For Quick Alerts
ALLOW NOTIFICATIONS  
For Daily Alerts
 

IPL Partnerships: ಐಪಿಎಲ್‌ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟಗಳ ಬಗ್ಗೆ ಮಾಹಿತಿ ಇಲ್ಲಿದೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿ ಇರುತ್ತದೆ. ಈ ಲೀಗ್‌ನಲ್ಲಿ ಒಬ್ಬ ಬ್ಯಾಟರ್‌ ನಿಂತು ರನ್ ಬಾರಿಸಲು ಆರಂಭಿಸಿದರೆ, ಅವನಿಂದ ಪ್ರೇರಣೆ ಪಡೆದು ಇನ್ನೊಬ್ಬ ಆಡಲು ಆರಂಭಿಸುತ್ತಾನೆ. ಆಗ ತಂಡಕ್ಕೆ ಅನುಕೂಲವಾಗುತ್ತದೆ. ಈ ಜೊತೆಯಾಟಗಳು ಐಪಿಎಲ್‌ ಪಂದ್ಯದ ಚಿತ್ರಣವನ್ನೇ ಬದಲಿಸುತ್ತವೆ. ಆರಂಭದಲ್ಲಿ ಎದುರಾಳಿಗಳನ್ನು ಕಾಡುವ ಈ ಬ್ಯಾಟರ್ಸ್‌ ಕೊನೆಗೆ ಫಲಿತಾಂಶದಲ್ಲಿ ತಮ್ಮ ತಂಡದ ಹೆಸರು ಬರೆದು ಬಿಡುತ್ತಾರೆ. ಅದೆಷ್ಟೋ ಮ್ಯಾಚ್‌ ವಿನ್ನಿಂಗ್ ಜೊತೆಯಾಟಗಳು ಬಂದಿವೆ. ಈ ಬಗ್ಗೆ ವರದಿ ಇಲ್ಲಿದೆ.

18ನೇ ಆವೃತ್ತಿಯ ಐಪಿಎಲ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಆಟಗಾರರು ತಮ್ಮ ಸ್ತಿರ ಪ್ರದರ್ಶನದ ಪ್ರಭಾವದಿಂದ ತಂಡಕ್ಕೆ ನೆರವಾಗುತ್ತಾರೆ. ಐಪಿಎಲ್‌ ಜಯದಲ್ಲಿ ವಿಶೇಷ ಕೊಡುಗೆ ನೀಡುವ ಜೊತೆಯಾಟಗಳು ಸಾಕಷ್ಟು ಮೂಡಿಬಂದಿವೆ. ಈ ಪಟ್ಟಿಯಲ್ಲಿ ಆರ್‌ಸಿಬಿಗೆ ಅಗ್ರ ಸ್ಥಾನ.

Highest Partnerships Recorded in IPL History Virat Kohli amp amp ABD Dominant IPL Partnerships

ವಿರಾಟ್, ಎಬಿಡಿಗೆ ಅಗ್ರ ಸ್ಥಾನ

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ ಹಲವು ಬಾರಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಗಿದ್ದಾರೆ. ಇದೇ ರೀತಿ ಮೇ 10, 2022ರಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧದ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈ ವೇಳೆ ಈ ಜೋಡಿ ಎರಡನೆ ವಿಕೆಟ್‌ಗೆ 229 ರನ್‌ ಜೊತೆಯಾಟದ ಕಾಣಿಕೆಯನ್ನು ನೀಡಿತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 248 ರನ್‌ ಸಿಡಿಸಿತ್ತು. ವಿರಾಟ್‌ 109 ರನ್‌ ಸಿಡಿಸಿದ್ದರು. ಸ್ಫೋಟಕ ಬ್ಯಾಟರ್‌ ಎಬಿಡಿ ಜಸ್ಟ್‌ 52 ಎಸೆತಗಳಲ್ಲಿ 10 ಬೌಂಡರಿ, 12 ಸಿಕ್ಸರ್‌ ಸಹಾಯದಿಂದ 129 ರನ್‌ ಚಚ್ಚಿ ತಂಡಕ್ಕೆ ಆಧಾರವಾಗಿದ್ದರು. ಈ ಪಂದ್ಯವನ್ನು ಆರ್‌ಸಿಬಿ 144 ರನ್‌ಗಳಿಂದ ಗೆದ್ದಿತ್ತು.

ಕ್ರಮ
ಸಂಖ್ಯೆ
ಆಟಗಾರ ತಂಡ ಜೊತೆಯಾಟ ವಿಕೆಟ್‌ಗೆ ವಿರುದ್ಧ ದಿನಾಂಕ
1 ವಿರಾಟ್ ಕೊಹ್ಲಿ, ಎಬಿಡಿ ಆರ್‌ಸಿಬಿ 229 2ನೇ ವಿಕೆಟ್‌ ಜಿಎಲ್‌ ಮೇ 14, 2016
2 ವಿರಾಟ್ ಕೊಹ್ಲಿ, ಎಬಿಡಿ ಆರ್‌ಸಿಬಿ 215* 2ನೇ ವಿಕೆಟ್‌ ಎಂಐ ಮೇ 10, 2016
3 ಕೆಎಲ್ ರಾಹುಲ್‌, ಕ್ವಿಂಟನ್‌ ಡಿಕಾಕ್‌ ಎಲ್‌ಎಸ್‌ಜಿ 210* ಮೊದಲ ವಿಕೆಟ್‌ ಕೆಕೆಆರ್‌ ಮೇ 18, 2022
4 ಶುಭಮನ್‌ ಗಿಲ್‌, ಬಿ ಸಾಯಿ ಸುದರ್ಶನ ಜಿಟಿ 210 ಮೊದಲ ವಿಕೆಟ್‌ ಸಿಎಸ್‌ಕೆ ಮೇ 140 2024
5 ಶಾನ್‌ ಮಾರ್ಷ್‌, ಆಡಂ ಗಿಲ್‌ಕ್ರಿಸ್ಟ್‌ ಪಂಜಾಬ್‌ 206 2ನೇ ವಿಕೆಟ್‌ ಆರ್‌ಸಿಬಿ ಮೇ 17, 2011
6 ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್‌ ಆರ್‌ಸಿಬಿ 204* 2ನೇ ವಿಕೆಟ್‌ ಡೆಲ್ಲಿ ಮೇ 17, 2012
7 ಡೇವಿಡ್‌ ವಾರ್ನ್‌, ನಮನ್‌ ಓಜಾ ಡೆಲ್ಲಿ 189* 2ನೇ ವಿಕೆಟ್‌ ಡಿಸಿಎಚ್‌ ಮೇ 10, 2012
8 ಡೇವಿಡ್‌ ವಾರ್ನ್‌, ಜಾನಿ ಬೇರ್‌ಸ್ಟೋ ಎಸ್‌ಆರ್‌ಎಚ್‌ 185 ಮೊದಲ ವಿಕೆಟ್‌ ಆರ್‌ಸಿಬಿ ಮೇ 31, 2019
9 ಕ್ರಿಸ್ ಲಿಯಾನ್‌, ಗೌತಮ್‌ ಗಂಭೀರ್‌ ಕೆಕೆಆರ್‌ 184* ಮೊದಲ ವಿಕೆಟ್‌ ಜಿಿಎಲ್‌ ಏ.7, 2017
10 ಕೆಎಲ್ ರಾಹುಲ್, ಮಯಾಂಕ್‌ ಅಗರ್‌ವಾಲ್‌ ಪಂಂಜಾಬ್‌ 183 ಮೊದಲ ವಿಕೆಟ್‌ ಆರ್ ಆರ್‌ ಸೆ.27, 2020
11 ಋತುರಾಜ್‌ ಗಾಯಕ್ವಾಡ್‌, ಡ್ವೇನ್ ಕಾನ್ವೆ ಸಿಎಸ್‌ಕೆ 182 ಮೊದಲ ವಿಕೆಟ್‌ ಎಸ್‌ಆರ್‌ಎಚ್‌ ಮೇ 1, 2022
12 ಶೇನ್ ವ್ಯಾಟ್ಸನ್‌, ಫಾಫ್‌ ಸಿಎಸ್‌ಕೆ 181* ಮೊದಲ ವಿಕೆಟ್‌ ಪಂಜಾಬ್‌ ಅ,4, 2020
13 ದೆವದತ್‌ ಪಡಿಕ್ಕಲ್‌, ವಿರಾಟ್‌ ಕೊಹ್ಲಿ, ಆರ್‌ಸಿಬಿ 181* ಮೊದಲ ವಿಕೆಟ್‌ ರಾಜನಸ್ಥಾ ಏ.22, 2021
14 ಕೇನ್‌ ವಿಲಿಯಮ್ಸನ್‌, ಶಿಖರ್‌ ಧವನ್‌ ಎಸ್‌ಆರ್‌ಎಚ್ 176* 2ನೇ ವಿಕೆಟ್‌ ಡೆಲ್ಲಿ ಮೇ 10, 2018
15 ವಿರಾಟ್‌ ಕೊಹ್ಲಿ, ಫಾಫ್‌ ಆರ್‌ಸಿಬಿ 172 ಮೊದಲ ವಿಕೆಟ್‌ ಎಸ್‌ಆರ್‌ಎಚ್‌ ಮೇ 18, 2023

ಎರಡನೇ ಅತ್ಯುತ್ತಮ ಜೊತೆಯಾಟ ಸಹ ಇದೇ ಜೋಡಿಯಿಂದ ಮೂಡಿ ಬಂದಿರುವುದು ವಿಶೇಷ. ಮುಂಬೈ ಇಂಡಿಯನ್ಸ್‌ ವಿರುದ್ಧ ವಾಂಖೇಡೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 235 ರನ್‌ ಸೇರಿಸಿತು. ಈ ವೇಳೆ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಎಬಿಡಿ 59 ಎಸೆತಗಳಲ್ಲಿ 19 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ ಅಜೇಯ 133 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಸೇರಿಸಿತು.

Story first published: Saturday, March 15, 2025, 15:24 [IST]
Other articles published on Mar 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+