ಮಹಿಳಾ ಟಿ20 ವಿಶ್ವಕಪ್: ಭಾರತ, ಆಸೀಸ್ ಹೈವೋಲ್ಟೇಜ್ ಫೈಟ್: ಗೆಲುವಿನ ಕನಸಿನಲ್ಲಿ ಹರ್ಮನ್ ಪಡೆ
ಶಾರ್ಜಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ, ಮುಂದಿನ ಹಂತಕ್ಕೆ ಪ್ರವೇಶ ಪಡೆಯುವ ಕನಸನ್ನು ಟೀಮ್ ಇಂಡಿಯಾ ಹೊಂದಿದೆ. ಆಸೀಸ್ ಸಹ ಈ ಪಂದ್ಯ ಗೆದ್ದು ನಿರಾಯಾಸವಾಗಿ ಸೆಮೀಸ್ ಹಂತಕ್ಕೆ ಎಂಟ್ರಿ ನೀಡುವ ಪ್ಲ್ಯಾನ್ ಮಾಡಿಕೊಂಡಿದೆ.
ಉಭಯ ತಂಡಗಳು ಬಲಾಡ್ಯವಾಗಿವೆ. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲಿ 1 ಸೋಲು, 2 ಗೆಲುವು ದಾಖಲಿಸಿದ್ದು4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಆಸೀಸ್ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಆಸೀಸ್ ಟೀಮ್ ಇಂಡಿಯಾಗಿಂತಲೂ ಬಲಾಢ್ಯವಾಗಿದೆ. ಉಭಯ ತಂಡಗಳು ಈಗಾಗಲೇ 34 ಬಾರಿ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿ ಆಗಿದ್ದು, ಆಸ್ಟ್ರೇಲಿಯಾ 25 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಭಾರತ ಏಳು ಪಂದ್ಯಗಳನ್ನುಗೆದ್ದಿದೆ. ಒಂದು ಪಂದ್ಯ ಟೈ ಆಗಿದ್ದು, ಇನ್ನೊಂದು ಪಂದ್ಯ ಫಲಿತಾಂಶ ಹೀನವಾಗಿದೆ.
ಸ್ಮೃತಿ ಮೇಲೆ ಭರವಸೆ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಲಯಕ್ಕೆ ಮರಳಿದ್ದು, ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಆಸೀಸ್ ಬೌಲರ್‌ಗಳನ್ನು ಕಾಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಕಳೆದ ಪಂದ್ಯದಲ್ಲಿ ಬಾರಿಸಿದ ಅರ್ಧಶತಕದ ಮನೋಬಲವನ್ನು ಮುಂದುವರೆಸುವ ಇರಾದೆಯನ್ನು ಹೊಂದಿದ್ದಾರೆ.

ಪ್ರಸಕ್ತ ಸರಣಿಯಲ್ಲಿ ಭಾರತದ ಪರ ಅರ್ಧಶತಕ ಬಾರಿಸಿದ ಇನ್ನೋರ್ವ ಬ್ಯಾಟರ್ ಎಂದರೆ ಹರ್ಮನ್ ಪ್ರೀತ್ ಕೌರ್. ಇವರು ಸಹ ಉತ್ತಮ ಲಯದಲ್ಲಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಇವರು ಆಡಿದ ಮೂರು ಪಂದ್ಯಗಳಲ್ಲಿ 96 ರನ್ ಸಿಡಿಸಿದ್ದಾರೆ. ಇನ್ನು ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್ ತಮ್ಮ ಜವಬ್ದಾರಿಯನ್ನು ಅರಿತು ಆಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಆಸೀಸ್ ವಿರುದ್ಧ ಗೆಲುವಿನ ಆಸೆ ಫಲಿಸುತ್ತದೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅರುಂಧತಿ ರೆಡ್ಡಿಗೆ ಸ್ಥಾನವಿದೆ. ಇವರು ಆಡಿದ ಮೂರು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದಿದ್ದಾರೆ. ಉಳಿದಂತೆ ಅಶಾ ಶೋಬನಾ ಹಾಗೂ ರೇಣುಕಾ ಸಿಂಗ್ ಆಸೀಸ್ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ.
ಸ್ಟಾರ್ ಆಟಗಾರ್ತಿಯರ ಬಲ
ಆಸ್ಟ್ರೇಲಿಯಾ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದೊಡ್ಡ ಬಳಗವೇ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಅಲಿಸ್ಸಾ ಹೀಲಿ, ಬೆತ್ ಮೂನಿ, ಎಲ್ಲಿಸಾ ಪೆರ್ರಿ ಎದುರಾಳಿ ಬೌಲರ್‌ಗಳ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ನೀಡುವ ಕ್ಷಮತೆಯನ್ನು ಹೊಂದಿದ್ದಾರೆ. ಅನ್ನಾಬೆಲ್ ಸದರ್ಲ್ಯಾಂಡ್, ಆಶ್ಲೀ ಗಾರ್ಡ್ನರ್, ಮೇಗನ್ ಶುಟ್ ಅವರು ಎದುರಾಳಿ ಬ್ಯಾಟರ್‌ಗಳ ರಣ ತಂತ್ರವನ್ನು ಅರಿತು ಬೌಲ್ ಮಾಡಬಲ್ಲರು. ಈ ಬಾರಿಯ ವಿಶ್ವಕಪ್‌ನಲ್ಲಿ ಮೇಗನ್ ಶುಟ್ ಬ್ಯಾಕ್ ಟು ಬ್ಯಾಕ್ ದಾಖಲೆ ನಿರ್ಮಿಸಿ ಎಲ್ಲರ ಚಿತ್ತ ಕದ್ದಿದ್ದಾರೆ. ಆಸೀಸ್ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications