ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಪ್ಲೇ ಆಫ್‌ಗೆ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬಿಗ್ ಫೈಟ್ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಒಂದು ಕಾಲನ್ನು ಸುಲಭವಾಗಿ ಪ್ಲೇ ಆಫ್‌ಗೆ ಇಡಬಹುದಾಗಿದೆ. ಆದರೆ ಈ ಹೈವೋಲ್ಟೇಜ್ ಪಂದ್ಯವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ.
ಮುಂಬೈ ಈಗಾಗಲೇ ಆಡಿದ 12 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು 14 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಸಹ 12 ಪಂದ್ಯಗಳನ್ನು ಆಡಿದ್ದು 13 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಸುಲಭವಾಗಿ ಪ್ಲೇ ಆಫ್‌ಗೆ ಒಂದು ಕಾಲನ್ನು ಈಡಲಿದೆ. ಉಭಯ ತಂಡಗಳು ತಮ್ಮ ಲೀಗ್ ಹಂತದ ಕೊನೆಯ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿವೆ. ಹೀಗಾಗಿ ಪ್ರಸಕ್ತ ಆವೃತ್ತಿಯ 63ನೇ ಪಂದ್ಯ ರೋಚಕತೆ ಹುಟ್ಟಿಸಿದೆ.

ಮುಂಬೈ ಮೈದಾನದಲ್ಲಿ ಚೇಸ್ ಮಾಡಿದ ತಂಡಗಳೇ ಈ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದಿವೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಬೌಲಿಂಗ್ ಮಾಡುವ ಸಾಧ್ಯತೆ ಇದೆ. ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 36 ಬಾರಿ ಮುಖಾಮುಖಿ ಆಗಿದ್ದು, ಡೆಲ್ಲಿ 16 ರಲ್ಲಿ, ಮುಂಬೈ 20 ರಲ್ಲಿ ಜಯ ಸಾಧಿಸಿದೆ.
ಮುಂಬೈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆರಂಭಿಕರಾಗಿ ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ ಕಾಣಿಸಿಕೊಳ್ಳಲಿದ್ದು, ಭರ್ಜರಿ ಆರಂಭವನ್ನು ನೀಡಬಹುದಾಗಿದೆ. ಈ ಜೋಡಿ ಅಬ್ಬರಿಸಿದರೆ ಬಿಗ್ ಸ್ಕೋರ್ ಕನಸು ನನಸಾಗುತ್ತದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ವಿಲ್ ಜಾಕ್ಸ್, ತಿಲಕ್ ವರ್ಮಾ ತಮ್ಮ ಶಿಸ್ತು ಬದ್ಧ ಆಟವನ್ನು ಪ್ರದರ್ಶಿಸಬೇಕಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಮತ್ತೊಮ್ಮೆ ಬಿಗ್ ಇನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದಾರೆ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳಲಿರುವ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹಾರ್ ಹಾಗೂ ಟ್ರೆಂಟ್ ಬೌಲ್ಟ್ ಹೊಸ ಚೆಂಡನ್ನು ಹಂಚಿಕೊಳ್ಳಬಹುದು. ಇನ್ನು ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಮಿಡ್ಲ್ ಓವರ್ ಹಾಗೂ ಡೆತ್‌ಗಳಲ್ಲಿ ಕಾಟ ನೀಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ಮಿಚೆಲ್ ಸ್ಯಾಂಟ್ನರ್ ತಮ್ಮ ಸ್ಪಿನ್ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ.
ಮಹತ್ವದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದ ವೇಳೆ ಕೆಎಲ್ ರಾಹುಲ್ ಗಾಯಕ್ಕೆ ತುತ್ತಾಗಿದ್ದಾರೆ. ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಕೆಎಲ್ ರಾಹುಲ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಈ ಗಾಯವು ಡೆಲ್ಲಿ ತಂಡದ ಪ್ಲೇಆಫ್ ಆಸೆಗೆ ದೊಡ್ಡ ಪೆಟ್ಟು ನೀಡಬಹುದು. ನೆಟ್ಸ್‌ನಲ್ಲಿ ಮುಖೇಶ್ ಕುಮಾರ್ ಅವರ ಚೆಂಡು ರಾಹುಲ್‌ಗೆ ಬಡಿದಿದೆ, ನಂತರ ಅವರು ನೋವಿನಿಂದ ಬಳಲಿದ್ದಾರೆ. ಅಲ್ಲದೆ ಇವರ ಗಾಯದ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಇವರು ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದರು.

ಆರಂಭಿಕರಾಗಿ ಫಾಫ್ ಡುಪ್ಲೇಸಿಸ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್, ವಿಪ್ರಜ್ ನಿಗಮ್ ತಮ್ಮ ಸ್ಥಿರ ಪ್ರದರ್ಶವನ್ನು ಮುಂದುವರೆಸಬೇಕಿದೆ. ಇನ್ನು ಸ್ಪಿನ್ ಬೌಲರ್ ರೂಪದಲ್ಲಿ ಕುಲ್‌ದೀಪ್ ಯಾದವ್ ಪಿರ್ಕಿ ಜಾದು ನಡೆಸಬೇಕಿದೆ. ವೇಗಿಗಳಾದ ಟಿ ನಟರಾಜನ್, ದುಶಮಂತ್ ಚಮೀರ್, ಮುಷ್ತಾಫಿಜುರ್ ರಹಮಾನ್ ತಮ್ಮ ಬಿಗುವಿನ ದಾಳಿಯ ಮೂಲಕ ಅಬ್ಬರಿಸಬೇಕಿದೆ.