Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟ್ಸ್‌ಮನ್‌ಗಳ ಐಡಿಯಾಕ್ಕೆ ವಿಕೆಟ್ ಕೀಪರ್ ತಬ್ಬಿಬ್ಬ: ಗಮ್ಮತ್ತಿನ ವಿಡಿಯೋ!

hilarious run seen during European Cricket Series match

ಬಾರ್ಸಿಲೋನಾ: ಕ್ರಿಕೆಟ್ ಮೈದಾನದಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆದಿದ್ದಿದೆ. ತಮಾಷೆಯ ಸಂಗತಿಗಳೂ ಬಹಳಷ್ಟು ಕಾಣಸಿಕ್ಕಿವೆ. ತೀರಾ ಇತ್ತೀಚೆಗೆ ಇಂಥದ್ದೇ ಗಮ್ಮತ್ತಿನ ಸಂಗತಿ ಕ್ರಿಕೆಟ್‌ನಲ್ಲಿ ನಡೆದಿದೆ. ಕ್ರಿಕೆಟ್ ತಂಡವೊಂದು ವಿಚಿತ್ರ ರೀತೀಲಿ ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿರುವ ಅಪರೂಪದ ಘಟನೆ ನಡೆದಿದೆ.

ಈ ಗಮ್ಮತ್ತು ನಡೆದಿದ್ದು ಯುರೋಪಿಯನ್ ಕ್ರಿಕೆಟ್ ಸೀರೀಸ್ ಮ್ಯಾಚ್‌ನಲ್ಲಿ. ಬುಧವಾರ (ಅಕ್ಟೋಬರ್ 28) ನಡೆದ ಪಂದ್ಯದಲ್ಲಿ ಕ್ಯಾಟಲೂನ್ಯ ಟೈಗರ್ಸ್ ಸಿಸಿ ಮತ್ತು ಪ್ಯಾಸ್‌ಲೋನಾ ಸಿಸಿ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ವಿಚಿತ್ರ ರನ್ ಮೂಲಕ ಪಂದ್ಯ ಟೈ ಎನಿಸಿದೆ.

ಪಂದ್ಯದ ಕೊನೇ ಎಸೆತಕ್ಕೆ ಕ್ಯಾಟಲೂನ್ಯ ತಂಡಕ್ಕೆ 3 ರನ್‌ಗಳು ಬೇಕಿತ್ತು. ಬ್ಯಾಟ್ಸ್‌ಮನ್ ಅದತ್ ಅಲಿ ಸ್ಟ್ರೈಕ್‌ನಲ್ಲಿದ್ದರು. ಅವರಿಗೆ ಕೊನೇ ಎಸೆತಕ್ಕೆ ಬ್ಯಾಟ್‌ ಮೂಲಕ ಚೆಂಡು ದೂರ ಕಳುಹಿಸಲಾಗಲಿಲ್ಲ. ಚೆಂಡು ಸೀದಾ ಕೀಪರ್ ಕೈ ಸೇರಿತು.

ಕೊನೇ ಎಸೆತದ ಚೆಂಡು ಎದುರಾಳಿ ಕೀಪರ್ ಕೈ ಸೇರಿದ್ದು ಕಂಡೂ ಅದತ್ ಅಲಿ ಸುಮ್ಮನಿರಲಿಲ್ಲ. ತನ್ನ ಜೊತೆ ಆಟಗಾರ ಅಝೀಮ್ ಅಝಮ್ ಅವರನ್ನು ಮತ್ತೊಂದು ರನ್‌ಗಾಗಿ ಕರೆದರು. ಇಬ್ಬರೂ ಕೂಡ ಚೆಂಡಿಗೆ ಹೊಡೆಯದೇನೆ ಎರಡು ರನ್ ಪೂರೈಸಿದರು. 107 ರನ್‌ನಿಂದ ಪಂದ್ಯ ಟೈ ಎನಿಸಿತು. ಅಂತಿಮವಾಗಿ ಗೋಲ್ಡನ್ ಬಾಲ್‌ ವಿಧಾನದಲ್ಲಿ ಕ್ಯಾಟಲೂನ್ಯ ಟೈಗರ್ಸ್ ವಿಜಯಿಯೆನಿಸಿತು.

Story first published: Saturday, October 31, 2020, 9:49 [IST]
Other articles published on Oct 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+