For Quick Alerts
ALLOW NOTIFICATIONS  
For Daily Alerts
 

21ನೇ ವಯಸ್ಸಿಗೇ ನಿವೃತ್ತಿಯಾದ ಕ್ರಿಕೆಟಿಗ ಹೊರಟಿರುವುದು ವಿಮಾನ ಹಾರಿಸಲು!

hong Kong cricketer christopher carter retires at the age of 21

ಹಾಂಕಾಂಗ್, ಅಕ್ಟೋಬರ್ 2: ಇತ್ತೀಚೆಗಷ್ಟೇ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಕೆಚ್ಚೆದಯ ಹೋರಾಟ ನಡೆಸಿ ಜಗತ್ತಿನ ಗಮನ ಸೆಳೆದ ಕ್ರಿಕೆಟ್ ಶಿಶು ಹಾಂಕಾಂಗ್ ತಂಡದ ಯುವ ಆಟಗಾರನೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೃತ್ತಿ ಬದುಕು ಆರಂಭಿಸುವ ವೇಳೆಗೇ ನಿವೃತ್ತಿ ಘೋಷಿಸಿದ್ದಾರೆ.

ಸಾಮಾನ್ಯವಾಗಿ 30ರ ವಯಸ್ಸಿನ ಗಡಿ ದಾಟಿದ ಆಟಗಾರರು ವಿವಿಧ ಕಾರಣಗಳಿಂದ ನಿವೃತ್ತರಾಗುತ್ತಾರೆ. ಆದರೆ, ಈ ಪ್ರತಿಭಾವಂತ ಕ್ರಿಕೆಟಿಗನ ವಯಸ್ಸು ಇನ್ನೂ 21. ಏಕದಿನ ಮತ್ತು ಟಿ20 ಎರಡನ್ನೂ ಸೇರಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವುದು ಕೇವಲ 21 ಪಂದ್ಯಗಳು. ಹೀಗಿರುವಾಗ ನಿವೃತ್ತಿ ಏಕೆ?

ಹಾಂಕಾಂಗ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ರಿಸ್ ಕಾರ್ಟರ್, ಪೈಲಟ್ ಆಗುವ ಕನಸಿಗೆ ರೆಕ್ಕೆ ಹಚ್ಚಿದ್ದಾರೆ. ಹೀಗಾಗಿ ಅವರ ಕ್ರಿಕೆಟ್ ವೃತ್ತಿ ಬದುಕಿನ ಸಂಚಾರ ಲ್ಯಾಂಡ್ ಆಗಿದ್ದರೆ, ಹೊಸ ಬದುಕು ಟೇಕ್ ಆಫ್ ಆಗಲಿದೆ.

ಕಾರ್ಟರ್ ಬೆಳೆದಿದ್ದು ಆಸ್ಟ್ರೇಲಿಯಾದಲ್ಲಿ. ಅಲ್ಲಿಗೆ ಮರಳಿ ಪೈಲಟ್ ತರಬೇತಿ ಪಡೆಯಲು ಅವರು ಉದ್ದೇಶಿಸಿದ್ದಾರೆ.

ಹಾಂಕಾಂಗ್ ಕ್ರಿಕೆಟ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಕ್ರಿಕೆಟ್‌ನಲ್ಲಿ ಸಿಗುವ ಅವಕಾಶ ತೀರಾ ಸೀಮಿತವಾಗಿವೆ ಎಂದು ಅವರಿಗೆ ಅನಿಸಿದೆ.

ಕ್ರಿಕೆಟ್ ಕಾರಣಕ್ಕಾಗಿ ಓದಿಗೆ ವಿರಾಮ ಕೊಟ್ಟಿದ್ದ ಅವರು, ತಾವು ಯಾವಾಗಲೂ ಬಯಸುವ ಪೈಲಟ್ ಸ್ಥಾನದಲ್ಲಿ ಕೂರವ ಆಸೆಯನ್ನು ಮತ್ತೆ ಚಿಗುರಿಸಿಕೊಂಡಿದ್ದಾರೆ.

ಹಾಂಕಾಂಗ್‌ನಲ್ಲಿ ಕ್ರಿಕೆಟ್‌ಗೆ ಹಣದ ಕೊರತೆಯಿದೆ. ಹೀಗಾಗಿ ಅಲ್ಲಿ ಕ್ರಿಕೆಟರ್‌ಆಗಿ ಬೆಳೆಯುವುದು ಬಹು ಕಷ್ಟಕರ. ಮಂಡಳಿಯಲ್ಲಿರುವ ಅಧಿಕಾರಿಗಳು ಸಾಕಷ್ಟು ಪ್ರಯತ್ನಪಟ್ಟು ಪೂರ್ಣಾವಧಿ ಕ್ರಿಕೆಟ್‌ಅನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ. ಆದರೆ, ಸರ್ಕಾರವಾಗಲೀ, ಐಸಿಸಿಯಾಗಲೀ ಸರಿಯಾಗಿ ಬೆಂಬಲ ನೀಡುತ್ತಿಲ್ಲ ಎಂದು ಕಾರ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಭಾರತದ ವಿರುದ್ಧ ಏಷ್ಯಾ ಕಪ್‌ನಲ್ಲಿ ಆಡಿದ ಪಂದ್ಯವೇ ಅವರಿಗೆ ಕಡೆಯದೆನಿಸಿದೆ. ಈ ಪಂದ್ಯದಲ್ಲಿ ಅವರು ಕೇವಕ ಮೂರು ರನ್ ಗಳಿಸಿದ್ದರು.

ಈಗಾಗಲೇ ಅಡಿಲೇಡ್‌ಗೆ ಹಾರಿರುವ ಅವರು, ಪೈಲಟ್ ಆಗಲು ತರಬೇತಿ ಪಡೆದುಕೊಳ್ಳಲಿದ್ದಾರೆ. ಹಾಗೆಂದು ಅವರು ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರ ಸರಿಯುವ ಉದ್ದೇಶ ಹೊಂದಿಲ್ಲ. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಮತ್ತೆ ಹಾಂಕಾಂಗ್‌ ತಂಡದಲ್ಲಿ ಆಡುವ ಆಸೆಯನ್ನೂ ಹೊಂದಿದ್ದಾರೆ.

'ಇಲ್ಲಿ ಎಲ್ಲದಕ್ಕೂ ಹಣವೇ ಮುಖ್ಯ. ಜಗತ್ತಿನ ಅತ್ಯಂತ ದುಬಾರಿ ದೇಶಗಳಲ್ಲಿ ಹಾಂಕಾಂಗ್ ಕೂಡ ಒಂದು. ನಮ್ಮ ಆಟಗಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಹಣ ವಾಸ್ತವವಾಗಿ ಅವರಿಗೆ ಜೀವನಕ್ಕೆ ಸಾಲದು. ಕುಟುಂಬ ಮತ್ತು ವೃತ್ತಿ ಎರಡನ್ನೂ ಕ್ರಿಕೆಟ್ ಆಡುವುದರಿಂದಲೇ ಸಾಗಿಸುವುದು ಸಾಧ್ಯವಿಲ್ಲ' ಎನ್ನುತ್ತಾರೆ ಹಾಂಕಾಂಗ್ ಮುಖ್ಯ ಕೋಚ್ ಸೈಮನ್ ಕುಕ್.

Story first published: Tuesday, October 2, 2018, 18:50 [IST]
Other articles published on Oct 2, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+