Historic Milestone: ರಣಜಿ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದ ಜಮ್ಮು ಮತ್ತು ಕಾಶ್ಮೀರ ಇತಿಹಾಸ
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಇತಿಹಾಸ ನಿರ್ಮಿಸಿದೆ. ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಇದೇ ಮೊದಲ ಬಾರಿಗೆ ಜಮ್ಮು ತಂಡ ಪ್ರವೇಶ ಪಡೆದಿದೆ. ಇಂದೋರ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು 56 ರನ್‌ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ಚಾರಿತ್ರಿಕ ಸಾಧನೆ ಮಾಡಿದೆ. ಜಮ್ಮು ನೀಡಿದ್ದ 291 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಮಧ್ಯಪ್ರದೇಶ ತಂಡ ವಿಫಲವಾಗಿ ಸೋಲು ಕಂಡಿತು.
ಜಮ್ಮು ಮತ್ತು ಕಾಶ್ಮೀತ ಈ ಐತಿಹಾಸಿಕ ಸಾಧನೆ ಮಾಡುವಲ್ಲಿ ಅನುಭವಿ ವೇಗದ ಬೌಲರ್ ಹಾಗೂ ನಾಯಕ ಆಕಿಬ್ ನಬಿ ಅಪಾರ. ಇವರು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 12 ವಿಕೆಟ್‌ಗಳನ್ನು ಕಬಳಿಸಿ ಅಬ್ಬರಿಸಿದ್ದಾರೆ. ಇವರ ಅಬ್ಬರದ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಂದಿದೆ. ಇವರು ಮೊದಲ ಇನಿಂಗ್ಸ್‌ನಲ್ಲಿ 7 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಆರ್ಭಟಿಸಿದ್ದರು.

ಸೋಮವಾರ ಮಧ್ಯಪ್ರದೇಶ 5 ವಿಕೆಟ್‌ಗೆ 87 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರೆಸಿತು. ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವೆಂಕಟೇಶ್ ಅಯ್ಯರ್ ದೊಡ್ಡ ಇನಿಂಗ್ಸ್ ಕಟ್ಟದೇ 17 ರನ್‌ಗಳಿಗೆ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶುಭಂ ಶರ್ಮಾ 32 ರನ್ ಬಾರಿಸಿದರು. ರಾಮವೀರ್ ಗುರ್ಜರ್ (11) ಹಾಗೂ ಆರ್ಯನ್ ಪಾಂಡೆ (22) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಅಂತಿಮವಾಗಿ ಮಧ್ಯಪ್ರದೇಶ 234 ರನ್‌ಗಳಿಗೆ ಆಲೌಟ್ ಆಯಿತು.
ಜಮ್ಮು ಇತಿಹಾಸ
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಜಮ್ಮು ಮತ್ತು ಕಶ್ಮೀರ ತಂಡದ ಪರ ಶುಭಂ ಖಜುರಿಯಾ 60 ಹಾಗೂ ಯಧುವೀರ್ ಸಿಂಗ್ 41 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಜಮ್ಮು ಮೊದಲ ಇನಿಂಗ್ಸ್‌ನಲ್ಲಿ 194 ರನ್‌ಗಳಿಗೆ ಆಲೌಟ್ ಆಯಿತು. ಮಧ್ಯಪ್ರದೇಶ ಪರ ಕುಲ್‌ದೀಪ್ ಸೇನ್ 5 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಯಶ್ ದುಬೆ (58 ರನ್) ಮಾತ್ರ ಜಮ್ಮು ಬೌಲರ್‌ಗಳನ್ನು ಕೊಂಚ ಕಾಡಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಅಂತಿಮವಾಗಿ ಮಧ್ಯಪ್ರದೇಶ 152 ರನ್ ಸಿಡಿಸಿದರು.
ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಜಮ್ಮು ಕಾಶ್ಮೀರ್ ತಂಡ 248 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಮಧ್ಯಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications