Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಟಿ20 ಲೀಗ್‌ ಫೈನಲ್‌ ವೇಳೆ ಹೈಡ್ರಾಮಾ; ವಿಡಿಯೋ ವೈರಲ್

ಟಿ20 ಮುಂಬೈ ಲೀಗ್‌ನ ಫೈನಲ್‌ ಪಂದ್ಯ ಆಟಕ್ಕೂ ಹೆಚ್ಚಾಗಿ ಮೈದಾನದಲ್ಲಿ ನಡೆದ ಗಲಾಟೆಯಿಂದ ಸುದ್ದಿಯಾಗಿದೆ. ಪ್ರಶಸ್ತಿ ಪಂದ್ಯದ ಕೊನೆಯ ಓವರ್‌ಗಳು ಎಷ್ಟು ಹೈವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಗಿತ್ತೆಂದರೆ ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ಮೈದಾನಕ್ಕೆ ಧಾವಿಸಿದರು. ಫೈನಲ್‌ ಪಂದ್ಯದಲ್ಲಿ ಮರಾಠಾ ರಾಯಲ್ಸ್ ವೇಗಿ ತುಷಾರ್ ದೇಶಪಾಂಡೆ ಮತ್ತು ಎಆರ್‌ಸಿಎಸ್ ಅಂಧೇರಿ ಬ್ಯಾಟ್ಸ್‌ಮನ್ ಗೌರವ್ ಜಥರ್ ನಡುವಿನ ಮಾತಿನ ಚಕಮಕಿ ಸದ್ಯ ಭಾರೀ ವೈರಲ್ ಆಗುತ್ತಿದೆ.

ಮುಂಬೈ ಟಿ20 ಲೀಗ್‌ನ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಎಆರ್‌ಸಿಎಸ್ ಅಂಧೇರಿ ಹಾಗೂ ಎಂಎಸ್‌ಸಿ ಮರಾಠಾ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಂಧೇರಿ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಎಂಎಸ್‌ಸಿ ಮರಾಠಾ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 154 ರನ್ ಸೇರಿಸಿತು. ಅಂಧೇರಿ ತಂಡ ಗುರಿಯನ್ನು ಬೆನ್ನಟ್ಟಿ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 146 ಸೇರಿಸಿತು. ಫೈನಲ್ ಪಂದ್ಯದಲ್ಲಿ ಮರಾಠಾ ರಾಯಲ್ಸ್ ರೋಚಕ ಪಂದ್ಯವನ್ನು ಗೆದ್ದುಕೊಂಡಿತು.

High Drama in Mumbai

ಈ ಪಂದ್ಯದ 19ನೇ ಓವರ್‌ನಲ್ಲಿ ಎಲ್ಲರ ಚಿತ್ತ ಕದ್ದಿತ್ತು. ಈ ಹಂತದಲ್ಲೇ ಅಂಧೇರಿ ತಂಡ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿತ್ತು. ಈ ವೇಳೆ ಅಂಧೇರಿ ತಂಡಕ್ಕೆ ಗೌರವ್ ಜಥರ್ ವೇಗವಾಗಿ ರನ್‌ ಕಲೆ ಹಾಕಿ ತಂಡಕ್ಕೆ ನೆರವಾದರು. ಇವರು ಸ್ಪಿನ್ನರ್ ಇರ್ಫಾನ್‌ ಉಮೈರ್ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಹೀಗಾಗಿ ಪಂದ್ಯ ರೋಮಾಂಚಕವಾಯಿತು. ಈ ಹಂತದಲ್ಲಿ ಮರಾಠಾ ರಾಯಲ್ಸ್ ತಂಡ ಒತ್ತಡದಲ್ಲಿರುವಂತೆ ಕಂಡು ಬಂದಿತು. ಜಥರ್ 17 ಎಸೆತಗಳಲ್ಲಿ 23 ರನ್ ಸಿಡಿಸಿದ್ದಾಗ, ಇರ್ಫಾನ್ ಉಮೈರ್ ಅದ್ಭುತ ಕಮ್‌ಬ್ಯಾಕ್ ಮಾಡಿದರು. ಇವರು ಜಥರ್ ಅವರನ್ನು ಔಟ್ ಮಾಡಿರು. ಈ ವಿಕೆಟ್‌ ಪಡೆದಾಗ ಮರಾಠಾ ರಾಯಲ್ಸ್‌ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು.

ಮಾತಿನ ಚಕಮಕಿ

ಈ ಸಂಭ್ರಮಾಚರಣೆ ಗೌರವ್ ಜಥರ್‌ಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಜಥರ್ ಮತ್ತು ಮರಾಠಾ ರಾಯಲ್ಸ್ ವೇಗಿ ತುಷಾರ್ ದೇಶಪಾಂಡೆ ನಡುವೆ ಮೈದಾನದಲ್ಲಿ ಬಿಸಿಯಾದ ಮಾತಿನ ಚಕಮಕಿ ನಡೆಯಿತು. ಇವರಿಬ್ಬರ ಮಾತಿನ ಚಕಮಕಿ ಎಷ್ಟು ಬಿಸಿಯಾಗುತ್ತಿದ್ದಂತೆ ಅಂಪೈರ್ ಮತ್ತು ಇತರ ಆಟಗಾರರು ಮಧ್ಯಪ್ರವೇಶಿಸಬೇಕಾಯಿತು. ಮೈದಾನದಲ್ಲಿ ಪರಿಸ್ಥಿತಿ ಹೇಗೋ ಶಾಂತವಾಯಿತು, ಆದರೆ ಉದ್ವಿಗ್ನತೆ ಮೈದಾನದಲ್ಲಿ ಹಾಗೆ ಉಳಿಯಿತು.

ಇನ್ನು ಈ ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ಶಿವಂ ದುಬೆ ಅವರ ಮುಂದಾಳತ್ವದ ತಂಡ ಡಗೌಟ್‌ನಲ್ಲಿ ಕುಳಿತುಕೊಂಡಿತ್ತು. ಆಗ ಮರಾಠಾ ರಾಯಲ್ಸ್ ಆಟಗಾರನೊಬ್ಬ ನೇರವಾಗಿ ಅಂಧೇರಿ ಡಗೌಟ್‌ಗೆ ಬಂದು, ಗೌರವ್ ಜಥರ್ ಜೊತೆ ವಾಗ್ವಾದ ನಡೆಸಿದರು. ಇವರಿಬ್ಬರ ನಡುವಿನ ವಾಗ್ವಾದ ತಾರಕಕ್ಕೆ ಏರಿದಾಗ ಸಹ ಆಟಗಾರರು ಹಾಗೂ ಸಿಬ್ಬಂದಿ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಶ್ರಮಿಸಿದರು.

ಶಿಕ್ಷೆಯ ಭೀತಿ

ಫೈನಲ್‌ನಲ್ಲಿ ನಡೆದ ಈ ವಾಗ್ವಾದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಈಗ ಆಟಗಾರರ ವಿರುದ್ಧ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗಾಗಿ ಕ್ರಮ ಕೈಗೊಳ್ಳಬಹುದು. ಮ್ಯಾಚ್ ರೆಫರಿಯ ವರದಿಯ ಆಧಾರದ ಮೇಲೆ ಆಟಗಾರರು ದಂಡ ಅಥವಾ ಇತರ ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವರದಿಯಾಗಿದೆ.

Story first published: Sunday, June 14, 2026, 15:08 [IST]
Other articles published on Jun 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+