World Cup 2023: ಬಹು ನಿರೀಕ್ಷಿತ ವಿರಾಟ್ ಕೊಹ್ಲಿಯ 49ನೇ ಏಕದಿನ ಶತಕದ ಬಗ್ಗೆ ಮೊಹಮ್ಮದ್ ರಿಜ್ವಾನ್ ಅಚ್ಚರಿ ಹೇಳಿಕೆ
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಆಡಿದ 6 ಪಂದ್ಯಗಳಲ್ಲಿ ಆರನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಇನ್ನು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ದಾಖಲೆಯ ಶತಕಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾತರವಾಗಿದೆ. ತಮ್ಮ 49ನೇ ಹಾಗೂ 50ನೇ ಏಕದಿನ ಶತಕಗಳು ಇದೇ ಪಂದ್ಯಾವಳಿಯಲ್ಲಿ ಬರಲಿದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ.

ಇನ್ನೊಂದು ಶತಕ ಸಿಡಿಸಿದರೆ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (49 ಏಕದಿನ ಶತಕ) ಅವರನ್ನು ಸರಿಗಟ್ಟಲಿದ್ದಾರೆ ಮತ್ತು ಎರಡು ಶತಕ ಬಾರಿಸಿದರೆ, ಸಾರ್ವಕಾಲಿಕ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಏಕದಿನ ಶತಕ ಗಳಿಸಿದ ಏಕೈಕ ಆಟಗಾರನಾಗಲಿದ್ದಾರೆ.
ಭಾನುವಾರ, ನವೆಂಬರ್ 5ರಂದು ಭಾರತ ತಂಡವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಾಡಲಿದೆ. ಗಮನಾರ್ಹವಾಗಿ, ಭಾರತದ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿಯ ಜನ್ಮದಿನವೂ ಅದೇ ದಿನವಾಗಿದೆ.
ವಿರಾಟ್ ಕೊಹ್ಲಿಯ 35ನೇ ಹುಟ್ಟುಹಬ್ಬಕ್ಕೂ ಮುನ್ನ, ನವೆಂಬರ್ 2ರಂದು ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ತನ್ನ ಏಳನೇ ಪಂದ್ಯವನ್ನು ಆಡಬೇಕಿದೆ.

ಇನ್ನು ಅಕ್ಟೋಬರ್ 31ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದ ಇದೇ ಈಡನ್ ಗಾರ್ಡನ್ಸ್‌ನಲ್ಲಿ ಪಾಕಿಸ್ತಾನ ತಂಡ ಆಡಲಿದೆ. ಈ ವೇಳೆ ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಮುಂಚಿತವಾಗಿ ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ಅವಧಿಯಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ತುಂಬಾ ಹರ್ಷಚಿತ್ತದಿಂದ ಕಾಣುತ್ತಿದ್ದರು.
ಮೈದಾನದ ಬದಿಯಲ್ಲಿ ಮೊಹಮ್ಮದ್ ರಿಜ್ವಾನ್ ಇಂಡಿಯಾ ಟುಡೇ-ಆಜ್ ತಕ್ ಜೊತೆಗೆ ತಮಾಷೆಯ ಮಾತುಕತೆ ನಡೆಸಿದರು. ಈಡನ್‌ನಲ್ಲಿ ನಡೆಯಲಿರುವ ಮುಂದಿನ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಬಗ್ಗೆಯೂ ಅವರನ್ನು ಕೇಳಲಾಯಿತು.
ಈ ವೇಳೆ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಬಗ್ಗೆ ಕೇಳಿದಾಗ, ಅವರು ಕೊಹ್ಲಿಗೆ ವಿಶ್ ತಿಳಿಸಿ, "ನವೆಂಬರ್ 5ರಂದು ವಿರಾಟ್ ಕೊಹ್ಲಿ ಜನ್ಮದಿನ ಎಂದು ತಿಳಿಯುವುದು ಸಂತೋಷವಾಗಿದೆ. ಅವರಿಗೆ ಎಲ್ಲಾ ರೀತಿಯ ಶುಭಾಶಯಗಳು ಮತ್ತು ಜನ್ಮದಿನದ ಶುಭಾಶಯಗಳು. ಆದರೂ ನಾನು ನನ್ನ ಜನ್ಮದಿನವನ್ನು ಆಚರಿಸುವುದಿಲ್ಲ ಮತ್ತು ಅದರಲ್ಲಿ ನನಗೆ ನಂಬಿಕೆ ಇಲ್ಲ," ಎಂದು ಮೊಹಮ್ಮದ್ ರಿಜ್ವಾನ್ ತಿಳಿಸಿದರು.
"ವಿರಾಟ್ ಕೊಹ್ಲಿಗೆ ಶ್ರೇಷ್ಠತೆ ಸಿಗಲೆಂದು ಹಾರೈಸುತ್ತೇನೆ. ಅವರ ಜನ್ಮದಿನದಂದು ತಮ್ಮ 49ನೇ ಏಕದಿನ ಶತಕವನ್ನು ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ವಿಶ್ವಕಪ್‌ನಲ್ಲಿ ಅವರು ತಮ್ಮ 50ನೇ ಏಕದಿನ ಶತಕವನ್ನು ಸಹ ಗಳಿಸಬೇಕೆಂದು ನಾನು ಬಯಸುತ್ತೇನೆ," ಎಂದರು.
ವಿರಾಟ್ ಕೊಹ್ಲಿ ಅವರ 35ನೇ ಜನ್ಮದಿನದ ಬಗ್ಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಕೇಳಲಾಯಿತು. ಆದರೆ ಈ ವಿಷಯದಲ್ಲಿ ಅವರು ಯಾವುದಕ್ಕೂ ಉತ್ತರಿಸಲಿಲ್ಲ.
ಸದ್ಯ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಅಜಂ ತನ್ನ ತಂಡದೊಂದಿಗೆ ಮತ್ತು ತನ್ನ ವೈಯಕ್ತಿಕ ಪ್ರದರ್ಶನದೊಂದಿಗೆ ಕಳಪೆ ಫಾರ್ಮ್ ಮೂಲಕ ಹೋಗುತ್ತಿದ್ದಾರೆ. ಬಾಬರ್ ಅಜಂ ಅವರು ವಿರಾಟ್ ಕೊಹ್ಲಿಯೊಂದಿಗೆ ಅನೇಕ ಸೌಹಾರ್ದ ಸಂವಾದದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ತಂಡವು ತನ್ನ ಆರು ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಹೋರಾಡುತ್ತಿದೆ ಮತ್ತು ಈ ಪಂದ್ಯಾವಳಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತು ಚಿಂತಾಜನಕ ಪರಿಸ್ಥಿತಿ ಎದುರಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications