ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಸಾಧನೆ ಬೆನ್ನತ್ತಿದ ಐಐಎಂ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯವಾಗಿದೆ. ಈ ಲೀಗ್‌ನಲ್ಲಿ 15 ವರ್ಷ ಬಾಲಕ ವೈಭವ್ ಸೂರ್ಯವಂಶಿ ಅಮೋಘ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ಮಾಡಿರುವ ವೈಭವ್, 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ವೈಭವ್ ಅಬ್ಬರಿಸಿ ಮಿಂಚಿದ್ದಾರೆ. 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಈಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಇಂದೋರ್‌ನ ಸಂಶೋಧನಾ ವಿಷಯ. ಅವರ ಅಸಾಧಾರಣ ಪ್ರತಿಭೆ ಮತ್ತು ಆಟದ ಬಗ್ಗೆ ದೇಶದ ಪ್ರತಿಷ್ಠಿತ ಐಐಎಂ ಇಂದೋರ್ ವಿಶೇಷ ಅಧ್ಯಯನ ನಡೆಸಲು ನಿರ್ಧರಿಸಿದೆ.
ಐಐಎಂ ಇಂದೋರ್ ನಿರ್ದೇಶಕ ಹಿಮಾಂಶು ರಾಯ್ ಪ್ರಕಾರ, ಅಧ್ಯಯನವು ಕೇವಲ ವೈಭವ್ ಸೂರ್ಯವಂಶಿ ಸಾಧಿಸಿದ ದಾಖಲೆಗಳಿಗಷ್ಟೇ ಸೀಮಿತವಲ್ಲ. ಈ ವಯಸ್ಸಿನಲ್ಲಿ, ಇಷ್ಟು ದೊಡ್ಡ ಸಾಧನೆ ಮಾಡಲು ಕಾರಣವಾದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳವುದು ಪ್ರಮುಖ ಉದ್ದೇಶವಾಗಿದೆ.

ಚಿಕ್ಕ ವಯಸ್ಸಿನಲ್ಲಿ ಬರುವ ಸ್ಟಾರ್‌ಡಮ್, ಅಗಾಧ ಜನಪ್ರಿಯತೆ ಹಾಗೂ ಹೆಚ್ಚುತ್ತಿರುವ ನಿರೀಕ್ಷೆಗಳು ಒಬ್ಬ ಯುವ ಆಟಗಾರನ ಮಾನಸಿಕ, ಸಾಮಾಜಿಕ ಹಾಗೂ ವೃತ್ತಿಪರ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಈ ಅಧ್ಯಯನ ಕೇಂದ್ರೀಕೃತವಾಗಿದೆ. ಮೂರು ತಿಂಗಳ ಈ ವರದಿಯನ್ನು ಐಐಎಂ ಬಿಸಿಸಿಐಗೂ ಸಲ್ಲಿಸಲಿದೆ.
ಅಧ್ಯಯನದಿಂದ ಏನು ಪ್ರಯೋಜನ?
ವೈಭವ್ ವ್ಯಕ್ತಿತ್ವ, ಅಭ್ಯಾಸ, ಕುಟುಂಬದ ಸಹಕಾರ, ತರಬೇತಿ ವಿಧಾನ ಮತ್ತು ಸಾಮಾಜಿಕ ವಾತಾವರಣವು ಅವರ ಯಶಸ್ಸಿನಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನೂ ಈ ಸಂಶೋಧನೆ ವಿಶ್ಲೇಷಿಸಲಿದೆ. ಈ ಅಧ್ಯಯನ ಕ್ರೀಡೆಯಲ್ಲದೆ ವಿಜ್ಞಾನ, ಕಲೆ, ಸಂಗೀತದಂತಹ ಇತರೆ ಕ್ಷೇತ್ರದ ಬಾಲ ಪ್ರತಿಭೆಗಳಿಗೂ ನೆರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವೈಭವ್ ಸೂರ್ಯವಂಶಿ ತಮ್ಮ ವಯಸ್ಸಿಗೆ ಮೀರಿದ ಸಾಧನೆಯನ್ನು ಐಪಿಎಲ್‌ನಲ್ಲಿ ಮಾಡಿದ್ದಾರೆ. ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇವರದ್ದಾಗಿದೆ. ಇವರು 19ನೇ ಆವೃತ್ತಿಯ ಐಪಿಎಲ್‌ನಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ 16 ಇನ್ನಿಂಗ್ಸ್‌ಗಳಲ್ಲಿ 237.30ರ ಅಸಾಮಾನ್ಯ ಸ್ಟ್ರೈಕ್ ರೇಟ್ನೊಂದಿಗೆ 776 ರನ್ ಗಳಿಸಿ ಮಿಂಚಿದ್ದರು. ಇವರ "ಯಶಸ್ಸಿನ ಸೂತ್ರ"ವನ್ನು ಡಿಕೋಡ್ ಮಾಡುವ ಕೆಲಸವನ್ನು ಪ್ರಾರಂಭಿಸಿದೆ.

ಭಾರತದಲ್ಲಿ ಕ್ರಿಕೆಟ್‌ಗೆ ಅಪಾರ ಜನಪ್ರಿಯತೆ ಇರುವುದರಿಂದ ಆಟಗಾರರ ಮೇಲೆ ಅಧಿಕ ಒತ್ತಡವಿರುತ್ತದೆ. ಜಸ್ಪ್ರಿತ್ ಬುಮ್ರಾ, ಕಗಿಸೊ ರಬಾಡಾ, ಪ್ಯಾಟ್ ಕಮಿನ್ಸ್‌ನಂತಹ ವಿಶ್ವ ದರ್ಜೆಯ ಬೌಲರ್‌ಗಳ ವಿರುದ್ಧ ವೈಭವ್ ತೋರಿದ ಧೈರ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅವರ ಕಥೆ ಭವಿಷ್ಯದ ಪೀಳಿಗೆಗೆ ಮೌಲ್ಯಯುತ ಪ್ರಕರಣ ಅಧ್ಯಯನವಾಗಲಿದೆ ಎಂದು ಐಐಎಂ ಭಾವಿಸಿದೆ.
ರಾಜಸ್ಥಾನ್ ರಾಯಲ್ಸ್ ಈ ಬಾರಿ ಎರಡನೇ ಕ್ವಾಲಿಫೈಯರ್ ವರೆಗೆ ಪ್ರಯಾಣ ಬೆಳೆಸುವಲ್ಲಿ ವೈಭವ್ ಸೂರ್ಯವಂಶಿ ಅವರ ಕೊಡುಗೆ ಅಪಾರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications