IPL; ವೈಯಕ್ತಿಕ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟರ್ಸ್ ಪಟ್ಟಿ: ಕನ್ನಡಿಗ ರಾಹುಲ್‌ಗೂ ಸ್ಥಾನ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿರುತ್ತದೆ. ಟಿ20 ಫಾರ್ಮೆಟ್ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದ್ದಾಗಿದೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅದೆಷ್ಟೋ ವಿದೇಶಿ ಹಾಗೂ ದೇಶಿಯ ಆಟಗಾರರು ಆರ್ಭಟಿಸಿ ಮಿಂಚಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ಗಳನ್ನು ಕಲೆ ಹಾಕಿದ ಕೀರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡಿದ ದೈತ್ಯ ಬ್ಯಾಟರ್ ಕ್ರಿಸ್ ಗೇಲ್ ಅವರಿಗೆ ಸಲ್ಲುತ್ತದೆ. ಇವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ.

ಐಪಿಎಲ್ 2013ರ 31ನೇ ಪಂದ್ಯದಲ್ಲಿ ಕ್ರಿಸ್ ಗೇಲ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಸ್ಟಾರ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅಬ್ಬರಿಸಿದರು. ಇವರು ಈ ಪಂದ್ಯದಲ್ಲಿ ಕೇವಲ 66 ಎಸೆತಗಳನ್ನು ಎದುರಿಸಿ 13 ಬೌಂಡರಿ, 17 ಸಿಕ್ಸರ್ ಬಾರಿಸಿ ಅಜೇಯ 175 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 265 ಆಗಿತ್ತು. ಈ ದಾಖಲೆ ಈಗಲೂ ಅಜೇಯವಾಗಿದೆ.
ವೈಯಕ್ತಿಕ ಗರಿಷ್ಠ ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಬ್ರೆಡನ್ ಮೆಕಲಂ ಅವರಿಗೂ ಸ್ಥಾನ. ಐಪಿಎಲ್ 2008ರಲ್ಲಿ ಕೆಕೆಆರ್ ಪರ ಆಡಿದ ಇವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲೇ ಅಬ್ಬರ ನಡೆಸಿದ್ದರು. ಇವರು ಈ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು ಆಡಿದ 73 ಎಸೆತಗಳಲ್ಲಿ 10 ಬೌಂಡರಿ, 13 ಸಿಕ್ಸರ್ ಸಹಿತ ಅಜೇಯ 154 ರನ್ ಸಿಡಿಸಿ ಆರ್ಭಟಿಸಿದ್ದಾರೆ.
ಪಟ್ಟಿಯಲ್ಲಿ ರಾಹುಲ್‌ಗೂ ಸ್ಥಾನ
ಐಪಿಎಲ್‌ನಲ್ಲಿ ಭಾರತದ ಪರ 150ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಅಗ್ರ ಸ್ಥಾನ. ಇವರು ಇದೇ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದ್ದರು. ಇವರು 67 ಎಸೆತಗಳಲ್ಲಿ ಅಜೇಯ 152 ರನ್ ಸಿಡಿಸಿದ್ದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 16 ಬೌಂಡರಿ, 9 ಸಿಕ್ಸರ್‌ಗಳು ಸೇರಿವೆ. ಈ ಅಮೋಘ ಇನಿಂಗ್ಸ್ ಮೂಲಕ ರಾಹುಲ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟರ್ಸ್ ಪಟ್ಟಿ
- ಕ್ರಿಸ್ ಗೇಲ್ (ಆರ್‌ಸಿಬಿ), ಪುಣೆ ವಾರಿಯರ್ಸ್ ವಿರುದ್ಧ, ಅಜೇಯ 175 ರನ್ (2013)
- ಬ್ರೆಂಡನ್ ಮೆಕಲಂ (ಕೆಕೆಆರ್), ಆರ್‌ಸಿಬಿ ವಿರುದ್ಧ, ಅಜೇಯ 158 ರನ್ (2008)
- ಕೆ.ಎಲ್. ರಾಹುಲ್ (ಡೆಲ್ಲಿ ಕ್ಯಾಪಿಟಲ್ಸ್), ಪಂಜಾಬ್ ಕಿಂಗ್ಸ್ ವಿರುದ್ಧ, ಅಜೇಯ 152 ರನ್ (2026)
- ಅಭಿಷೇಕ್ ಶರ್ಮಾ (ಎಸ್‌ಆರ್‌ಹೆಚ್), ಪಂಜಾಬ್ ಕಿಂಗ್ಸ್ ವಿರುದ್ಧ, 141 ರನ್ (2025)
- ಕ್ವಿಂಟನ್ ಡಿ ಕಾಕ್ (ಎಲ್‌ಎಸ್‌ಜಿ), ಕೆಕೆಆರ್ ವಿರುದ್ಧ, ಅಜೇಯ 140 ರನ್ (2022)
- ಅಭಿಷೇಕ್ ಶರ್ಮಾ (ಎಸ್‌ಆರ್‌ಹೆಚ್), ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಅಜೇಯ 135 ರನ್ (2026)
- ಎಬಿ ಡಿ ವಿಲಿಯರ್ಸ್ (ಆರ್‌ಸಿಬಿ), ಮುಂಬೈ ಇಂಡಿಯನ್ಸ್ ವಿರುದ್ಧ, ಅಜೇಯ 133 ರನ್ (2015)
- ಕೆ.ಎಲ್. ರಾಹುಲ್ (ಪಂಜಾಬ್ ಕಿಂಗ್ಸ್), ಆರ್‌ಸಿಬಿ ವಿರುದ್ಧ, ಅಜೇಯ 132 ರನ್ (2020)
- ಎಬಿ ಡಿ ವಿಲಿಯರ್ಸ್ (ಆರ್‌ಸಿಬಿ), ಗುಜರಾತ್ ಲಯನ್ಸ್ ವಿರುದ್ಧ, ಅಜೇಯ 129 ರನ್ (2016)
- ಶುಭಮನ್ ಗಿಲ್ (ಜಿಟಿ) - ಮುಂಬೈ ಇಂಡಿಯನ್ಸ್ ವಿರುದ್ಧ, 129 ರನ್ (2023)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications