Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುಸಾಲ್ ಮೆಂಡಿಸ್ ಕಾರು ಅಪಘಾತದ ಸಿಸಿಟಿವಿ ದೃಶ್ಯ ಬಿಡುಗಡೆ: ವೀಡಿಯೊ

Here’s the CCTV footage of Kusal Mendis’ car crash

ಕೊಲಂಬೋ, ಜುಲೈ 6: ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಅವರಿದ್ದ ಕಾರು ಅಪಘಾತವಾಗಿ 64ರ ಹರೆಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಶ್ರೀಲಂಕಾದ ಕೇಂದ್ರ ಕೊಲಂಬೋದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣದ ಸಂಬಂಧ ಮೆಂಡಿಸ್ ಬಂಧನಕ್ಕೊಳಗಾಗಿದ್ದರು ಕೂಡ. ಈಗ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ.

ಭಾನುವಾರ ಬೆಳಗ್ಗೆ 5 am ಹೊತ್ತಿಗೆ ಕೊಲಂಬೋದ ಉಪನಗರ ಪನದುರಾದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಕುಸಾಲ್ ಮೆಂಡಿಸ್ ಅವರಿದ್ದ ಕಾರು ಡಿಕ್ಕಿಯಾಗಿ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ವ್ಯಕ್ತಿ ಸಾವನ್ನಪ್ಪಿದ್ದರು.

ಘಟನೆ ನಡೆದ ಕೂಡಲೇ ಕುಸಾಲ್ ಅವರನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಬಂಧಿಸಿದ್ದರು. ಅಪಘಾತ ಪ್ರಕರಣದಲ್ಲಿ ಮೆಂಡಿಸ್ ಭಾಗಿಯಾಗಿದ್ದರೆಂದು ಪೊಲೀಸ್ ಮಾಧ್ಯಮ ಘಟಕ ಖಾತರಿಪಡಿಸಿತ್ತು. ಆದರೆ ಘಟನೆ ವೇಳೆ ಮೆಂಡಿಸ್ ಮದ್ಯಪಾನ ಮಾಡಿದ್ದರೋ ಅನ್ನೋದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀಲಂಕಾದ ಮಾಧ್ಯಮ ಡೈಲಿ ಮಿರರ್, ಅಪಘಾತದ ಸಿಸಿಟಿವಿ ವೀಡಿಯೊ ಬಿಡುಗಡೆ ಮಾಡಿತ್ತು. ವೀಡಿಯೋದಲ್ಲಿ ಕುಸಾಲ್ ಮೆಂಡಿಸ್ ಕಾರು ದಾರಿ ಬದಿಯಲ್ಲಿ ಸಾಗುತ್ತ ಸೈಕಲ್ ಸವಾರನಿಗೆ ಗುದ್ದಿದ್ದ ದೃಶ್ಯ ದಾಖಲಾಗಿತ್ತು. ಅಲ್ಲದೆ ಡೈಲಿ ಮಿರರ್ ಬಿಡುಗಡೆ ಮಾಡಿದ್ದ ವೀಡಿಯೋದಲ್ಲಿ ಅಪಘಾತದಿಂದ ಹಾನಿಗೀಡಾಗಿದ್ದ ಕಾರು, ಸೈಕಲ್‌ನ ದೃಶ್ಯವೂ ಇತ್ತು.

Story first published: Tuesday, July 7, 2020, 10:08 [IST]
Other articles published on Jul 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+