ಟಿ20 ವಿಶ್ವಕಪ್ ಗೆಲುವಿನ ಹರುಷಕ್ಕೆ ವರ್ಷದ ಸಂಭ್ರಮ
ಜೂನ್ 29, 2024 ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ನೆನೆಪು ಹಾರದ ದಿನ. ಇದೇ ದಿನದಂದು ಟೀಮ್ ಇಂಡಿಯಾ ಬ್ರಿಡ್ಜ್‌ಟೌನ್‌ನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ದಿನ. ಟೀಮ್ ಇಂಡಿಯಾ ಇದೇ ದಿನ ಎರಡನೇ ಬಾರಿಗೆ ಟಿ20 ವಿಶ್ವಕಪ್‌ಗೆ ಮುತ್ತಿಟ್ಟು ಸಂಭ್ರಮಿಸಿದ ದಿನ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಟಿ20 ಫಾರ್ಮೆಟ್‌ಗೆ ವಿದಾಯ ಹೇಳಿದ ದಿನ.
ಟೀಮ್ ಇಂಡಿಯಾ ಅಭಿಮಾನಿಗಳು ನೆನಪು ಹಾರಿದರೂ ಎಂದು ನೆನಪಿನಂಗಳದಿಂದ ಮಾಸದ ದಿನಗಳಲ್ಲಿ ಜೂನ್ 29 ಒಂದು. ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನ ಆತಿಥ್ಯದಲ್ಲಿ ನಡೆದ ಪಂದ್ಯದಲ್ಲಿ ಭಾರತ, ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಮೂಲಕ ಹಲವು ವರ್ಷಗಳ ಕಾಲ ಮಾಯಾಜಿಂಕೆಯಂತೆ ಕಾಡಿದ ಐಸಿಸಿ ಟ್ರೋಫಿಯ ಬರಕ್ಕೆ ಬ್ರೇಕ್ ಹಾಕಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಸೇರಿಸಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ವಿರಾಟ್ ಟೂರ್ನಿಯುದಕ್ಕೂ ರನ್ ಕಲೆ ಹಾಕುವಲ್ಲಿ ವಿಫಲರಾಗಿ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.ಕೊನೆಯ ಪಂದ್ಯದಲ್ಲಿ ಅಕ್ಷರ್ ಪಟೇಲ್ (47) ಹಾಗೂ ಶಿವಂ ದುಬೆ (27) ತಂಡದ ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಡೆತ್ ಓವರ್‌ಗಳಲ್ಲಿ ಮಿಂಚಿದ ಬೌಲರ್ಸ್
ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಆರಂಭ ಕಳಪೆಯಾಗಿತ್ತು. ಆದರೆ ಮೂರನೇ ವಿಕೆಟ್‌ಗೆ ಟ್ರಿಸ್ಟನ್ ಸ್ಟಬ್ಸ್ (31) ಹಾಗೂ ಕ್ವಿಂಟನ್ ಡಿಕಾಕ್ (39) ಜೋಡಿ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ (21) ಸ್ಥಿರ ಬ್ಯಾಟಿಂಗ್ ನಡೆಸಿದರು. ಇನ್ನು ಭರವಸೆಯ ಬ್ಯಾಟರ್ ಹ್ಯಾನ್ರಿಕ್ ಕ್ಲಾಸೇನ್ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು. ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ 24 ಎಸೆತಗಳಲ್ಲಿ 26 ರನ್ ಅವಶ್ಯಕತೆ ಇತ್ತು. ಇಲ್ಲಿಂದ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಶ್ರಮಿಸಿತು.

ಟೀಮ್ ಇಂಡಿಯಾ ಬೌಲರ್ಸ್‌ಗಳು ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿದ್ದು ಗೆಲುವಿಗೆ ಕಾರಣವಾಯಿತು. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಕಬಳಿಸಿದರು. ಈ ಮೂಲಕ ಭಾರತ ಇತಿಹಾಸ ನಿರ್ಮಿಸಿತು. ಪಂದ್ಯದ ಕೊನೆಯ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್‌ನಲ್ಲಿ ಕ್ಲಾಸಿಕ್ ಕ್ಯಾಚ್ ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications