Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Highest strike rates: ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಸ್ಟ್ರೈಕ್‌ ರೇಟ್‌ ಹೊಂದಿರುವ ಟಾಪ್‌ 5 ಬ್ಯಾಟರ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗ ಅಪಾರ ಅಭಿಮಾನಿಗಳನ್ನು ಕೈ ಬೀಸಿ ಕರೆಯುತ್ತಿದೆ. ಈ ಲೀಗ್‌ನಲ್ಲಿ ಹಲವು ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ವೇಳೆ ಹಲವು ಆಟಗಾರರು ರನ್‌ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಯುವ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್‌ ರೇಟ್‌ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಯುವ ಆಟಗಾರರೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಟಾಪ್‌ 5ನಲ್ಲಿ ಇರುವ ಬ್ಯಾಟರ್‌ಗಳ ಸ್ಟ್ರೈಕ್‌ ರೇಟ್‌ 200ಕ್ಕೂ ಹೆಚ್ಚಾಗಿರುವುದು ವಿಶೇಷವಾಗಿದೆ.

ಅತಿ ಹೆಚ್ಚು ಸ್ಟ್ರೈಕ್‌ ರೇಟ್‌ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಪಂಜಾಬ್‌ ಕಿಂಗ್ಸ್ ತಂಡದ ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯಾ ಅವರಿಗೆ ಮೊದಲ ಸ್ಥಾನ. ಇವರು ಆಡಿದ 9 ಪಂದ್ಯಗಳಲ್ಲಿ 242.37ರ ಸರಾಸರಿಯಲ್ಲಿ 286 ರನ್‌ ಕಲೆ ಹಾಕಿದ್ದಾರೆ. ಇವರ ಬ್ಯಾಟ್‌ನಿಂದ 21 ಬೌಂಡರಿ, 26 ಸಿಕ್ಸರ್‌ಗಳು ಹರಿದು ಬಂದಿವೆ.

Highest strike rates

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ರಾಜಸ್ಥಾನ್ ರಾಯಲ್ಸ್‌ ತಂಡದ ವೈಭವ್ ಸೂರ್ಯವಂಶಿ. ಅಬ್ಬಾ, 15 ವರ್ಷದ ಯುವ ಆಟಗಾರ ಆಟಕ್ಕೆ ಇಡೀ ಕ್ರಿಕೆಟ್‌ ಜಗತ್ತು ಸಲಾಂ ಎಂದಿದೆ. ಈ ಪೋರ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ. ಇವರು ಆಡಿದ 10 ಪಂದ್ಯಗಳಲ್ಲಿ 237ರ ಸ್ಟ್ರೈಕ್‌ ರೇಟ್‌ನಲ್ಲಿ 404 ರನ್‌ ಕಲೆ ಹಾಕಿದ್ದಾರೆ. ಇವರು ಆರೆಂಜ್‌ ಕ್ಯಾಪ್‌ ರೇಸ್‌ನಲ್ಲೂ ಇದ್ದಾರೆ.

ಅತಿ ಹೆಚ್ಚು ಸ್ಟ್ರೈಕ್ ರೇಟ್‌ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಇದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ 475 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 210.17 ಆಗಿದೆ.

ಆರ್‌ಸಿಬಿ ಆಟಗಾರನಿಗೂ ಸ್ಥಾನ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ರಜತ್ ಪಾಟಿದಾರ್ ಅವರು ಸಹ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆಟಗಾರ. ಇವರು ಆಡಿದ 10 ಪಂದ್ಯಗಳಲ್ಲಿ 318 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್‌ 200 ಆಗಿದೆ. ಇಷ್ಟೇ ಸ್ಟ್ರೈಕ್‌ ರೇಟ್‌ನಲ್ಲಿ ಕೋಲ್ಕತ್ತಾದ ಫಿನ್ ಅಲೆನ್ ಸಹ ರನ್‌ ಕಲೆ ಹಾಕಿದ್ದಾರೆ.

Story first published: Friday, May 8, 2026, 14:46 [IST]
Other articles published on May 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+