ICC WTC Final Tickets: ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಸಿದ್ಧವಾಗಿವೆ. ಜೂನ್ 18-22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಮೊದಲ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದತ್ತ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತವಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಕೊಟ್ಟಿದ್ದೂ ಅಭಿಮಾನಿಗಳಿಗೆ ಖುಷಿ ನೀಡಿದೆ.
ನಿಯಮದ ಪ್ರಕಾರ, ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಡಳಿತ ಮಂಡಳಿಯು ಲಭ್ಯವಿರುವ ಟಿಕೆಟ್‌ಗಳ ಶೇಕಡಾವಾರು ಪ್ರಮಾಣವನ್ನು ಬ್ಯಾಲಟ್ ಪ್ರಕ್ರಿಯೆಯ ಮೂಲಕ ನೀಡುತ್ತದೆ ಈ ಪ್ರಕ್ರಿಯೆ ಈಗಾಗಲೇ ಮೇ 13ಕ್ಕೆ ಕೊನೆಗೊಂಡಿದೆ.

ಟಿಕೆಟ್ ಬೆಲೆಯಲ್ಲಿ ವ್ಯತ್ಯಾಸ
ಬ್ಯಾಲಟ್ ಪ್ರಕ್ರಿಯೆ ಮೂಲಕ ಕೆಲವಷ್ಟೇ ಅದೃಷ್ಟಶಾಲಿ ಅಭಿಮಾನಿಗಳು ಟಿಕೆಟ್ ಪಡೆದುಕೊಳ್ಳುತ್ತಾರೆ. ಇನ್ನುಳಿದ ಟಿಕೆಟ್ ಮತ್ತು ಪ್ಯಾಕೇಜಸ್‌ಗಳು ಐಸಿಸಿಯ ಅಧಿಕೃತ ಟಿಕೆಟ್ ಆ್ಯಂಡ್ ಟ್ರಾವೆಲ್ ಏಜೆಂಟ್‌ಗಳು ವಿತರಿಸುತ್ತಾರೆ. ಈ ಟಿಕೆಟ್‌ಗಳ ಬೆಲೆ ವ್ಯತ್ಯಾಸವಿರಲೂಬಹುದು.

ದುಬಾರಿ ಬೆಲೆಯ ಟಿಕೆಟ್!
ಇನ್‌ಸೈಡ್ ಸ್ಪೋರ್ಟ್ಸ್ ವರದಿಯ ಪ್ರಕಾರ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಕೆಲ ಅಭಿಮಾನಿಗಳು ದುಬಾರಿ ಬೆಲೆಗೆ ಖರೀದಿಸಿದ್ದಾರೆ. ಕ್ರಿಕೆಟ್ ಮೇಲಿನ ಕ್ರೇಝ್‌ನಿಂದಾಗಿ ಅಭಿಮಾನಿಗಳು ಖರೀದಿಸಿರುವ ಟಿಕೆಟ್‌ಗಳ ಬೆಲೆಯೆಷ್ಟು ಗೊತ್ತಾ? ಸುಮಾರು 2 ಲಕ್ಷ ರೂ.ಗಳಷ್ಟು!.

ಸೌಲಭ್ಯಗಳಿತೆ ತಕ್ಕಂತೆ ಟಿಕೆಟ್
ಐಸಿಸಿಯಿಂದ ಆರಿಸಲ್ಪಟ್ಟ ಟಿಕೆಟ್ ಏಜೆಂಟ್ ಕಂಪನಿಯೊಂದು ಹೇಳುವಂತೆ, ಪ್ರತೀ ವಿಭಾಗದಲ್ಲೂ ಟಿಕೆಟ್ ಬುಕಿಂಗ್‌ಗೆ ಒಳ್ಳೆಯ ಬೇಡಿಕೆಯಿತ್ತು. ಟಿಕೆಟ್ ಆಫರ್‌ನಲ್ಲಿ ಪಂದ್ಯದ ಹಿಂದಿನ ಅಲ್ಲೇ ತಂಗಲು ವ್ಯವಸ್ಥೆಯಿರುವ ಟಿಕೆಗಳೂ ಇತ್ತು. ಅಲ್ಲದೆ ಪಂದ್ಯ ನಡೆಯುವ ಸೌತಾಂಪ್ಟನ್‌ನ ಹ್ಯಾಮ್‌ಶೈರ್‌ಬೌಲ್‌ಗೆ ತೆರಳಿ ಪಂದ್ಯ ವೀಕ್ಷಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ರೀತಿಯಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications