For Quick Alerts
ALLOW NOTIFICATIONS  
For Daily Alerts
 

ಅತಿ ಹೆಚ್ಚು ಕ್ಯಾಚ್‌ ಪಡೆದವರು ಯಾರು? ಭಾರತ ಎಷ್ಟು ಅವಕಾಶ ಕೈ ಚೆಲ್ಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದನೇ ಟೆಸ್ಟ್‌ ಪಂದ್ಯದ ಇತಿಹಾಸದ ಪುಟ ಸೇರಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಈ ವೇಳೆ ಹೈದರಾಬಾದ್‌ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರ ಪ್ರದರ್ಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್‌ ನೀಡಿದ್ದಾರೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಹಲವು ದಾಖಲೆಗಳನ್ನು ಬರೆದಿದೆ. ಈ ವರದಿಯಲ್ಲಿ ಯಾವ ತಂಡ ಈ ಸರಣಿಯಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದಿದೆ ಹಾಗೂ ಬಿಟ್ಟಿದೆ ಎಂಬ ಬಗ್ಗೆ ಮಾಹಿತಿ ಇದೆ.

ಭಾರತ ಐದನೇ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಈ ಮೂಲಕ 6 ರನ್‌ಗಳ ಜಯ ದಾಖಲಿಸಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡುವಲ್ಲಿ ಸಫಲವಾಗಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಫೀಲ್ಡಿಂಗ್‌ ದೊಡ್ಡ ಸಮಸ್ಯೆಯಾಗಿತ್ತು. ಈ ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒಟ್ಟಾರೆ 23 ಕ್ಯಾಚ್‌ಗಳನ್ನು ಬಿಟ್ಟು ಕೈ ಸುಟ್ಟುಕೊಂಡಿದೆ. ಇನ್ನು ಇಂಗ್ಲೆಂಡ್‌ ಈ ಅಂಕಿ ಅಂಶಗಳಲ್ಲಿ ಹಿಂದೆ ಏನು ಇಲ್ಲ. ಆಂಗ್ಲರು ಸಹ ಈ ಸರಣಿಯಲ್ಲಿ ಒಟ್ಟಾರೆ 18 ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ.

Highest Catch Taker India vs England Test Series

ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಡಿಯಾ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈ ಬಿಟ್ಟಿದೆ. ಈ ವೇಳೆ ಭಾರತದ ಆಟಗಾರರು 6 ಬಾರಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಇಂಗ್ಲೆಂಡ್ ತಂಡದ ಅಟಗಾರರು ಸಹ ಸರಣಿಯ ಮಹತ್ವದ ಪಂದ್ಯ ಓವಲ್‌ನ ಎರಡನೇ ಇನಿಂಗ್ಸ್‌ನಲ್ಲಿ 5 ಕ್ಯಾಚ್‌ ಬಿಟ್ಟಿದ್ದಾರೆ. ಟೀಮ್ ಇಂಡಿಯಾ ಮುಂದಿನ ಸರಣಿಗೆ ಅಂಗಳಕ್ಕೆ ಇಳಿಯುವ ಮುನ್ನವೇ ಈ ಒಂದು ನ್ಯೂನತೆಯನ್ನು ತಿದ್ದಿಕೊಳ್ಳುವ ಅವಶ್ಯಕತೆ ಇದೆ.

ಅತಿ ಹೆಚ್ಚು ಕ್ಯಾಚ್ ಪಡೆದ ಪ್ಲೇಯರ್ಸ್‌

ಸರಣಿಯಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್‌ಗೆ ಅಗ್ರ ಸ್ಥಾನ. ಇವರು ಆಡಿದ 5 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 11 ಕ್ಯಾಚ್‌ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಕೆಎಲ್ ರಾಹುಲ್‌ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಒಟ್ಟಾರೆ ಸರಣಿಯಲ್ಲಿ 6 ಕ್ಯಾಚ್ ಪಡೆದಿದ್ದಾರೆ. ರಾಹುಲ್‌ ಹಿಡಿದಷ್ಟೇ ಕ್ಯಾಚ್‌ಗಳನ್ನು ಜಾಕ್‌ ಕ್ರಾಲಿ ಪಡೆದಿದ್ದಾರೆ. ಇನ್ನು ಜೋ ರೂಟ್‌ (5), ಕರುಣ್‌ ನಾಯರ್ (4) ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

Highest Catch Taker India vs England Test Series

ಇಂಗ್ಲೆಂಡ್‌ ಪ್ರವಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಪ್ಲೇಯರ್ಸ್‌

ಕೆಎಲ್ ರಾಹುಲ್‌, 5 ಪಂದ್ಯ, 10 ಕ್ಯಾಚ್‌
ಕರುಣ್ ನಾಯರ್‌, 4 ಪಂದ್ಯ, 4 ಕ್ಯಾಚ್‌
ಮೊಹಮ್ಮದ್‌ ಸಿರಾಜ್‌, 5 ಪಂದ್ಯ, 4 ಕ್ಯಾಚ್‌
ಶುಭಮನ್‌ ಗಿಲ್‌, 5 ಪಂದ್ಯ, 3 ಕ್ಯಾಚ್‌
ಸಾಯಿ ಸುದರ್ಶನ್‌, 3 ಪಂದ್ಯ, 2 ಕ್ಯಾಚ್‌

Story first published: Tuesday, August 5, 2025, 14:15 [IST]
Other articles published on Aug 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+