ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮರು ವೇಳಾಪಟ್ಟಿ ಸಿದ್ಧಗೊಂಡರೆ ಆಡಲು ರೆಡಿ: ಜೋಫ್ರಾ ಆರ್ಚರ್

Hopefully if IPL gets rescheduled, I will be able to go again, says Jofra Archer

ಲಂಡನ್: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಗಾಯದಿಂದ ಗುಣಮುಖರಾಗಿದ್ದಾರೆ. ಕೈಗೆ ಗಾಯ ಮಾಡಿಕೊಂಡಿದ್ದ ಆರ್ಚರ್, ಸಂಪೂರ್ಣ ಚೇತರಿಸಿಕೊಂಡಿದ್ದು, ಐಪಿಎಲ್‌ ಮತ್ತೆ ನಡೆದರೆ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಆರ್ಚರ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ.

ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

ಗಾಯಕ್ಕೀಡಾಗಿದ್ದ ಜೋಫ್ರಾ ಆರ್ಚರ್ ಸುಮಾರು ಒಂದೂವರೆ ತಿಂಗಳ ಕಾಲ ಮೈದಾನದಿಂದ ಹೊರಗಿದ್ದರು. ಭಾರತ-ಇಂಗ್ಲೆಂಡ್‌ ನಡುವಿನ ಐದನೇ ಟಿ20ಐ ಪಂದ್ಯದಲ್ಲಿ ಆರ್ಚರ್ ಕಡೇಯ ಸಾರಿ ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡಿದ್ದರು. ಕಳೆದ ಜನವರಿಯಲ್ಲಿ ಆರ್ಚರ್‌ ಕೈಗೆ ಗಾಯವಾಗಿತ್ತು. ಈಗ ಚೇತರಿಸಿಕೊಂಡಿರುವ ಆರ್ಚರ್ ಸದ್ಯ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ತಯಾರಾಗಿದ್ದಾರೆ.

2021ರ ಐಪಿಎಲ್ ಆವೃತ್ತಿ ಕೋವಿಡ್-19 ಕಾರಣದಿಂದಾಗಿ ಅಮಾನತುಗೊಂಡಿತ್ತು. ಬಯೋ ಬಬಲ್ ಒಳಗೆ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಐಪಿಎಲ್ ಅನ್ನು ನಿಲ್ಲಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿತ್ತು. ಕೋಲ್ಕತ್ತಾ ನೈಟ್ ರೈಸರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಸೋಂಕು ಹಬ್ಬಿತ್ತು.

ಟೀಮ್ ಇಂಡಿಯಾದ ಹಲವರಿಗಿಂತ ನಾನು ಚೆನ್ನಾಗಿ ಆಡಿದ್ದೇನೆ : ವಿಜಯ್ ಶಂಕರ್ಟೀಮ್ ಇಂಡಿಯಾದ ಹಲವರಿಗಿಂತ ನಾನು ಚೆನ್ನಾಗಿ ಆಡಿದ್ದೇನೆ : ವಿಜಯ್ ಶಂಕರ್

ಐಪಿಎಲ್‌ಗೆ ಹಿಂದಿರುಗುವ ಬಗ್ಗೆ ಮಾತನಾಡಿರುವ 26ರ ಹರೆಯದ ಆರ್ಚರ್, 'ಐಪಿಎಲ್ ಮರು ವೇಳಾಪಟ್ಟಿ ಸಿದ್ಧಗೊಂಡರೆ, ನಾನು ಫಿಟ್ ಇದ್ದರೆ ಈ ವರ್ಷ ನಾನು ಐಪಿಎಲ್‌ನಲ್ಲಿ ಆಡುತ್ತೇನೆ,' ಎಂದು ಸಸೆಕ್ಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್ಚರ್ ಹೇಳಿದ್ದಾರೆ.

Story first published: Friday, May 14, 2021, 20:21 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X