂಡ ಮಾಡಿಲ್ಲ. ಇನ್ನು ಮುಂಬೈ ಇಂಡಿಯನ್ಸ್ ತಂಡ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಲು ಕಾರಣ ಅತ್ಯುತ್ತಮ ತಂಡ ರಚನೆ. ಹೌದು ಮುಂಬೈ ಇಂಡಿಯನ್ಸ್ ತಂಡ ತುಂಬ ಬಲಿಷ್ಠವಾಗಿದ್ದು ಎಲ್ಲಾ ವಿಭಾಗಗಳಲ್ಲಿಯೂ ಸಹ ಅತ್ಯುತ್ತಮ ಆಟಗಾರರನ್ನೊಂದಿದೆ, ಹೀಗಾಗಿಯೇ ಮುಂಬೈ ಇಂಡಿಯನ್ಸ್ ತಂಡ ಇಷ್ಟು ದೊಡ್ಡ ಮಟ್ಟದ ದಾಖಲೆಗಳನ್ನು ನಿರ್ಮಿಸಿದೆ.

ಇಷ್ಟೆಲ್ಲಾ ಹೆಸರನ್ನು ಮಾಡಿರುವ ಮುಂಬೈ ಇಂಡಿಯನ್ಸ್ ತಂಡ ಕೆಲ ಪ್ರತಿಭಾನ್ವಿತ ಆಟಗಾರರನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ತಂಡದಿಂದ ಕೈಬಿಟ್ಟಿದೆ. ಹೌದು ಮುಂಬೈ ಇಂಡಿಯನ್ಸ್ ತಂಡ ಕೈಬಿಟ್ಟ ನಂತರ ಐಪಿಎಲ್‌ನಲ್ಲಿ ಉತ್ತಮ ಆಟವನ್ನಾಡಿ ಸ್ಟಾರ್ ಆಟಗಾರರಾಗಿರುವ ಆ 4 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ

1. ಗ್ಲೆನ್ ಮ್ಯಾಕ್ಸ್‌ವೆಲ್

1. ಗ್ಲೆನ್ ಮ್ಯಾಕ್ಸ್‌ವೆಲ್


ಐಪಿಎಲ್ ಇತಿಹಾಸ ಕಂಡ ಸ್ಫೋಟಕ ಆಟಗಾರರ ಪೈಕಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಬ್ಬರು. 2013ರಲ್ಲಿ ಮುಂಬೈ ಇಂಡಿಯನ್ಸ್ ಗ್ಲೆನ್ ಮ್ಯಾಕ್ಸ್‌ವೆಲ್‌ನ್ನು ಖರೀದಿ ಮಾಡಿತ್ತು. ಆದರೆ ಆ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಆಡುವ ಅವಕಾಶ ಪಡೆದುಕೊಂಡಿದ್ದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ನಂತರ 2014ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಮ್ಯಾಕ್ಸ್‌ವೆಲ್‌ನ್ನು ಉಳಿಸಿಕೊಳ್ಳದೆ ಬಿಟ್ಟುಕೊಟ್ಟಿತ್ತು. ಅದೇ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್‌ನ್ನು ಪಂಜಾಬ್ ಕಿಂಗ್ಸ್ ಖರೀದಿಸಿತು. ತದನಂತರ ಗ್ಲೆಮ್ ಮ್ಯಾಕ್ಸ್‌ವೆಲ್ ಎಷ್ಟರ ಮಟ್ಟಿಗೆ ಸದ್ದು ಮಾಡಿದರು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ.

2. ಶ್ರೇಯಸ್ ಗೋಪಾಲ್

2. ಶ್ರೇಯಸ್ ಗೋಪಾಲ್

ಶ್ರೇಯಸ್ ಗೋಪಾಲ್ ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಸ್ಪಿನ್ ಬೌಲರ್. ಪ್ರಸ್ತುತ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರನಾಗಿ ಆಡುತ್ತಿರುವ ಶ್ರೇಯಸ್ ಗೋಪಾಲ್ ತನ್ನ ಮೊದಲ 3 ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. 3 ಆವೃತ್ತಿಗಳಲ್ಲಿ ಶ್ರೇಯಸ್ ಗೋಪಾಲ್ ಮುಂಬೈ ಪರ ಆಡುವ ಅವಕಾಶ ಪಡೆದಿದ್ದು ಕೇವಲ 6 ಪಂದ್ಯಗಳಲ್ಲಿ ಮಾತ್ರ. 2018ರಲ್ಲಿ ಶ್ರೇಯಸ್ ಗೋಪಾಲ್ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದರು, ಅದೇ ಆವೃತ್ತಿಯಲ್ಲಿ ರಾಜಸ್ತಾನ್ ರಾಯಲ್ಸ್ ಅವರನ್ನು ಖರೀದಿಸಿತು. ತದನಂತರ ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ.

3. ಯುಜುವೇಂದ್ರ ಚಹಾಲ್

3. ಯುಜುವೇಂದ್ರ ಚಹಾಲ್

ಯುಜುವೇಂದ್ರ ಚಹಾಲ್ 2011ರಿಂದ 2013ರವರೆಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದರು. ಆದರೆ ಮುಂಬೈ ಪರ ಚಹಾಲ್ ಐಪಿಎಲ್ ಟೂರ್ನಿಗಳಲ್ಲಿ ಆಡುವ ಅವಕಾಶ ಪಡೆದದ್ದು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ. ಆ ಪಂದ್ಯದಲ್ಲಿ ಚಹಾಲ್ 34 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ಕಳಪೆ ಪ್ರದರ್ಶನ ನೀಡಿದರು. ಇನ್ನು 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದಿದ್ದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಚಹಾಲ್ ಮುಂಬೈ ಪರ 3 ಓವರ್‌ ಮಾಡಿ 2 ಪ್ರಮುಖ ವಿಕೆಟ್‍ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೂ ಚಹಾಲ್ ಮುಂಬೈ ಪರ ಹೆಚ್ಚಿನ ಅವಕಾಶಗಳನ್ನು ಪಡೆಯದೇ ನಂತರದ ದಿನಗಳಲ್ಲಿ ತಂಡದಿಂದ ಹೊರಗಿಡಲ್ಪಟ್ಟರು. ತದನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಜುವೇಂದ್ರ ಚಹಾಲ್ ಅವರನ್ನು ಖರೀದಿಸಿತು ಹಾಗೂ ಇಂದಿಗೂ ಸಹ ಚಹಾಲ್ ಬೆಂಗಳೂರು ತಂಡದ ಪರವೇ ಆಟವಾಡುತ್ತಿದ್ದು ತನ್ನ ಅತ್ಯುತ್ತಮ ಪ್ರದರ್ಶನದಿಂದ ಟೀಂ ಇಂಡಿಯಾದಲ್ಲಿಯೂ ಮಿಂಚಿದ್ದಾರೆ.

4. ನಿಕೋಲಸ್ ಪೂರನ್

4. ನಿಕೋಲಸ್ ಪೂರನ್

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಂಕಾಗಿರುವ ನಿಕೋಲಸ್ ಪೂರನ್ ವಿಶ್ವ ಟಿ ಟ್ವೆಂಟಿ ಕ್ರಿಕೆಟ್‌ನ ಡೇಂಜರಸ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಕಾರಣಕ್ಕಾಗಿಯೇ ಪಂಜಾಬ್ ಕಿಂಗ್ಸ್ ತಂಡ ಅವರಿಗೆ ಪದೇ ಪದೇ ಅವಕಾಶಗಳನ್ನು ನೀಡುತ್ತಾ ಬಂದಿದೆ. ಪೂರನ್ ಪಂಜಾಬ್ ತಂಡಕ್ಕೂ ಮುನ್ನ 2017ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದರು. ಆದರೆ ಆ ಆವೃತ್ತಿಯಲ್ಲಿ ಪೂರನ್ ಒಂದೇ ಒಂದು ಪಂದ್ಯದಲ್ಲಿಯೂ ಕೂಡ ಆಡುವ ಅವಕಾಶವನ್ನೇ ಪಡೆಯದೆ ಮೂಲೆಗುಂಪಾಗಿದ್ದರು.

Story first published: Sunday, May 30, 2021, 11:02 [IST]
Other articles published on May 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+