ವಿಶ್ವಕಪ್ ಗೂ ಶುರುವಾಗಿದೆ ಹನಿ ಟ್ರ್ಯಾಪ್ 'ಫಿಕ್ಸಿಂಗ್' ಭೀತಿ
ವೆಲ್ಲಿಂಗ್ಟನ್, ಜ.11: ಐಪಿಎಲ್ ನನ್ನು ಕಾಡಿದ ಮ್ಯಾಚ್ ಫಿಕ್ಸಿಂಗ್ ಭೂತ ಈಗ ಹನಿ ಟ್ರ್ಯಾಫ್ ಮೂಲಕ ವಿಶ್ವಕಪ್ ಟೂರ್ನಿಯನ್ನು ಹಾಳು ಮಾಡಲಿದೆ ಎಂಬ ಸ್ಫೋಟಕ ಮಾಹಿತಿ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆಗೆ ಸಿಕ್ಕಿದೆ. ಹನಿ ಟ್ರ್ಯಾಪ್ ಬಗ್ಗೆ ಎಚ್ಚರದಿಂದಿರುವಂತೆ ಕಿವೀಸ್ ಆಟಗಾರರಿಗೆ ಈಗಾಗಲೇ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ನಾಜೂಕಾಗಿ ಮ್ಯಾಚ್ ಫಿಕ್ಸಿಂಗ್ ಡೀಲ್ ಕುದುರಿಸುವ ಹನಿ ಟ್ರ್ಯಾಪಿಂಗ್ ತಂತ್ರ ಬಗ್ಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆಗಳು ತಲೆಕೆಡಿಸಿಕೊಂಡಿವೆ. ಹೀಗಾಗಿ ತನ್ನ ಆಟಗಾರರನ್ನು ಹದ್ದಿನ ಕಣ್ಗಾವಲಿನಲ್ಲಿರಿಸಲು ಚಿಂತಿಸಿದೆ. [ಹನಿ ಟ್ರ್ಯಾಪ್ ಮೂಲಕ ಲೇಡಿ ಉಗ್ರರ ಎಂಟ್ರಿ?]
ಐಸಿಸಿ ವಿಶ್ವಕಪ್ 2015 ಟೂರ್ನಿ ಆರಂಭಕ್ಕೆ ಒಂದು ತಿಂಗಳ ಮುಂಚೆ ಇಂಥ ಆಘಾತಕಾರಿ ಸುದ್ದಿ ಬಂದಿರುವುದು ಸ್ವಲ್ಪ ಆತಂಕ ಮೂಡಿಸಿದೆ. ಅದರೆ, ಈ ರೀತಿ ತಂತ್ರಗಳನ್ನು ಮಟ್ಟ ಹಾಕಲು ಕ್ರಿಕೆಟ್ ಸಂಸ್ಥೆ ಬದ್ಧವಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಅಸೋಸಿಯೇಷನ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೀತ್ ಮಿಲ್ಸ್ ಹೇಳಿದ್ದಾರೆ. [ವಿಶ್ವಕಪ್ 2015: ಟೀಂ ಇಂಡಿಯಾ ಪೂರ್ಣ ಗೈಡ್]

ಹನಿ ಟ್ರ್ಯಾಪಿಂಗ್: ಗ್ಲಾಮರ್ ಗೊಂಬೆಗಳಂತಿರುವ ಚೆಲುವೆಯನ್ನು ಬಳಸಿಕೊಂಡು ಆಟಗಾರರನ್ನು ಸೆಳೆಯುವುದು ಅವರನ್ನು ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಜಾಲಕ್ಕೆ ದೂಡುವುದು, ಪಂದ್ಯಗಳ ಬಗ್ಗೆ, ಆಟಗಾರರು, ತಂತ್ರಗಾರಿಕೆ ಬಗ್ಗೆ ಮಾಹಿತಿ ಕಲೆ ಹಾಕುವ ವಿಧಾನವೇ ಹನಿ ಟ್ರ್ಯಾಪಿಂಗ್. [ಹನಿ ಟ್ರ್ಯಾಪಿಂಗ್ ಮಾಡಿದ್ದ ನಟಿ ನಯನಾ]
ಇದು ಅಂತಾರಾಷ್ಟ್ರೀಯ ಮಟ್ಟದ ಕ್ರಿಮಿನಲ್ ಗಳು ನಡೆಸುವ ಒಂದು ತಂತ್ರಗಾರಿಕೆಯಾಗಿದೆ ಅಷ್ಟೇ. ಈ ರೀತಿ ಹಲವು ತಂತ್ರಗಳನ್ನು ಬಳಸಿ ಆಟಗಾರರನ್ನು ಬಲೆಗೆ ಬೀಳಿಸಿಕೊಂಡು ಬ್ಲಾಕ್ ಮೇಲ್ ಮಾಡಲಾಗುತ್ತದೆ.
ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯವನ್ನು ಫೆ.14ರಂದು ಆಡಲಿದೆ. ಟೂರ್ನಿ ಮುಗಿಯುವ ತನಕ ಆಟಗಾರರು ಕ್ರಿಕೆಟ್ ಬಿಟ್ಟು ಬೇರೆ ಮೋಜಿನಾಟಕ್ಕೆ ತೆರಳದಂತೆ ನಿರ್ಬಂಧ ಹೇರಿದರೂ ಅಚ್ಚರಿಯೇನಿಲ್ಲ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications