Rohit Sharma: ಧರ್ಮಶಾಲಾದಲ್ಲಿ ರೋಹಿತ್ ಶರ್ಮಾ ನಿರ್ಮಿಸಿದ ದಾಖಲೆಯ ಪಟ್ಟಿ ಇಲ್ಲಿದೆ ನೋಡಿ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿರುವ ರೋಹಿತ್ ಶರ್ಮಾ ಶತಕದ ಗಡಿ ದಾಟಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ರೋಹಿತ್ ಶರ್ಮಾ ಈ ಸರಣಿಯಲ್ಲಿ ಎರಡನೇ ಶತಕ ವಾಗಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಸಕ್ತ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ಸೊಗಸಾಗಿದೆ ಈ ಮೂಲಕ ರೋಹಿತ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್ ರೋಹಿತ್ ಅವರ 12ನೇ ಶತಕವಾಗಿದೆ. ಇದಕ್ಕೂ ಮುನ್ನ ಅವರು ಏಕದಿನದಲ್ಲಿ 31 ಶತಕಗಳನ್ನು ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕಗಳನ್ನು ಗಳಿಸಿದ್ದಾರೆ. ಈ ಶತಕದೊಂದಿಗೆ ರೋಹಿತ್ ಶರ್ಮಾ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ, ಸ್ಟೀವ್ ಸ್ಮಿತ್ ದಾಖಲೆಯ ಸಮಕ್ಕೆ ನಿಂತಿದ್ದಾರೆ.
9ನೇ ಶತಕ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ. ರೂಟ್, 52 ಪಂದ್ಯಗಳಲ್ಲಿ 13 ಶತಕ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ 11 ಶತಕ ಸಿಡಿಸಿರುವ ಮಾರ್ನಸ್ ಲಂಬುಶೇನ್ ಇದ್ದಾರೆ. ಇದರ ನಂತರ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಹೆಸರಿನಲ್ಲಿ 10 ಶತಕಗಳನ್ನು ಗಳಿಸಿದ್ದಾರೆ. ಆದರೆ ಸ್ಟೀವ್ ಸ್ಮಿತ್ 9 ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅವರ ಸಮಕ್ಕೆ ರೋಹಿತ್ ಶರ್ಮಾ ಬಂದಿದ್ದಾರೆ.
ಸ್ಟೀವ್ ಸ್ಮಿತ್ 45 ಪಂದ್ಯಗಳಲ್ಲಿ 9 ಶತಕ ಸಿಡಿಸಿದ್ದರೆ, ರೋಹಿತ್ 32 ಪಂದ್ಯಗಳಲ್ಲಿ 9 ಶತಕಗಳ ಸಂಖ್ಯೆಯನ್ನು ಮುಟ್ಟಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ 29 ಪಂದ್ಯಗಳಲ್ಲಿ 8 ಶತಕಗಳನ್ನು ಬಾರಿಸಿದ್ದಾರೆ.
ಕ್ರಿಸ್ ಗೇಲ್ ದಾಖಲೆ ಉಡೀಸ್
ಆರಂಭಿಕ ಆಟಗಾರನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನ ದಂತಕಥೆ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಸ್ ಗೇಲ್ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 42 ಶತಕಗಳನ್ನು ಹೊಂದಿದ್ದರೆ, ರೋಹಿತ್ ಶರ್ಮಾ ಈಗ 43 ಶತಕಗಳನ್ನು ಬಾರಿಸಿದ್ದಾರೆ. ಈಗ ರೋಹಿತ್‌ಗಿಂತ ಮುಂದೆ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಉಳಿದಿದ್ದಾರೆ. ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ 49 ಶತಕಗಳನ್ನು ಗಳಿಸಿದ್ದಾರೆ, ಅವರು ನಂಬರ್ ಒನ್ ಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ, ಅವರು 45 ಶತಕಗಳನ್ನು ಗಳಿಸಿದ್ದಾರೆ.

2021 ರಿಂದ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಶತಕ
6 - ರೋಹಿತ್ ಶರ್ಮಾ
4 - ಶುಭಮನ್ ಗಿಲ್
3 - ರವೀಂದ್ರ ಜಡೇಜಾ
3 - ಯಶಸ್ವಿ ಜೈಸ್ವಾಲ್
3 - ರಿಷಬ್ ಪಂತ್
ಇಂಗ್ಲೆಂಡ್ ವಿರುದ್ಧ ಭಾರತದ ಆರಂಭಿಕ ಆಟಗಾರನ ಅತಿ ಹೆಚ್ಚು ಟೆಸ್ಟ್ ಶತಕ
4 - ಸುನಿಲ್ ಗವಾಸ್ಕರ್
4 - ರೋಹಿತ್ ಶರ್ಮಾ
3 - ವಿಜಯ್ ಮರ್ಚೆಂಟ್
3 - ಮುರಳಿ ವಿಜಯ್
3 - ಕೆಎಲ್ ರಾಹುಲ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕ
49 - ಡೇವಿಡ್ ವಾರ್ನರ್
45 - ಸಚಿನ್ ತೆಂಡೂಲ್ಕರ್
43 - ರೋಹಿತ್ ಶರ್ಮಾ
42 - ಕ್ರಿಸ್ ಗೇಲ್
41 - ಸನತ್ ಜಯಸೂರ್ಯ
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಹೆಚ್ಚು ಶತಕ
100 - ಸಚಿನ್ ತೆಂಡೂಲ್ಕರ್
80 - ವಿರಾಟ್ ಕೊಹ್ಲಿ
48 - ರಾಹುಲ್ ದ್ರಾವಿಡ್
48 - ರೋಹಿತ್ ಶರ್ಮಾ
38 - ವೀರೇಂದ್ರ ಸೆಹ್ವಾಗ್
38 - ಸೌರವ್ ಗಂಗೂಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications