ಮುಂಬೈ ವಿರುದ್ಧ ಪಂದ್ಯ ಸೋತರೂ ದಾಖಲೆ ಬರೆದ ಕರನ್-ತಾಹಿರ್

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 23) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಆದರೆ ಈ ಪಂದ್ಯದಲ್ಲಿ ಸಿಎಸ್‌ಕೆ ಆಟಗಾರರಾದ ಸ್ಯಾಮ್ ಕರನ್ ಮತ್ತು ಇಮ್ರಾನ್ ತಾಹಿರ್ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು ಕೇವಲ 114 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 12.2 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 116 ರನ್ ಗಳಿಸಿತು.
ಚೆನ್ನೈ ತಂಡ ಎದುರಾಳಿಗೆ 100+ ರನ್ ಗುರಿ ನೀಡಲು ಪ್ರಮುಖ ಕಾರಣವೆಂದರೆ ಸ್ಯಾಮ್ ಕರನ್. 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕರನ್, 47 ಎಸೆತಗಳಿಗೆ 52 ರನ್ ಬಾರಿಸಿದರು. ಇನ್ನು ಧೋನಿ 16, ಶಾರ್ದೂಲ್ ಠಾಕೂರ್ 11, ಇಮ್ರಾನ್ ತಾಹಿರ್ 13 ರನ್ ಬಾರಿಸಿದ್ದರು.
ಇಮ್ರಾನ್ ತಾಹಿರ್ ಮತ್ತು ಸ್ಯಾಮ್ ಕರನ್ ಈ ಪಂದ್ಯದಲ್ಲಿ 43 ರನ್ ಜೊತೆಯಾಟ ನೀಡಿದ್ದರು. ಇದು ದಾಖಲೆಗಾಗಿ ಗುರುತಿಸಿಕೊಂಡಿದೆ. 8 ವಿಕೆಟ್‌ಗಳು ಉರುಳಿದ್ದಾಗ ತಂಡವೊಂದರಿಂದ ಬಂದ ಅತ್ಯಧಿಕ ಜೊತೆಯಾಟವಾಗಿ ಕರನ್-ತಾಹಿರ್ ನೀಡಿದ 43 ರನ್ ಗುರುತಿಸಿಕೊಂಡಿದೆ.
9ನೇ ವಿಕೆಟ್‌ನಲ್ಲಿ ಬಂದ ಅತ್ಯಧಿಕ ಜೊತೆಯಾಟದ ದಾಖಲೆಗಳು ಕೆಳಗಿವೆ
* 43 ರನ್, ಸ್ಯಾಮ್ ಕರನ್-ಇಮ್ರಾನ್ ತಾಹಿರ್, vs ಮುಂಬೈ ಇಂಡಿಯನ್ಸ್, ಶಾರ್ಜಾ, 2020 *
* 41 ರನ್, ಎಂಎಸ್ ಧೋನಿ-ಆರ್ ಅಶ್ವಿನ್, vs ಮುಂಬೈ ಇಂಡಿಯನ್ಸ್, ಕೋಲ್ಕತ್ತಾ, 2013
* 41 ರನ್, ಡ್ವೇನ್ ಬ್ರಾವೋ-ಇಮ್ರಾನ್ ತಾಹಿರ್, vs ಮುಂಬೈ ಇಂಡಿಯನ್ಸ್, ಮುಂಬೈ, 2018
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications