Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿದವರ ಸಂಪೂರ್ಣ ಪಟ್ಟಿ

Hitting six off the last ball to win in IPL history-statistics

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ XI ಪಂಜಾಬ್ ರೋಚಕ 8 ವಿಕೆಟ್ ಗೆಲುವು ಕಂಡಿದೆ. ಕೊನೇ ಎಸೆತಕ್ಕೆ ನಿಕೋಲಸ್ ಪೂರನ್ ಸಿಕ್ಸ್ ಚಚ್ಚಿ ಪಂಜಾಬ್ ಗೆಲುವನ್ನು ಸಾರಿದರು. ಪಂದ್ಯದ ಕೊನೇ ಕ್ಷಣದಲ್ಲಿ ಕೊನೇ ಎಸೆತಕ್ಕೆ 1 ರನ್‌ ಬೇಕಿತ್ತು. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಪೂರನ್ ಚೆಂಡನ್ನು ಬೌಂಡರಿ ಲೈನ್ ದಾಟಿಸಿ ಪಂದ್ಯ ಮುಗಿಸಿದರು.

ಪಂಜಾಬ್-ಬೆಂಗಳೂರು ಪಂದ್ಯದಲ್ಲಿ ಕ್ರಿಸ್ ಗೇಲ್ (53 ರನ್) ಮತ್ತು ನಾಯಕ ಕೆಎಲ್ ರಾಹುಲ್ (61) ಅಬ್ಬರದ ಬ್ಯಾಟಿಂಗ್ ಕೂಡ ಕಾಣಸಿಕ್ಕಿತು. ಅಂದ್ಹಾಗೆ ಐಪಿಎಲ್ ಇತಿಹಾಸದಲ್ಲಿ ಪಂದ್ಯದ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿದ ಕ್ಷಣಗಳು ಹಿಂದೆ ಅನೇಕ ಬಾರಿ ಕಾಣಸಿಕ್ಕಿದೆ.

ಐಪಿಎಲ್‌ ಇತಿಹಾಸದಲ್ಲಿ ಪಂದ್ಯ ರೋಚಕ ಹಂತಕ್ಕೆ ತಲುಪಿದ್ದಾಗ ಕೊನೇ ಎಸೆತಕ್ಕೆ ಸಿಕ್ಸ್‌ ಬಾರಿಸಿ ಪಂದ್ಯ ಗೆಲ್ಲಿಸಿದ ಅಪರೂಪದ ಕ್ಷಣಗಳ ಮಾಹಿತಿ ಕೆಳಗಿದೆ.

ಹಿಟ್‌ಮ್ಯಾನ್‌ಗೆ ಅಗ್ರ ಸ್ಥಾನ

ಹಿಟ್‌ಮ್ಯಾನ್‌ಗೆ ಅಗ್ರ ಸ್ಥಾನ

ಐಪಿಎಲ್ ಪಂದ್ಯವೊಂದು ರೋಚಕ ಹಂತ ತಲುಪಿದ್ದಾಗ ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿ ಪಂದ್ಯವನ್ನು ತನ್ನದೇ ಶೈಲಿಯಲ್ಲಿ ಗೆಲ್ಲಿಸಿಕೊಟ್ಟ ದಾಖಲೆಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಹೀಗೆ ಒಟ್ಟಿಗೆ ಮೂರು ಬಾರಿ ಪಂದ್ಯ ಗೆಲ್ಲಿಸಿದ್ದಾರೆ.

ಅಂಬಾಟಿ ರಾಯುಡು

ಅಂಬಾಟಿ ರಾಯುಡು

* ರೋಹಿತ್ ಶರ್ಮಾ vs ಕೋಲ್ಕತ್ತಾ ನೈಟ್ ರೈಡರ್ಸ್, 2009
* ರೋಹಿತ್ ಶರ್ಮಾ vs ಪೂಣೆ ವಾರಿಯರ್ಸ್ ಇಂಡಿಯಾ, 2011
* ಅಂಬಾಟಿ ರಾಯುಡು vs ಕೋಲ್ಕತ್ತಾ ನೈಟ್ ರೈಡರ್ಸ್, 2011

ಡ್ವೇನ್ ಬ್ರಾವೋ

ಡ್ವೇನ್ ಬ್ರಾವೋ

* ರೋಹಿತ್ ಶರ್ಮಾ vs ಡೆಲ್ಲಿ ಕ್ಯಾಪಿಟಲ್ಸ್, 2012
* ಸೌರಭ್ ತಿವಾರಿ vs ಪೂಣೆ ವಾರಿಯರ್ಸ್ ಇಂಡಿಯಾ, 2012
* ಡ್ವೇನ್ ಬ್ರಾವೋ vs ಕೋಲ್ಕತ್ತಾ ನೈಟ್ ರೈಡರ್ಸ್, 2012

ನಿಕೋಲಸ್ ಪೂರನ್

ನಿಕೋಲಸ್ ಪೂರನ್

* ಎಂಎಸ್ ಧೋನಿ vs ಕಿಂಗ್ಸ್ XI ಪಂಜಾಬ್, 2016
* ಮಿಚೆಲ್ ಸ್ಯಾಂಟ್ನರ್ vs ರಾಜಸ್ಥಾನ್ ರಾಯಲ್ಸ್, 2019
* ನಿಕೋಲಸ್ ಪೂರನ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2020

Story first published: Friday, October 16, 2020, 10:07 [IST]
Other articles published on Oct 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+