Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಸೀಸನ್ ಆರಂಭಕ್ಕೆ ಕೇವಲ 9 ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸ ಶುರು ಮಾಡಿದ್ದು, ಸ್ಟಾರ್ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಐಪಿಎಲ್ 2025ರಲ್ಲಿ ಹಲವು ದಾಖಲೆಗಳನ್ನು ಮಾಡಲು ಆಟಗಾರರು ಸಜ್ಜಾಗಿದ್ದಾರೆ. ಆದರೆ ಇದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಅನ್ನು ಕೆಲವು ಆಟಗಾರರು ಹೊಂದಿದ್ದಾರೆ.

ಈ ಆಟಗಾರರ ತಮ್ಮ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ್ದಾರೆ. ಈ ಬ್ಯಾಟರ್‌ಗಳು ತಮ್ಮ ಸ್ಫೋಟಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ಭಯ ಹುಟ್ಟಿಸಿದ್ದಾರೆ. ಐಪಿಎಲ್ 2025ರ ಸೀಸನ್ ಆರಂಭಕ್ಕೂ ಮುನ್ನ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ ತಿಳಿಯಿರಿ.

highest batting strike rates in IPL history

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಮೊದಲ ಸ್ಥಾನದಲ್ಲಿದ್ದಾರೆ. ಅವರು ಐಪಿಎಲ್ 2011ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎದುರಿಸಿದ 1 ಎಸೆತದಲ್ಲಿ 6 ರನ್ ಕಲಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರ ಸ್ಟ್ರೈಕ್ ರೇಟ್ 600 ಆಗಿದೆ. ಎರಡನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ವೇಗಿ ವಿನಯ್ ಕುಮಾರ್ ಇದ್ದಾರೆ. ಐಪಿಎಲ್ 2012 ರಲ್ಲಿ ಅವರು ಸಿಎಸ್‌ಕೆ ವಿರುದ್ಧ 1 ಎಸೆತದಲ್ಲಿ 6 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಕಳೆದ ವರ್ಷ ಐಪಿಎಲ್ 2024ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಗಳಿಸಿದ್ದರು. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಓವರ್‌ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ಧೋನಿ ಅಜೇಯ 20 ರನ್ ಗಳಿಸಿದ್ದರು. ಈ ಸಂದರ್ಭದಲ್ಲಿ ಧೋನಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ 500 ಆಗಿತ್ತು.

ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್

ಡ್ವೇನ್ ಬ್ರಾವೋ (ಸಿಎಸ್‌ಕೆ) vs ಆರ್‌ಸಿಬಿ, ಐಪಿಎಲ್ 2011: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಆರ್. ವಿನಯ್ ಕುಮಾರ್ (ಆರ್‌ಸಿಬಿ) vs ಸಿಎಸ್‌ಕೆ, ಐಪಿಎಲ್ 2012: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ರಜತ್ ಭಾಟಿಯಾ (ಆರ್‌ಆರ್‌) vs ಕೆಕೆಆರ್, ಐಪಿಎಲ್ 2014: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಆದಿತ್ಯ ತಾರೆ (ಎಂಐ) vs ಆರ್‌ಆರ್‌, ಐಪಿಎಲ್ 2014: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ರಶೀದ್ ಖಾನ್ (ಎಸ್‌ಆರ್‌ಹೆಚ್) vs ಪಿಬಿಕೆಎಸ್, ಐಪಿಎಲ್ 2017: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಜೇಡನ್ ಸಿಯರ್ಲ್ಸ್ (ಕೆಕೆಆರ್) vs ಪಿಬಿಕೆಎಸ್, ಐಪಿಎಲ್ 2018: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ನಿಕೋಲಸ್ ಪೂರನ್ (ಪಿಬಿಕೆಎಸ್) vs ಆರ್‌ಸಿಬಿ, ಐಪಿಎಲ್ 2020: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ರವೀಂದ್ರ ಜಡೇಜ (ಸಿಎಸ್‌ಕೆ) vs ಕೆಕೆಆರ್, ಐಪಿಎಲ್ 2021: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಡೇನಿಯಲ್ ಸ್ಯಾಮ್ಸ್ (ಎಂಐ) vs ಆರ್‌ಆರ್, ಐಪಿಎಲ್ 2022: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಕೆ ಗೌತಮ್ (ಎಲ್‌ಎಸ್‌ಜಿ) vs ಡಿಸಿ, ಐಪಿಎಲ್ 2023: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಜೈದೇವ್ ಉನದ್ಕತ್ (ಎಸ್‌ಆರ್‌ಹೆಚ್‌) vs ಪಿಬಿಕೆಎಸ್, ಐಪಿಎಲ್ 2024: ಸ್ಟ್ರೈಕ್ ರೇಟ್- 600, 1 ಎಸೆತದಲ್ಲಿ 6 ರನ್‌

ಕೃನಾಲ್ ಪಾಂಡ್ಯ (ಎಂಐ) vs ಎಸ್‌ಆರ್‌ಹೆಚ್‌ ಐಪಿಎಲ್ 2020: ಸ್ಟ್ರೈಕ್ ರೇಟ್- 500, 4 ಎಸೆತಗಳಲ್ಲಿ 20 ರನ್‌ಗಳು

ಎಂಎಸ್‌ ಧೋನಿ (ಸಿಎಸ್‌ಕೆ) vs ಐಎಂ, ಐಪಿಎಲ್ 2024: ಸ್ಟ್ರೈಕ್ ರೇಟ್- 500, 4 ಎಸೆತಗಳಲ್ಲಿ 20 ರನ್‌ಗಳು

Story first published: Friday, March 14, 2025, 13:45 [IST]
Other articles published on Mar 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+