ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅಚ್ಚರಿ ಫಲಿತಾಂಶ ನೀಡಿದೆ. ಬಾಂಗ್ಲಾದೇಶ ತನ್ನ ನ್ಯೂಜಿಲೆಂಡ್ ಪ್ರವಾಸದ ಮೊದಲ ಟಿ20 ಪಂದ್ಯದಲ್ಲಿ ಅದ್ಭುತ ಜಯ ದಾಖಲಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಕಿವೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ತವರಿನಲ್ಲಿ ಬಾಂಗ್ಲಾದೇಶ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದು ಇದೇ ಮೊದಲು.
ಬಾಂಗ್ಲಾದೇಶದ ಬೌಲರ್‌ಗಳು ಕೇವಲ ಒಂದು ರನ್‌ಗೆ ನ್ಯೂಜಿಲೆಂಡ್‌ನ ಮೂರು ವಿಕೆಟ್‌ಗಳನ್ನು ಅಬ್ಬರಿಸಿತು. ಇದಾದ ಬಳಿಕ ನ್ಯೂಜಿಲೆಂಡ್ ಜವಾಬ್ದಾರಿಯುತ ಆಟವಾಡಿ ಸಾಧಾರಣ ಗುರಿಯನ್ನು ಬಾಂಗ್ಲಾ ತಂಡಕ್ಕೆ ನೀಡಿತು. ಈ ಗುರಿಯನ್ನು ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು ಇನ್ನು ಎಂಟು ಎಸೆತ ಬಾಕಿ ಇರುವಂತೆ ಮುಟ್ಟಿ ಸಂಭ್ರಮಿಸಿತು.

ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ತಂಡ ಸಂಘಟಿತ ಆಟದ ಪ್ರದರ್ಶನವನ್ನು ನೀಡಿತು. ಮೊದಲು ಬ್ಯಾಟ್ ಮಾಡಿದ ಕಿವೀಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 ರನ್ ಸಿಡಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾ 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 137 ರನ್ ಸಿಡಿಸಿ ಗೆಲುವು ದಾಖಲಿಸಿತು.
ನ್ಯೂಜಿಲೆಂಡ್ ತಂಡ ಫಿನ್ ಅಲೆನ್, ಟೀಮ್ ಸಿರ್ಫ್ಟ್, ಗ್ಲೇನ್ ಫಿಲಿಪ್ಸ್, ಡೇರಿಲ್ ಮಿಚೆಲ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. 20 ರನ್‌ಗಳಿಗೆ ಕಿವೀಸ್ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಾರ್ಕ್ ಚಾಪ್ಮನ್ ಸಹ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ 23, ಅಡಂ ಮಿಲ್ನೆ 16 ರನ್ ಸೇರಿಸಿದರು. ಮಧ್ಯಮ ಕ್ರಮಾಂಕದ ಜೇಮ್ಸ್ ನೀಶಾಮ್ 29 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 48 ರನ್ ಸಿಡಿಸಿದರು.

ಬಾಂಗ್ಲಾ ಪರ ಶೋರಿಫುಲ್ ಇಸ್ಲಾಂ 3, ಮೆಹದಿ ಹಸನ್ ಹಾಗೂ ಮುಸ್ತಾಫಿಜುರ್ ರೆಹಮಾನ್ ತಲಾ ಎರಡು ವಿಕೆಟ್ ಪಡೆದರು.
ಬಾಂಗ್ಲಾ ಪರ ರೋನಿ ತಾಲೂಕ್ದಾರ್ 10, ನಜ್ಮುಲ್ ಹೊಸೈನ್ ಶಾಂತೋ 19, ಸೌಮ್ಯ ಸರ್ಕಾರ್ 22, ತೌಹಿದ್ 19 ರನ್ ಬಾರಿಸಿದರು. ಸ್ಟಾರ್ ವಿಕೆಟ್ ಕೀಪರ್ ಲಿಟನ್ ದಾಸ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 42 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಈ ಗೆಲುವಿನ ಮೂಲಕ ಬಾಂಗ್ಲಾ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.