ಅಚ್ಚರಿಯ ಫಲಿತಾಂಶ: ದಕ್ಷಿಣ ಆಫ್ರಿಕಾ ಮಣಿಸಿದ ನಮೀಬಿಯಾ ಇತಿಹಾಸ
ಕ್ರಿಕೆಟ್ ಅಂಗಳದಲ್ಲಿ ದಿನವೂ ದಾಖಲೆಗಳು ನಿರ್ಮಾಣವಾಗುತ್ತವೆ. ಅಲ್ಲದೆ ಕೆಲವೊಮ್ಮೆ ಅಚ್ಚರಿಯ ಫಲಿತಾಂಶಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಕ್ರಿಕೆಟ್ ಇತಿಹಾಸದ ಅತ್ಯಂತ ದೊಡ್ಡ ಅಚ್ಚರಿ ಫಲಿತಾಂಶ ಶನಿವಾರ ಹೊರ ಬಿದ್ದಿದೆ. ಕ್ರಿಕೆಟ್ ಅಂಗಳಕ್ಕೆ ಈಗ ಅಂಬೆಗಾಲು ಇಡುತ್ತಾ ಇರುವ ನಮೀಬಿಯಾ, ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ. ಕೊನೆಯ ಓವರ್ ವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ನಮೀಬಿಯಾ ಜಯ ಸಾಧಿಸಿ ಅಬ್ಬರಿಸಿದೆ. ಕೊನೆಯ ಎಸೆತದಲ್ಲಿ ಬೇಕಿದ್ದ ಅಗತ್ಯ ರನ್‌ಗಳನ್ನು ನಮೀಬಿಯಾ ಕಲೆ ಹಾಕಿ ಐತಿಹಾಸಿಕ ಜಯ ದಾಖಲಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ಟಿ20ಯಲ್ಲಿ ಅಸೋಸಿಯೇಟ್ ರಾಷ್ಟ್ರದ ವಿರುದ್ಧ ಇದೇ ಮೊದಲ ಬಾರಿಗೆ ಸೋಲು ಕಂಡಿದೆ.
ನಮೀಬಿಯಾ ಈ ರೀತಿಯ ಅಚ್ಚರಿಯ ಫಲಿತಾಂಶವನ್ನು ನೀಡಿದ್ದು ಇದೇ ಮೊದಲೇನಲ್ಲಾ. ಇದಕ್ಕೂ ಮೊದಲು ಶ್ರೀಲಂಕಾ, ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡವನ್ನು ಮಣಿಸಿದ ಹಿರಿಮೆ ತನ್ನದಾಗಿಸಿಕೊಂಡಿದೆ. ನಮೀಬಿಯಾ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಅರ್ಹತೆ ಪಡೆದಿದೆ.

ಏಕೈಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ತಂಡದ ಪರ ಲುವಾನ್-ಡ್ರೆ ಪ್ರಿಟೋರಿಯಸ್ 22, ರೂಬಿನ್ ಹರ್ಮನ್ 23, ಜೇಸನ್ ಸ್ಮಿತ್ 31, ಬ್ಜೋರ್ನ್ ಫೋರ್ಟುಯಿನ್ 19 ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿದರು. ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಕಲೆ ಹಾಕಿತು. ನಮೀಬಿಯಾ ಪರ ರೂಬೆನ್ ಟ್ರಂಪೆಲ್‌ಮನ್ 3 ವಿಕೆಟ್ ಪಡೆದರು.
ನಮೀಬಿಯಾ ಪರ ಗೆರ್ಹಾರ್ಡ್ ಎರಾಸ್ಮಸ್ (21), ಲೌರೆನ್ ಸ್ಟೀನ್‌ಕ್ಯಾಂಪ್ (13), ಮಲನ್ ಕ್ರುಗರ್ (18), ಜೆಜೆ ಸ್ಮಿತ್ (13) ಜವಾಬ್ದಾರಿಯನ್ನು ಮರೆತರು. ನಮೀಬಿಯಾ 5 ವಿಕೆಟ್‌ಗೆ 84 ರನ್ ಕಳೆದುಕೊಂಡಿತ್ತು. ಆದರೆ ನಮೀಬಿಯಾದ ವಿಕೆಟ್ ಕೀಪರ್ ಜಾನ್ ಗ್ರೀನ್ ದಕ್ಷಿಣ ಆಫ್ರಿಕಾ ತಂಡದಿಂದ ಜಯವನ್ನು ಕಸಿದುಕೊಂಡರು. ಇವರು 23 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 30 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ರೂಬೆನ್ ಟ್ರಂಪೆಲ್‌ಮನ್ ಅಜೇಯ 11 ರನ್ ಸಿಡಿಸಿ ಅಬ್ಬರಿಸಿದರು.
ಕೊನೆಯ ಓವರ್ ಮಿಂಚು
ದಕ್ಷಿಣ ಆಫ್ರಿಕಾ ಪರ ಆಂಡಿಲೆ ಸಿಮೆಲೇನ್ ಕೊನೆಯ ಓವರ್ ಮಾಡಲು ಮುಂದಾದರು. ಈ ವೇಳೆ ಜಾನ್ ಗ್ರೀನ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವಿನ ಹತ್ತಿರಕ್ಕೆ ತಂಡವನ್ನು ತಂದು ನಿಲ್ಲಿಸಿದರು. ಎರಡನೇ ಎಸೆತದಲ್ಲಿ ಸಿಂಗಲ್, ಮೂರನೇ ಎಸೆತದಲ್ಲಿ ಡಬಲ್, ನಾಲ್ಕನೇ ಎಸೆತದಲ್ಲಿ ಸಿಂಗಲ್ ರನ್ ಪಡೆದರು. ಐದನೇ ಎಸೆತದಲ್ಲಿ ಒಂದೇ ಒಂದು ರನ್ ಬಾರಲಿಲ್ಲ. ಕೊನೆಯ ಎಸೆತದಲ್ಲಿ ಒಂದು ರನ್ ಅವಶ್ಯಕತೆ ಇತ್ತು. ಆಗ ಜಾನ್ ಗ್ರೀನ್ ಬೌಂಡರಿ ಬಾರಿಸಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications