T20 World Cup 2024: ಹಾಲಿ ಚಾಂಪಿಯನ್ ಇಂಗ್ಲೆಂಡ್ ನೆತ್ತಿ ಮೇಲೆ ತೂಗುಗತ್ತಿ; ಆಂಗ್ಲರು ಪಾರಾಗೋದು ಡೌಟು!
ಜೂನ್ 15 ಶನಿವಾರ, 2024ರ ಟಿ20 ವಿಶ್ವಕಪ್ ಟೂರ್ನಿಯಿಂದ ಬಲಿಷ್ಠ ತಂಡಗಳು ಹೊರಗುಳಿಯುವ ಪರಿಸ್ಥಿತಿಯಲ್ಲಿವೆ. ಈಗಾಗಲೇ ಪಾಕಿಸ್ತಾನ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳು ಈ ಮೆಗಾ ಟೂರ್ನಿಯಿಂದ ಹೊರ ಬಿದ್ದಿವೆ.
ಈ ಬಲಿಷ್ಠ ತಂಡಗಳು ಆರಂಭದಲ್ಲಿ ಗೆಲುವು ಸಾಧಿಸಿದರೆ ಟೂರ್ನಿಯಲ್ಲಿ ಉಳಿದು ಸೂಪರ್-8 ಸುತ್ತಿಗೆ ಪ್ರಬಲ ಹೋರಾಟ ನಡೆಸಲು ಅವಕಾಶವಿತ್ತು. ಇದೀಗ ಇಂತಹ ಪರಿಸ್ಥಿತಿಯಲ್ಲಿ ಹಾಲಿ ಟಿ20 ಚಾಂಪಿಯನ್ ಇಂಗ್ಲೆಂಡ್ ತಂಡವಿದ್ದು, ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿದೆ.

ಇನ್ನೊಂದೆಡೆ ಆಸ್ಟ್ರೇಲಿಯಾ ಈಗಾಗಲೇ ಬಿ ಗುಂಪಿನಲ್ಲಿ ಸತತ ಮೂರು ಗೆಲುವಿನೊಂದಿಗೆ ಸೂಪರ್-8ರಲ್ಲಿ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಸ್ಕಾಟ್ಲೆಂಡ್ ವಿರುದ್ಧದ ತನ್ನ ಅಂತಿಮ ಪಂದ್ಯ ಆಡಲಿದೆ. ಆದರೆ ಈ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೂಪರ್-8 ಸುತ್ತಿಗೆ ಆರ್ಹತೆ ಗಳಿಸಲು ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ರೇಸ್‌ನಲ್ಲಿವೆ.
ಆದರಿಂದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸ್ಕಾಟ್ಲೆಂಡ್ ಗೆದ್ದರೆ ಅಥವಾ ಮಳೆಯಿಂದಾಗಿ ಪಂದ್ಯ ರದ್ದಾದರೆ ನೇರವಾಗಿ ಇಂಗ್ಲೆಂಡ್ ತಂಡವನ್ನು ಹೊರ ಹಾಕಬಹುದು. ಒಂದು ವೇಳೆ ಸ್ಕಾಟ್ಲೆಂಡ್ ಸೋತರು ಇನ್ನೊಂದು ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಇಂಗ್ಲೆಂಡ್ ಸೋತರೆ ಔಟ್ ಆಗಲಿದೆ.
ಇಲ್ಲವಾದರೆ ಇಂಗ್ಲೆಂಡ್ ಮತ್ತು ನಮೀಬಿಯಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೂ, ಸ್ಕಾಟ್ಲೆಂಡ್ ಸೂಪರ್-8 ತಲುಪಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಟಿ20 ವಿಶ್ವಕಪ್ ಪಯಣ ಅಂತ್ಯವಾಗಲಿದೆ.
ಫಾರ್ಮ್‌ನಲ್ಲಿರುವ ಕಾಂಗರೂ ಪಡೆ
ಸದ್ಯ ಟಿ20 ವಿಶ್ವಕಪ್ 2024ರಲ್ಲಿ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಸೂಪರ್ 8 ರ ಕಠಿಣ ಸವಾಲಿನ ಮುಂದೆ ಆಸ್ಟ್ರೇಲಿಯಾ ತನ್ನ ಅಗ್ರ ಮೂರು ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಬಹುದು. ಆಗ ನಾಥನ್ ಎಲ್ಲಿಸ್ ತಂಡದಲ್ಲಿ ಉಳಿಯುವ ಸಾಧ್ಯತೆಯಿದೆ.
ಮಳೆಯಲ್ಲಿ ಇಂಗ್ಲೆಂಡ್ ಕೊಚ್ಚಿ ಹೋಗಬಹುದು
ಆಸ್ಟ್ರೇಲಿಯಾವನ್ನು ಸೋಲಿಸಲು ಸ್ಕಾಟ್ಲೆಂಡ್‌ಗೆ ಉತ್ತಮ ಅವಕಾಶವಿದೆ. ಜೊತೆಗೆ ಸ್ಕಾಟ್ಲೆಂಡ್ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಸ್ಕಾಟ್ಲೆಂಡ್ ತಂಡವೂ ಮಳೆಗಾಗಿ ಪ್ರಾರ್ಥಿಸಲಿದೆ.
ಸ್ಕಾಟ್ಲೆಂಡ್ ಪ್ರಸ್ತುತ 5 ಅಂಕಗಳನ್ನು ಹೊಂದಿದೆ. ಆದರೆ 3 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್‌ನ ನಿವ್ವಳ ರನ್ ರೇಟ್ ಅದಕ್ಕಿಂತ ಉತ್ತಮವಾಗಿದೆ. ಆಸ್ಟ್ರೇಲಿಯ ವಿರುದ್ಧದ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಸ್ಕಾಟ್ಲೆಂಡ್ ಸೂಪರ್-8 ತಲುಪಲಿದ್ದು, ಇಂಗ್ಲೆಂಡ್ ತಂಡದ ವಿಶ್ವಕಪ್ ಕನಸು ನುಚ್ಚು ನೂರಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications