For Quick Alerts
ALLOW NOTIFICATIONS  
For Daily Alerts
 

ದುಬಾರಿ ಎಡವಟ್ಟು: ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು

ಇಂಡಿಯನ್ ಪ್ರೀಮಿಯರ್ ಲೀಗ್‌ ರೋಚಕ ಘಟ್ಟ ತಲುಪಿದೆ. ಇನ್ನು ಹಲವು ತಂಡಗಳು ಈಗಾಗಲೇ ಪ್ಲೇ ಆಫ್‌ ಮೇಲೆ ಕಣ್ಣು ನೆಟ್ಟಿವೆ. ಸೌದಿಯಲ್ಲಿ ನಡೆದೆ ಐಪಿಎಲ್ ಮೆಗಾ ಹರಾಜಿನಲ್ಲಿ ಹಲವು ತಂಡಗಳು ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ಹಣವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಈಗ ದುಬಾರಿ ಆಟಗಾರರ ಫಾರ್ಮ್‌ ನಿಜಕ್ಕೂ ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ಮುಂದಿನ ಹಂತವನ್ನು ತಲುಪುವ ಈ ವೇಳೆಯಲ್ಲಿ ಆಟಗಾರರ ಫಾರ್ಮ್‌ ಕೈ ಕೊಟ್ಟಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿದೆ.

ದುಬಾರಿ ಆಟಗಾರರು ಹಲವು ತಂಡಗಳಲ್ಲಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟ ಆಡುತ್ತಿದ್ದಾರೆ. ಜೋಶ್‌ ಹ್ಯಾಜಲ್‌ ವುಡ್, ಕೆಎಲ್ ರಾಹುಲ್‌, ತಮ್ಮ ಶಿಸ್ತು ಬದ್ಧ ಆಟದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಆದರೆ ಈ ಮೂರು ಆಟಗಾರರು ತಮ್ಮ ಕಳಪೆ ಫಾರ್ಮ್‌ನಿಂದಾಗಿ ತಂಡಕ್ಕೆ ಭಾರೀ ಪೆಟ್ಟು ನೀಡಿದ್ದಾರೆ. ಮಾಲೀಕರು ಭಾರೀ ಮೊತ್ತವನ್ನು ನೀಡಿ ಆಟಗಾರರನ್ನು ಖರೀದಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆಸೆಯುನ್ನು ಹೊಂದಿರುತ್ತವೆ. ಆದರೆ ಈ ಆಸೆಗೆ ಈ ಪ್ಲೇಯರ್ಸ್ ಪೆಟ್ಟು ನೀಡಿದ್ದಾರೆ.

High-Value Flops Expensive IPL Stars Struggle with Poor Form in Crucial Stage

ರಿಷಭ್‌ ಪಂತ್‌

ದುಬಾರಿ ಆಟಗಾರರ ಫ್ಲಾಫ್‌ ಶೋ ಎಂದಾಕ್ಷಣ ನೆನಪಿಗೆ ಬರುವ ಮೊದಲ ಹೆಸರೆ ರಿಷಭ್‌ ಪಂತ್. ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ಹರಾಜು ಅಂಗಳಕ್ಕೆ ಬಿಟ್ಟಿತ್ತು. ಆದರೆ ಇವರಿಗೆ 27 ಕೋಟಿ ನೀಡಿ ಲಕ್ನೋ ಸೂಪರ್‌ ಜೈಂಟ್ಸ್ ತಂಡ ತನ್ನ ಬಳಗಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ ಲಕ್ನೋ ಇವರಿಗೆ ನಾಯಕತ್ವವನ್ನು ಸಹ ನೀಡಿತು. ಆದರೆ ರಿಷಭ್ ಪಂತ್ ಮಿಡ್ಲ್ ಆರ್ಡರ್‌ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುವ ಬದಲು ಒತ್ತಡವನ್ನು ಬೇರೆ ಆಟಗಾರರ ಮೇಲೆ ಹೇರುತ್ತಿದ್ದಾರೆ. ರಿಷಭ್ ಪಂತ್‌ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ 110 ರನ್‌ ಸಿಡಿಸಿದ್ದಾರೆ. ಈ ಲೀಗ್‌ನಲ್ಲಿ ಪಂತ್ ಬೌಂಡರಿ, ಸಿಕ್ಸರ್‌ ಬಾರಿಸುವಲ್ಲಿ ಹಿಂದೆ ಬಿದ್ದಿದ್ದಾರೆ.

High-Value Flops Expensive IPL Stars Struggle with Poor Form in Crucial Stage

ವೆಂಕಟೇಶ್ ಅಯ್ಯರ್

ದುಬಾರಿ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ವೆಂಕಟೇಶ್ ಅಯ್ಯರ್ ಸಹ ಫ್ಲಾಪ್‌ ಶೋ ನೀಡುತ್ತಿದ್ದಾರೆ. ಇವರಿಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ 23.75 ಕೋಟಿ ರೂ. ನೀಡಿ ಖರೀದಿಸಿತು. ಆದರೆ ಇವರು ತಮ್ಮ ಬ್ಯಾಟಿಂಗ್ ಮೂಲಕ ಇವರು ತಂಡಕ್ಕೆ ನ್ಯಾಯ ಒದಗಿಸುತ್ತಿಲ್ಲ. ಇವರು ಸಹ ಆಡಿದ 10 ಪಂದ್ಯಗಳಲ್ಲಿ 142 ರನ್ ಗಳಿಸಿದ್ದಾರೆ. ಪ್ರತಿ ಬಾರಿ ತಂಡ ಇವರ ಮೇಲೆ ನಿರೀಕ್ಷೆಗಳನ್ನು ಇಟ್ಟಾಗ ಈ ನಿರೀಕ್ಷೆಯ ಭಾರವನ್ನು ಇವರು ನಡುವಿನಲ್ಲಿ ಬಿಟ್ಟು ಬಂದಿದ್ದಾರೆ.

ಇಶಾನ್ ಕಿಶನ್

ಮುಂಬೈ ಇಂಡಿಯನ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದ ಇಶಾನ್‌ ಕಿಶನ್‌ ಅವರ ಆಟವನ್ನು ಕಂಡು ಸನ್‌ರೈಸರ್ಸ್‌ ಹೈದರಾಬಾದ್ ಇವರಿಗೆ 11.25 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಆದರೆ ಇಶಾನ್ ಮೊದಲ ಪಂದ್ಯದಲ್ಲಿ ಅಬ್ಬರದ ಆಟ ಶತಕ ಬಾರಿಸಿದರು. ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಇಶಾನ್ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರ ಬ್ಯಾಟಿಂಗ್ ಲಯ ಸಂಪೂರ್ಣ ಹಳಿ ತಪ್ಪಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇವರು ರನ್‌ ಕಲೆ ಹಾಕದೇ ಇರುವುದು ತಂಡಕ್ಕೆ ದೊಡ್ಡ ತಲೆ ನೋವಿನ ವಿಚಾರಗಳಲ್ಲಿ ಒಂದಾಗಿದೆ. ಇನ್ನು ಇಶಾನ್‌ ಆಡಿದ 10 ಪಂದ್ಯಗಳಲ್ಲಿ 196 ರನ್‌ ಸಿಡಿಸಿದ್ದಾರೆ. ಈ ಮೂಲಕ ಸನ್‌ ತಂಡದ ಮಧ್ಯಮ ಕ್ರಮಾಂಕಕ್ಕೆ ಬಿಡಿಸಲಾಗದ ಕಗ್ಗಂಟಾಗಿದ್ದಾರೆ.

Story first published: Saturday, May 3, 2025, 17:55 [IST]
Other articles published on May 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+