ಐಪಿಎಲ್‌ನಲ್ಲಿ ಚೇಸಿಂಗ್‌ನಲ್ಲಿ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

ದೆಹಲಿ: ಕೀರನ್ ಪೊಲಾರ್ಡ್ ಸ್ಫೋಟಕ ಅರ್ಧ ಶತಕದೊಂದಿಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೇ 1ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 27ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ ರೋಚಕ ಜಯ ಗಳಿಸಿದೆ. ಐಪಿಎಲ್ ಎಂಐ ತಂಡ 200+ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದ ದಾಖಲೆ ಇದಾಗಿದೆ.
ಇದೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್, ವೆಸ್ಟ್ ಇಂಡೀಸ್‌ನ ಪ್ರಮುಖ ಆಟಗಾರ ಕೀರನ್ ಪೊಲಾರ್ಡ್ ಅತೀ ವೇಗದ ಅರ್ಧ ಶತಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 17 ಎಸೆತಗಳಲ್ಲಿ ಪೊಲಾರ್ಡ್ 50 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇದರಿಂದ ಮುಂಬೈ ತಂಡ ಅತ್ಯಧಿಕ ರನ್ ಚೇಸ್ ಮಾಡಿದ ದಾಖಲೆ ಪಟ್ಟಿಗೆ ಸೇರಲು ಸಾಧ್ಯವಾಗಿದೆ.

ಚೆನ್ನೈ ಪರ ರಾಯುಡು ಅಬ್ಬರ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಉತ್ತಮ ಆರಂಭ ಲಭಿಸಿತು. ಫಾಫ್ ಡು ಪ್ಲೆಸಿಸ್ 50 (28), ಮೊಯೀನ್ ಅಲಿ 58 (36), ಅಂಬಾಟಿ ರಾಯುಡು 72 (27), ರವೀಂದ್ರ ಜಡೇಜಾ 22, ಋತುರಾಜ್ ಗಾಯಕ್ವಾಡ್ 4, ಸುರೇಶ್ ರೈನಾ 2 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಗಳಿಸಿತ್ತು.

ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್
ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 38, ರೋಹಿತ್ ಶರ್ಮಾ 35, ಕೃನಾಲ್ ಪಾಂಡ್ಯ 32, ಕೀರನ್ ಪೊಲಾರ್ಡ್ ಅಜೇಯ 87 (34), ಹಾರ್ದಿಕ್ ಪಾಂಡ್ಯ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 219 ರನ್ ಗಳಿಸಿತು. ಪೊಲಾರ್ಡ್ ಪಂದ್ಯ ಗೆಲುವಿನ ಹೀರೋ ಅನ್ನಿಸಿದರು.

ಐಪಿಎಲ್‌ನಲ್ಲಿ 200+ ರನ್ ಚೇಸ್ ದಾಖಲೆಗಳು
* 224 ರನ್, ರಾಜಸ್ಥಾನ್ ರಾಯಲ್ಸ್, vs ಪಂಜಾಬ್ ಕಿಂಗ್ಸ್, ಶಾರ್ಜಾ, 2020
* 219 ರನ್, ಮುಂಬೈ ಇಂಡಿಯನ್ಸ್, vs ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ, 2021*
* 215 ರನ್, ರಾಜಸ್ಥಾನ್ ರಾಯಲ್ಸ್, vs ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್, 2008
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications