For Quick Alerts
ALLOW NOTIFICATIONS  
For Daily Alerts
 

T20 World Cup 2024: ಇದುವರೆಗೂ ಟಿ20 ವಿಶ್ವಕಪ್‌ ಪ್ರಶಸ್ತಿ ಗೆಲ್ಲದ ಆತಿಥೇಯ ತಂಡಗಳ ಬಗ್ಗೆ ತಿಳಿಯಿರಿ

ಜೂನ್‌ 24 ಸೋಮವಾರ, ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯಗಳು ನಡೆಯುತ್ತಿವೆ. ಈಗಾಗಲೇ 2 ತಂಡಗಳು ಸೆಮಿಫೈನಲ್‌ಗೆ ಆರ್ಹತೆ ಪಡೆದಿವೆ.

ಗುಂಪು- 2 ರಿಂದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದ್ದರೆ, ಅತಿಥೇಯರಾದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಗುಂಪು 2 ರಿಂದ ಹೊರಗುಳಿದಿವೆ.

Host teams Who Could Not Win T20 World Cup Title

ಗುಂಪು-1 ರಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಈ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿಭಿನ್ನ ಲೆಕ್ಕಚಾರಗಳನ್ನು ಇಟ್ಟು ಕೊಂಡಿವೆ. ಜೊತೆಗೆ ದೊಡ್ಡ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಹೊಂದಿವೆ.

ಇಂದು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಗುಂಪು- 2ರ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ವಿಂಡೀಸ್‌ ತಂಡ 3 ವಿಕೆಟ್ ಗಳಿಂದ ಸೋಲನುಭವಿಸಿದೆ. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿದೆ.

ಇದರೊಂದಿಗೆ ಇದುವರೆಗೆ ನಡೆದ 9 ಟಿ20 ವಿಶ್ವಕಪ್‌ಗಳಲ್ಲಿ ಆತಿಥೇಯ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ವೆಸ್ಟ್ ಇಂಡೀಸ್‌ಗೆ ಟ್ರೋಫಿ ಗೆಲ್ಲುವ ಅವಕಾಶವಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಹೊರಬಿದ್ದಿದೆ.

ಟಿ20 ವಿಶ್ವಕಪ್ 2024 ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದವು, ಇದೀಗ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಎರಡೂ ಆತಿಥೇಯ ತಂಡಗಳು ಸೆಮಿಫೈನಲ್‌ನಿಂದ ಹೊರಗುಳಿದಿವೆ.

ಟಿ20 ವಿಶ್ವಕಪ್‌ ಪ್ರಶಸ್ತಿ ಗೆಲ್ಲದ ಆತಿಥೇಯ ತಂಡಗಳು

1) 2007ರ ಟಿ20 ವಿಶ್ವಕಪ್ ಆರಂಭಿಕ ಆವೃತ್ತಿಯನ್ನು ದಕ್ಷಿಣ ಆಫ್ರಿಕಾ ಆಯೋಜಿಸಿತ್ತು. ಮೊದಲ ಬಾರಿಗೆ ಆತಿಥೇಯ ತಂಡವು ಗುಂಪು ಹಂತದಿಂದ ಹೊರಗುಳಿಯಿತು. ಎಂ.ಎಸ್‌ ಧೋನಿ ನಾಯಕತ್ವದ ಭಾರತ ಈ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿತ್ತು.

2) ಇಂಗ್ಲೆಂಡ್ 2009ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತ್ತು. ಈ ವೇಳೆ ಕೂಡ ಆತಿಥೇಯ ಆಂಗ್ಲರ ತಂಡವು ಗುಂಪು ಹಂತದಿಂದ ಹೊರಗುಳಿಯಿತು. ಈ ಆವೃತ್ತಿಯಲ್ಲಿ ಪಾಕಿಸ್ತಾನ ವಿಜೇತರಾಗಿದ್ದರು.

3) 2010ರಲ್ಲಿ ವೆಸ್ಟ್ ಇಂಡೀಸ್ ಆಯೋಜಿಸಿದ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಕೆರಿಬಿಯನ್ನರು ಗುಂಪು ಹಂತದಿಂದ ಹೊರಗುಳಿದಿದ್ದರು. ಈ ಆವೃತ್ತಿಯಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದಿತ್ತು.

4) 2012ರ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾ ಆತಿಥ್ಯ ವಹಿಸಿತ್ತು. ಆತಿಥೇಯ ತಂಡವು ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ರನ್‌ಗಳಿಂದ ಸೋಲುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಈ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್ ವಿಜೇತರಾಗಿದ್ದರು.

5) 2014ರಲ್ಲಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಬಾಂಗ್ಲಾದೇಶ ಆಯೋಜಿಸಿತ್ತು. ಗುಂಪು ಹಂತದಲ್ಲಿ ಎಡುವಿದ ಬಾಂಗ್ಲಾ ಟೂರ್ನಿಯಿಂದ ಔಟ್‌ ಆಗಿತ್ತು. ಶ್ರೀಲಂಕಾ ಈ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿತ್ತು.

6) ಭಾರತ 2016ರಲ್ಲಿ ಟಿ20 ವಿಶ್ವಕಪ್‌ ಮೆಗಾ ಟೂರ್ನಿಯನ್ನು ಆಯೋಜಿಸಿತ್ತು. ಆತಿಥೇಯ ಟೀಮ್‌ ಇಂಡಿಯಾ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತಿತ್ತು. ಈ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್‌ ವಿರುದ್ಧ ಅಮೋಘ ಗೆಲುವು ಸಾಧಿಸಿತ್ತು.

7) 2021ರಲ್ಲಿ ಟಿ20 ವಿಶ್ವಕಪ್ ಟೂರ್ನಿ ಯುಎಇ ಮತ್ತು ಒಮಾನ್ ನಲ್ಲಿ ನಡೆದಿತ್ತು. ಈ ಟೂರ್ನಿಯಲ್ಲೂ ಆತಿಥೇಯ ಒಮಾನ್ ತಂಡವು ಮೊದಲ ಹಂತದಿಂದಲೇ ಹೊರಗುಳಿಯಿತು. ಆದರೆ ಯುಎಇ ತಂಡವು ಮೊದಲ ಹಂತದ ಭಾಗವಾಗಿರಲಿಲ್ಲ. ಆಸ್ಟ್ರೇಲಿಯಾ ಈ ಆವೃತ್ತಿಯ ಚಾಂಪಿಯನ್‌ ಆಗಿತ್ತು.

8) 2022ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಅನ್ನು ಆಯೋಜಿಸಿತ್ತು. ಈ ಬಾರಿಯೂ ಆಸೀಸ್‌ ಟ್ರೋಫಿ ಗೆಲ್ಲುತ್ತದೆ ಎಂದು ಕೊಂಡಿದ್ದರು. ಆದರೆ ಕಾಂಗೂರು ಪಡೆ ಗ್ರೂಪ್ ಹಂತದಿಂದಲ್ಲೇ ಔಟ್‌ ಆಗಿತ್ತು. ಈ ಆವೃತ್ತಿಯಲ್ಲಿ ಇಂಗ್ಲೆಂಡ್ ಎರಡನೇ ಬಾರಿಗೆ ಚಾಂಪಿಯನ್‌ ಆಗಿತ್ತು.

9) ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಅಮೇರಿಕಾ (ಯುಎಸ್ಎ) ಮತ್ತು ವೆಸ್ಟ್ ಇಂಡೀಸ್ ಆಯೋಜಿಸಿವೆ. ಆದರೆ ಎರಡೂ ಆತಿಥೇಯ ತಂಡಗಳು ಸೂಪರ್-8 ಹಂತದಿಂದ ಹೊರಗುಳಿದಿವೆ. ಈ ಆವೃತ್ತಿಯ ವಿಜೇತರನ್ನು ಇನ್ನೂ ನಿರ್ಧರಿಸಲಾಗಿಲ್ಲ.

Story first published: Monday, June 24, 2024, 15:56 [IST]
Other articles published on Jun 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+