Hockey Asia Cup: ಭಾರತಕ್ಕೆ ಭರ್ಜರಿ ಜಯ: ಮಲೇಷ್ಯಾಗೆ ಸೋಲು
ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ, ಮಲೇಷ್ಯಾ ತಂಡವನ್ನು ಮಣಿಸಿದೆ. ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ 4-1 ರಿಂದ ಮಲೇಷ್ಯಾವನ್ನು ಮಣಿಸಿದೆ. ಈ ಮೂಲಕ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು ಮತ್ತು ಎದುರಾಳಿ ತಂಡಕ್ಕೆ ಯಾವುದೇ ಅವಕಾಶ ನೀಡಲಿಲ್ಲ.
ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ 2025 ರ ಹಾಕಿ ಏಷ್ಯಾಕಪ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ (17ನೇ ನಿಮಿಷ), ಸುಖ್‌ಜೀತ್ ಸಿಂಗ್ (19ನೇ ನಿಮಿಷ), ಶೈಲೇಂದ್ರ ಲಾಕ್ರಾ (24ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್ (38ನೇ ನಿಮಿಷ) ಭಾರತಕ್ಕಾಗಿ ಗೋಲುಗಳನ್ನು ಗಳಿಸಿ ಜಯದಲ್ಲಿ ಮಿಂಚಿದರು. ಮಲೇಷ್ಯಾ ಪರ ಶಫೀಕ್ ಹಸನ್ 2ನೇ ನಿಮಿಷದಲ್ಲಿ ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಹರ್ಮನ್ ಪ್ರೀತ್ ಸಿಂಗ್ ಅವರಿಗೆ ಈ ಪಂದ್ಯ ಸ್ಮರಣೀಯವಾಗಿತ್ತು. ಇದು ಅವರ ವೃತ್ತಿ ಜೀವನದ 250ನೇ ಪಂದ್ಯವಾಗಿತ್ತು. ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಗಳಿಸುವಲ್ಲಿ ಅವರು ಪರಿಣಿತರು. ಅವರು ಇಲ್ಲಿಯವರೆಗೆ ಭಾರತಕ್ಕಾಗಿ 285 ಗೋಲುಗಳನ್ನು ಗಳಿಸಿದ್ದಾರೆ.
ಮಲೇಷ್ಯಾ ತಂಡ ಭರ್ಜರಿ ಆರಂಭವನ್ನು ಮಾಡಿತು. ಶಫಿಕ್ ಹಸನ್ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಪಂದ್ಯದ ಆರಂಭದ 2ನೇ ನಿಮಿಷದಲ್ಲಿ ಹಸನ್ ಗೋಲು ಬಾರಿಸಿ ಮಲೇಷ್ಯಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ಅವಧಿಯಲ್ಲಿ ಟೀಮ್ ಇಂಡಿಯಾ ಗೋಲು ಬಾರಿಸುವ ಆಸೆ ಫಲಿಸಲಿಲ್ಲ.
ಎರಡನೇ ಅವಧಿಯಲ್ಲಿ ಭಾರತದ ಆರ್ಭಟ
ಆದರೆ ಎರಡನೇ ಅವಧಿಯಲ್ಲಿ ಭಾರತದ ಪರ ಮನ್‌ಪ್ರೀತ್ ಸಿಂಗ್ 17ನೇ ನಿಮಿಷದಲ್ಲಿ ಸೊಗಸಾದ ಗೋಲು ಬಾರಿಸಿ ಮಿಂಚಿದರು. ಈ ಮೂಲಕ ಭಾರತ ಈ ಪಂದ್ಯದಲ್ಲಿ ಸಮಬಲ ಸಾಧಿಸುವಲ್ಲಿ ಸಫಲರಾದರು. ಇನ್ನು ಈ ಗೋಲು ದಾಖಲಾದ ಎರಡು ನಿಮಿಷದಲ್ಲಿ ಸುಖ್‌ಜೀತ್ ಸಿಂಗ್ ಮತ್ತೊಂದು ಆಕರ್ಷಕ ಗೋಲು ಸಿಡಿಸಿದರು. ಎರಡನೇ ಅವಧಿಯಲ್ಲಿ ಶೈಲೇಂದ್ರ ಲಾಕ್ರಾ 24ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಬ್ಬರಿಸಿದರು. ಪರಿಣಾಮ ಭಾರತ 3-1 ಗೋಲುಗಳ ಮುನ್ನಡೆ ಸಾಧಿಸಿತು.

ವಿವೇಕ್ ಸಾಗರ್ ಪ್ರಸಾದ್ ಭಾರತದ ಪರ ಮೂರನೇ ಅವಧಿಯ ಆರಂಭದಲ್ಲಿ ಮತ್ತೊಂದು ಗೋಲು ಬಾರಿಸಿದರು. ಪರಿಣಾಮ ಭಾರತ 4-1 ಗೋಲುಗಳ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಭಾರತ ಗೋಲು ಬಾರಿಸವು ಆಸೆ ಫಲಿಸಲಿಲ್ಲ. ಇನ್ನು ಮಲೇಷ್ಯಾ ಕೊನೆಯ ಕ್ಷಣದ ವರೆಗೆ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಪರಿಣಾಮ ಭಾರತ 4-1 ಗೋಲುಗಳ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications