ಐಪಿಎಲ್ ನಡೆಯದೆ 2020 ಮುಗಿಯಲು ಬಯಸಲ್ಲ: ಸೌರವ್ ಗಂಗೂಲಿ

ಕೊರೊನಾ ವೈರಸ್‌ನ ಕಾರಣದಿಂದ ಮುಂದೂಡಲ್ಪಟ್ಟಿರುವ ಐಪಿಎಲ್ 13ನೇ ಆವೃತ್ತಿಯನ್ನು ಈ ವರ್ಷಾಂತ್ಯದ ಒಳಗೆ ಆಯೋಜಿಸುವುದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಮೊದಲ ಆದ್ಯತೆಯಾಗಿದೆ. ಈ ಬಗ್ಗೆ ಸ್ವತಃ ಸೌರವ್ ಗಂಗೂಲಿ ಖಚಿತವಾಗಿ ಹೇಳಿಕೆಯನ್ನು ನೀಡಿದ್ದಾರೆ.
2020ನ್ನು ಐಪಿಎಲ್ ಇಲ್ಲದೆ ಮುಗಿಸಲು ನಾವು ಬಯಸುವುದಿಲ್ಲ ಎಂದು ಗಂಗೂಲಿ ಐಪಿಎಲ್ ಆಯೋಜನೆಯ ಬಗ್ಗೆ ತಮ್ಮ ಆದ್ಯತೆಯನ್ನು ಹೇಳಿದ್ದಾರೆ. ನಮ್ಮ ಮೊದಲ ಆದ್ಯತೆ ಭಾರತ. 30-40 ದಿನ ಸಿಕ್ಕರೆ ನಾವು ಐಪಿಎಲ್ ಆಯೋಜನೆ ಮಾಡುತ್ತೇವೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಇಂಡಿಯಾ ಟುಡೇಯ "ಇನ್‌ಸ್ಪಿರೇಶನ್" ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಈ ಮಾತನ್ನು ಹೇಳಿದ್ದಾರೆ.
ಆದರೆ ಈ ಬಾರಿಯ ಐಪಿಎಲ್ ಎಲ್ಲಿ ಆಯೋಜನೆಯಾಗಲಿದೆ ಎಂಬುದಕ್ಕೆ ಗಂಮಗೂಲಿ ಕೂಡ ಸೂಕ್ತ ಉತ್ತರವನ್ನು ನೀಡಿಲ್ಲ. ಎಲ್ಲಿ ನಡೆಯಲಿದೆ ಎಂದು ತಿಳಿದಿಲ್ಲ. ಆದರೆ ನಮ್ಮ ಮೊದಲ ಆದ್ಯತೆ ಭಾರತ. ಭಾರತದಲ್ಲಿ ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ವಿದೇಶದಲ್ಲಿ ಆಯೋಜನೆಯ ಬಗ್ಗೆ ನಿರ್ಧಾರವನ್ನು ಮಾಡಲಾಗುತ್ತದೆ ಎಂದಿದ್ದಾರೆ.
ಐಪಿಎಲ್ ನಡೆಸಲು ಸಿಗುವ ಕಡಿಮೆ ಸಮಯದಲ್ಲಿ ಎಲ್ಲಿ ನಡೆಸಬಹುದು ಎಂಬುದನ್ನು ನಿರ್ಧರಿಸಬೇಕಾಗಿದೆ. ಭಾರತದಲ್ಲಿ ಐಪಿಎಲ್ ನಡೆಸಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ವಿದೇಶದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚಿಂತಿಸಬಹುದು. ಆದರೆ ಅದು ಫ್ರಾಂಚೈಸಿ ಹಾಗೂ ಬೋರ್ಡ್ ಎಲ್ಲರಿಗೂ ದುಬಾರಿಯಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ.
ಐಪಿಎಲ್ ಆಯೋಜನೆ ವಿಚಾರವಾಗಿ ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿಕೆಯನ್ನು ನೀಡಿದ್ದರು. ಐಪಿಎಲ್ ಆಯೋಜನೆಗೆ ಭಾರತವೇ ಮೊದಲ ಆಯ್ಕೆಯಾಗಿರುತ್ತದೆ. ಭಾರತದಲ್ಲಿ ಸಾಧ್ಯವೇ ಇಲ್ಲ ಎಂಬ ಪರಿಸ್ಥಿಯಲ್ಲಿ ವಿದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತದೆ ಎಂದು ಅರುಣ್ ಧುಮಲ್ ಕೂಡ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications