ಹೈದರಾಬಾದ್ ಪರ ಅತ್ಯಧಿಕ ರನ್ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳು

ದುಬೈ: ಕ್ರೀಸಿಗಂಟಿ ನಿಂತರೆ ಪಂದ್ಯ ಗೆದ್ದೇ ಗೆಲ್ಲಿಸುವ ಶಕ್ತಿಯಿದೆ ಅನ್ನೋದನ್ನು ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳಾದ ಜಾನಿ ಬೇರ್ಸ್ಟೋವ್, ಡೇವಿಡ್ ವಾರ್ನರ್ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಗುರುವಾರ (ಅಕ್ಟೋಬರ್ 8) ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ 69 ರನ್‌ಗಳ ಗೆಲುವು ದಾಖಲಿಸಿದೆ.
ಆರಂಭಿರಾಗಿ ಆಡಿದ್ದ ನಾಯಕ ಡೇವಿಡ್ ವಾರ್ನರ್ 52 (40 ಎಸೆತ), ಜಾನಿ ಬೇರ್ಸ್ಟೋವ್ 97 (55 ಎಸೆತ) ರನ್ ಬಾರಿಸಿದ್ದರಿಂದ ಎಸ್‌ಆರ್‌ಎಚ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಿಂಗ್ಸ್ XI ಪಂಜಾಬ್, ನಿಕೋಲಸ್ ಪೂರನ್ ಅವರ ಸ್ಫೋಟಕ ಅರ್ಧ ಶತಕದ (37 ಎಸೆತಗಳಲ್ಲಿ 77 ರನ್) ಹೊರತಾಗಿಯೂ ಸೋಲನುಭವಿಸಿದೆ.
ಐಪಿಎಲ್ ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ವೈಯಕ್ತಿಕವಾಗಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ.

ಡೇವಿಡ್ ವಾರ್ನರ್
ಸನ್ ರೈಸರ್ಸ್ ಹೈದರಾಬಾದ್ ಪರ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ ದಾಖಲೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್, ಈಗ ಎಸ್‌ಆರ್‌ಎಚ್ ನಾಯಕರಾಗಿರುವ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. 2017ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಾರ್ನರ್ 126 ರನ್ ಬಾರಿಸಿದ್ದರು.

ಜಾನಿ ಬೇರ್ಸ್ಟೋವ್
ಎಸ್‌ಆರ್‌ಎಚ್‌ಗಾಗಿ ಎರಡನೇ ಅತೀ ಹೆಚ್ಚು ವೈಯಕ್ತಿಕ ರನ್ ಬಾರಿಸಿದ ಕೀರ್ತಿ ಇಂಗ್ಲೆಂಡ್‌ನ ಜಾನಿ ಬೇರ್ಸ್ಟೋವ್‌ಗೆ ಸಲ್ಲುತ್ತದೆ. 2019ರಲ್ಲಿ ತವರು ತಾಣ ಹೈದರಾಬಾದ್‌ನಲ್ಲೇ ನಡೆದಿದ್ದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಬೇರ್ಸ್ಟೋವ್ 114 ರನ್ ಕೊಡುಗೆ ನೀಡಿದ್ದರು.

ಆರ್‌ಸಿಬಿ ವಿರುದ್ಧ ದಾಖಲೆ
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2019ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ 100 ರನ್ ಬಾರಿಸಿದ್ದರು. ಇದು ಎಸ್‌ಆರ್‌ಎಚ್‌ಗಾಗಿ ದಾಖಲಾದ 3ನೇ ಅತ್ಯಧಿಕ ರನ್ ಆಗಿ ಗುರುತಿಸಿಕೊಂಡಿದೆ.

ದುಬೈನಲ್ಲೊಂದು ಮೈಲಿಗಲ್ಲು
ಹೈದರಾಬಾದ್ ಪರ ಅತ್ಯಧಿಕ ರನ್ ಬಾರಿಸಿದ 4ನೇ ದಾಖಲೆ ಜಾನಿ ಬೇರ್ಸ್ಟೋವ್ ಅವರದ್ದು. ಅಂದರೆ ಅಕ್ಟೋಬರ್ 8ರಂದು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬೇರ್ಸ್ಟೊವ್ ಬಾರಿಸಿದ 97 ರನ್ ದಾಖಲೆಯಾಗಿ ಉಳಿದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಜಾನಿ ಈ ಸಾಧನೆ ನಿರ್ಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications