ಐಪಿಎಲ್‌ಗಿಂತ, ಬಿಗ್ ಬ್ಯಾಷ್ ಲೀಗ್ ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತ ಕಡಿಮೆ
ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಆಶ್ರಯದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಸೇರಿದಂತೆ 8 ರಾಷ್ಟ್ರಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಈಗ ಸದ್ಯ ಭಾರತದಲ್ಲಿ ಆಟಗಾರರು ದೇಶೀಯ ಟೂರ್ನಿ ಆಡುವಲ್ಲಿ ಬ್ಯೂಸಿ ಆಗಿದ್ದಾರೆ. ಇನ್ನು ಆಸ್ಟ್ರೇಲಿಯಾ ಆಟಗಾರರು ಬಿಗ್ ಬ್ಯಾಷ್ ಲೀಗ್ ಆಡುತ್ತಿದ್ದಾರೆ. ಬಿಗ್ ಬ್ಯಾಷ್ ಲೀಗ್ ಸಹ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿದೆ.
ಭಾರತದಲ್ಲಿ ಐಪಿಎಲ್ ನಡೆದಂತೆ, ಬೇರೆ ಬೇರೆ ದೇಶಗಳು ತಮ್ಮ ತಮ್ಮ ಲೀಗ್ ಆರಂಭಿಸಿವೆ. ಅಂತೆಯೇ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ನಡೆಯುತ್ತಿದೆ. ಇತ್ತೀಚಿಗೆ ಬಿಗ್ ಬ್ಯಾಷ್ ಲೀಗ್ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಅಂದಹಾಗೆ ಈ ಪಟ್ಟವನ್ನು ಅಲಂಕರಿಸಿದ ತಂಡಕ್ಕೆ ಸಿಗುವ ಮೊತ್ತ ಎಷ್ಟು ಗೊತ್ತಾ?

ಭಾರತದಲ್ಲಿ ಕಳೆದ ಬಾರಿ ಐಪಿಎಲ್ ಟ್ರೋಫಿ ನಡೆದಾಗ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆಗ ಚಾಂಪಿಯನ್ ತಂಡಕ್ಕೆ 20 ಕೋಟಿ ಬಹುಮಾನ ಮೊತ್ತವನ್ನು ನೀಡಿ ಗೌರವಿಸಲಾಯಿತು. ಐಪಿಎಲ್‌ಗೆ ಹೋಲಿಸಿದರೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ವಿಜೇತ ತಂಡಕ್ಕೆ ಸಿಗುವ ಹಣ ತುಂಬ ಕಡಿಮೆ. ಬಿಗ್ ಬ್ಯಾಷ್ ಲೀಗ್ ಚಾಂಪಿಯನ್ ತಂಡವು ಕೇವಲ 2.45 ಕೋಟಿ ರೂ.ಗಳನ್ನು ಪಡೆಯುತ್ತದೆ.
17ನೇ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದ್ದವು. ಫೈನಲ್‌ನಲ್ಲಿ ಸೋತ ಹೈದರಾಬಾದ್ ತಂಡಕ್ಕೆ 13 ಕೋಟಿ ನೀಡಲಾಗಿದೆ. ಇದನ್ನೇ ಲೆಕ್ಕಾಹಾಕಿ ಬಿಗ್ ಬ್ಯಾಷ್‌ಗೆ ಹೋಲಿಸಿದಾಗ, ಬಿಗ್ ಬ್ಯಾಷ್ ಲೀಗ್‌ನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಕ್ಕಿಂತ ಹೈದರಾಬಾದ್ ತಂಡ ಐದು ಪಟ್ಟು ಹೆಚ್ಚಿನ ಸಂಭವಾನೆ ಪಡೆದಿದೆ. ಈ ಅಂಕಿ ಅಂಶಗಳಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಯಾವುದು ಎಂಬುದು ಅರಿವಾಗುತ್ತದೆ.

ಫೈನಲ್ ಫಲಿತಾಂಶ
ಫೈನಲ್‌ನಲ್ಲಿ ಸಿಡ್ನಿ ಥಂಡರ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಹೋಬಾರ್ಟ್ ಹರಿಕೇನ್ಸ್ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ಸ್ ಜೇಸನ್ ಸಂಘ (67 ರನ್), ಡೇವಿಡ್ ವಾರ್ನರ್ (48 ರನ್) ಇವರ ಭರ್ಜರಿ ಆಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 182 ರನ್ ಸೇರಿಸಿತು. ಗುರಿಯನ್ನು ಹಿಂಬಾಲಿಸಿದ ಹೋಬಾರ್ಟ್ 14.1 ಓವರ್‌ಗಳಲ್ಲಿ 3 ವಿಕೆಟ್‌ಗೆ 185 ರನ್ ಸೇರಿಸಿತು. ಮಿಚೆಲ್ ಓವನ್ ಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications