New Zealand Cricket Team: ಮುಂಬರುವ ಹೋಮ್ ಸೀಸನ್ ವೇಳಾಪಟ್ಟಿ ಪ್ರಕಟಿಸಿದ ನ್ಯೂಜಿಲೆಂಡ್
ಜುಲೈ 17 ಬುಧವಾರ, ನ್ಯೂಜಿಲೆಂಡ್ ತನ್ನ ಮುಂಬರುವ ಹೋಮ್ ಸೀಸನ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನ್ಯೂಜಿಲೆಂಡ್ ಈ ಬೇಸಿಗೆಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ವೈಟ್ ಬಾಲ್ ಸರಣಿಯನ್ನು ಆಯೋಜಿಸಲಿದೆ.
ಈ ವರ್ಷದ ಕೊನೆಯಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಸರಣಿಯನ್ನು ಆಡಲಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯು ನವೆಂಬರ್ 28 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.

ಬ್ಲ್ಯಾಕ್ ಕ್ಯಾಪ್ಸ್ 2025ರ ಹೊಸ ವರ್ಷದಲ್ಲಿ ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಸರಣಿ ಮತ್ತು ಮಾರ್ಚ್ ಮಧ್ಯದಿಂದ ಪಾಕಿಸ್ತಾನದ ವಿರುದ್ಧ ಎಂಟು ವೈಟ್-ಬಾಲ್ ಪಂದ್ಯಗಳಲ್ಲಿ ಭಾಗಿಯಾಗಲಿದೆ. ನ್ಯೂಜಿಲೆಂಡ್ ಪುರುಷರ ತಂಡಕ್ಕೆ ಇದು ಬಿಡುವಿಲ್ಲದ ವೈಟ್-ಬಾಲ್ ವೇಳಾಪಟ್ಟಿಯಾಗಿದೆ.
ಕಿವೀಸ್ ಈಗಾಗಲೇ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದ ವಿರುದ್ಧ ತ್ರಿಕೋನ ಸರಣಿಯನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಖಚಿತಪಡಿಸಿದೆ. ಈ ತ್ರಿಕೋನ ಸರಣಿಯೂ ಪಾಕಿಸ್ತಾನದಲ್ಲಿ ನಡೆಯಲಿದೆ. ಶ್ರೀಲಂಕಾ ವಿರುದ್ಧ ಆರು ಪಂದ್ಯಗಳನ್ನು ಆಡಲಿದೆ. ಶ್ರೀಲಂಕಾ ತಂಡವು ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ.
ನ್ಯೂಜಿಲೆಂಡ್ ಪುರುಷರ ತಂಡದ ವೇಳಾಪಟ್ಟಿ
1) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ
ಮೊದಲ ಟೆಸ್ಟ್: 28 ನವೆಂಬರ್-2 ಡಿಸೆಂಬರ್, ಕ್ರೈಸ್ಟ್‌ಚರ್ಚ್
ಎರಡನೇ ಟೆಸ್ಟ್: 6-10 ಡಿಸೆಂಬರ್, ವೆಲ್ಲಿಂಗ್ಟನ್
ಮೂರನೇ ಟೆಸ್ಟ್: 14-18 ಡಿಸೆಂಬರ್, ಹ್ಯಾಮಿಲ್ಟನ್
2) ಶ್ರೀಲಂಕಾ ವಿರುದ್ಧ ಟಿ20 ಸರಣಿ
ಮೊದಲನೇ ಟಿ20: 28 ಡಿಸೆಂಬರ್, ತೌರಂಗ
ಎರಡನೇ ಟಿ20: 30 ಡಿಸೆಂಬರ್, ತೌರಂಗ
ಮೂರನೇ ಟಿ20: 2 ಜನವರಿ, ನೆಲ್ಸನ್
3) ಶ್ರೀಲಂಕಾ ವಿರುದ್ಧದ ಏಕದಿನ ಸರಣಿ
ಮೊದಲನೇ ಏಕದಿನ: 5 ಜನವರಿ, ವೆಲ್ಲಿಂಗ್ಟನ್
ಎರಡನೇ ಏಕದಿನ: ಜನವರಿ 8, ಹ್ಯಾಮಿಲ್ಟನ್
ಮೂರನೇ ಏಕದಿನ: ಜನವರಿ 11, ಆಕ್ಲೆಂಡ್
4) ಪಾಕಿಸ್ತಾನ ವಿರುದ್ಧ ಟಿ20 ಸರಣಿ
ಮೊದಲನೇ ಟಿ20: 16 ಮಾರ್ಚ್, ಕ್ರೈಸ್ಟ್‌ಚರ್ಚ್
ಎರಡನೇ ಟಿ20: ಮಾರ್ಚ್ 18, ಡ್ಯುನೆಡಿನ್
ಮೂರನೇ ಟಿ20: ಮಾರ್ಚ್ 21, ಆಕ್ಲೆಂಡ್
ನಾಲ್ಕನೇ ಟಿ20: 23 ಮಾರ್ಚ್, ತೌರಂಗ
ಐದನೇ ಟಿ20: 26 ಮಾರ್ಚ್, ವೆಲ್ಲಿಂಗ್ಟನ್
5) ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ
ಮೊದಲನೇ ಏಕದಿನ: ಮಾರ್ಚ್ 29, ನೇಪಿಯರ್
ಎರಡನೇ ಏಕದಿನ: ಏಪ್ರಿಲ್ 2, ಹ್ಯಾಮಿಲ್ಟನ್
ಮೂರನೇ ಏಕದಿನ: 5 ಏಪ್ರಿಲ್, ತೌರಂಗ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications