For Quick Alerts
ALLOW NOTIFICATIONS  
For Daily Alerts
 

ದ್ವಿಶತಕ ಬಾರಿಸಿ ಸರ್ ಗ್ಯಾರಿ ಸೋಬರ್ಸ್ ದಾಖಲೆ ಮುರಿದ ಸ್ಮಿತ್, ಬ್ರಾಡ್ಮನ್ ದಾಖಲೆ ಬಾಕಿ!

highest century against engand smith surpasses garry sobers

ಮ್ಯಾಂಚೆಸ್ಟರ್, ಸೆ. 06: ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿರುವ 4ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ 4ನೇ ಕ್ರಮಾಂಕದಲ್ಲಿ ಆಡಲು ಬಂದ ಸ್ಮಿತ್ 211 ರನ್(160 ಎಸೆತ, 11 ಬೌಂಡರಿ) ಗಳಿಸಿ ಜೋ ರೂಟ್ ಗೆ ವಿಕೆಟ್ ಒಪ್ಪಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧಕ್ಕೀಡಾಗಿದ್ದ ಸ್ಮಿತ್, ನಿಷೇಧ ಮುಗಿಸಿ ಮೊದಲ ಬಾರಿಗೆ ಆ್ಯಷಸ್ ಟೆಸ್ಟ್‌ನಲ್ಲಿ ಆಡುತ್ತಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ಸ್ಮಿತ್, 2ನೇ ಟೆಸ್ಟ್ ವೇಳೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌನ್ಸರ್‌ನಿಂದ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದರು. 3ನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ

4ನೇ ಟೆಸ್ಟ್ ಪಂದ್ಯದಲ್ಲಿ 26ನೇ ಶತಕ ಹಾಗೂ ಇಂಗ್ಲೆಂಡ್ ವಿರುದ್ಧ 11ನೇ ಶತಕ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. 30 ವರ್ಷ ವಯಸ್ಸಿನ ಸ್ಮಿತ್ 45 ಇನ್ನಿಂಗ್ಸ್ ಗಳಲ್ಲಿ 11 ಶತಕ ಗಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿ
ದೇಶ- ಶತಕ-ಇನ್ನಿಂಗ್ಸ್
* ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ)-19 ಶತಕ-63ಇನ್ನಿಂಗ್ಸ್
* ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 11*- 45
* ಗ್ಯಾರಿ ಸೋಬರ್ಸ್(ವೆಸ್ಟ್ ಇಂಡೀಸ್) -10- 61
* ಸ್ಟೀವ್ ವಾ (ಆಸ್ಟ್ರೇಲಿಯಾ) -9 -65
* ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ-9- 65
* ಅಲಾನ್ ಬಾರ್ಡರ್ (ಆಸ್ಟ್ರೇಲಿಯಾ)- 8- 82
* ಜಾರ್ಜ್ ಹೆಡ್ಲೆ (ವೆಸ್ಟ್ ಇಂಡೀಸ್) 8- 29

ಐದು ಪಂದ್ಯಗಳ ಆ್ಯಷಸ್ ಟೆಸ್ಟ್‌ ಸರಣಿ 1-1ರಲ್ಲಿ ಸದ್ಯ ಸಮಬಲ ಕಂಡಿದೆ. ಇಂಗ್ಲೆಂಡ್ ನೆಲದಲ್ಲಿ 18 ವರ್ಷಗಳ ಬಳಿಕ ಸರಣಿ ಜಯಕ್ಕಾಗಿ ಆಸ್ಟ್ರೇಲಿಯಾ ಕಾದಿದೆ.

Story first published: Friday, September 6, 2019, 13:14 [IST]
Other articles published on Sep 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+