Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಮ್ಮ ಮನೆಗಳಲ್ಲೂ ಮಕ್ಕಳಿದ್ದಾರೆ; ವೈಭವ್ ಸೂರ್ಯವಂಶಿ ಪರ ಅಶ್ವಿನ್ ಬ್ಯಾಟಿಂಗ್

ಕ್ರಿಕೆಟ್‌ ವಲಯದಲ್ಲಿ ಭಾರೀ ಚರ್ಚಿತ ಹೆಸರು ವೈಭವ್ ಸೂರ್ಯವಂಶಿ. ಇವರು ಸದ್ಯ ಐರ್ಲೆಂಡ್‌ ಪ್ರವಾಸದ ಭಾರತ ತಂಡದ ಭಾಗವಾಗಿದ್ದಾರೆ. ವೈಭವ್ ಈ ಪ್ರವಾಸಕ್ಕೂ ಮುನ್ನ ಶ್ರೀಲಂಕಾದಲ್ಲಿ ತ್ರಿಕೋನ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. ಈ ಟೂರ್ನಿಯ ಲೀಗ್‌ ಹಂತದ ಪಂದ್ಯದ ವೇಳೆ ಶ್ರೀಲಂಕಾ ಎ ತಂಡದ ಆಟಗಾರ ವೈಭವ್ ಅವರನ್ನು ಕೆಣಕಿದರು ಈ ವೇಳೆ ಉಭಯ ಆಟಗಾರರ ನಡುವೆ ವಾಗ್ವಾದ ನಡೆಯಿತು. ಈ ವಾಗ್ವಾದ ಸಾಮಾಜಿಕ ಮಾಧ್ಯಮದಲ್ಲಿ ಪರ ಹಾಗೂ ವಿರೋಧ ಚರ್ಚೆಗೆ ಗ್ರಾಸವಾಯಿತು. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೂರ್ಯವಂಶಿ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಅಶ್ವಿನ್ ತಮ್ಮ ಹಿಂದಿ ಯೂಟ್ಯೂಬ್ ಚಾನೆಲ್ "ಆಶ್ ಕಿ ಬಾತ್" ನಲ್ಲಿ "ನೀವು ವೈಭವ್ ಸೂರ್ಯವಂಶಿಯನ್ನು ಹೇಗೆ ದ್ವೇಷಿಸಲು ಸಾಧ್ಯ?" ಎಂದು ಪ್ರಶ್ನೆ ಮಾಡಿದ್ದಾರೆ. ಈ ಮಗು ಇತರ ಆಟಗಾರರೊಂದಿಗೆ ಮಾತನಾಡುವಾಗ ಸ್ವಲ್ಪ ಜಾಗರೂಕತೆಯಿಂದ ಮಾತನಾಡಬೇಕು ಎಂಬುದನ್ನು ಕೇಳಿದ್ದೇನೆ. ನಾವು ಸಹ ಹಿಂದೊಮ್ಮೆ ಮಕ್ಕಳಾಗಿದ್ದೇವು ಎಂಬುದನ್ನು ನಾವೇ ಮರೆತಂತಿದೆ. ನಮ್ಮ ಕುಟುಂಬಗಳಲ್ಲಿಯೂ ಮಕ್ಕಳಿದ್ದಾರೆ ಎಂಬುದನ್ನು ನಾವು ಮರೆತಿದ್ದೇವೆಯಾ? ಎಂದು ಅಶ್ವಿನ್ ಪ್ರಶ್ನೆ ಮಾಡಿದ್ದಾರೆ.

How Can You Hate Him

ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಂತೆ ಅಳವಡಿಸಿಕೊಳ್ಳಬೇಕಾ ಎಂದು ಜನರು ನಿರೀಕ್ಷಿಸುತ್ತಿದ್ದಾರೆಯಾ ಎಂಬುದಕ್ಕೆ ಉತ್ತರಿಸಿದ ಅಶ್ವಿನ್‌, ವೈಭವ್ ಅವರ ಮೇಲೆ ಜನ ಈಗ ಎಷ್ಟು ಚಿತ್ತ ನೆಟ್ಟಿದ್ದಾರೋ, ಅಷ್ಟೂ ಚಿತ್ತವನ್ನು ಆಗ ಸಚಿನ್ ಅವರ ಮೇಲೆ ಜನರು ಇಟ್ಟಿರಲಿಲ್ಲ ಎಂದು ತಿಳಿಸಿದರು.

ಆಗ ಇಷ್ಟು ಸೌಲಭ್ಯ ಇತ್ತಾ?

ಸಚಿನ್ ತೆಂಡೂಲ್ಕರ್ ಅವರ ಯುಗದಲ್ಲಿ ಯಾರು ಇಷ್ಟು ಹತ್ತಿರದಿಂದ ಭಾರತ ಎ ತಂಡವನ್ನು ಫಾಲೋ ಮಾಡುತ್ತಿದ್ದರು. ಆಗ ಐಪಿಎಲ್‌ ಇತ್ತಾ?, ಆಗಿನ ಕಾಲದಲ್ಲಿ ಶ್ರೀಲಂಕಾದ ಆಟಗಾರರಿಗೆ ಸಚಿನ್ ಅವರ ಬಗ್ಗೆ ಇಷ್ಟೊಂದು ಅರಿವಿತ್ತಾ?, ಇದು ಒಂದು ಟ್ರೆಂಡ್ ಸೆಟ್‌ ಮಾಡುವ ಘಟನೆಯಾಗಿದೆ ಎಂದು ಅಶ್ವಿನ್ ತಿಳಿಸಿದ್ದಾರೆ.

ದೂರದಲ್ಲಿ ಕುಳಿತು ತೀರ್ಮಾನ ತೆಗೆದುಕೊಳ್ಳಬಾರದು

ಕ್ರಿಕೆಟ್ ಮೈದಾನದಲ್ಲಿ ವಿವಾದವನ್ನು ಪರಿಹರಿಸುವುದು ಮ್ಯಾಚ್ ರೆಫರಿ ಮತ್ತು ಅಂಪೈರ್‌ಗಳ ಕೆಲಸ ಎಂದು ಅಶ್ವಿನ್ ಮತ್ತಷ್ಟು ಸ್ಪಷ್ಟಪಡಿಸಿದರು. ದೂರದಿಂದ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಜನರಿಗೆ ಒತ್ತಾಯಿಸಿದರು. ನಾನು ಶ್ರೀಲಂಕಾ ಅಥವಾ ಭಾರತೀಯ ಆಟಗಾರರ ಬಗ್ಗೆ ಮಾತನಾಡುತ್ತಿಲ್ಲ. ಕ್ರೀಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಅಶ್ವಿನ್ ತಿಳಿಸಿದ್ದಾರೆ.

ನಾವು ಈ ಘಟನೆಯನ್ನು ದೂರದಲ್ಲಿ ಕುಳಿತುಕೊಂಡು ಸರಿಯೋ ತಪ್ಪೋ ಎಂದು ತೀರ್ಮಾನಿಸುತ್ತೇವೆ. ಆದರೆ ಈ ವಿಷಯ ಅದಕ್ಕೂ ಮುಂದು ಹೋಗಿದೆ. ದೂರದಲ್ಲಿ ಕುಳಿತಿರುವ ನಮಗೆ ಮೈದಾನದಲ್ಲಿ ನಡೆದ ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಈ ಕ್ರೀಡೆಯಲ್ಲಿ ನೀವು ಭಾವನೆಗಳನ್ನು ಸಹ ಪಣಕ್ಕಿಟ್ಟು ಆಟವಾಡುತ್ತೀರಿ ಎಂದು ಅಶ್ವಿನ್ ತಿಳಿಸಿದ್ದಾರೆ.

ವೈಭವ್ ಸೂರ್ಯವಂಶಿ ಸರಣಿಯ ಫೈನಲ್‌ನಲ್ಲಿ 29 ಎಸೆತಗಳಲ್ಲಿ 94 ರನ್ ಗಳಿಸಿದರು. ಈ ಮೂಲಕ ಇವರು ಲಿಸ್ಟ್‌ ಎ ನಲ್ಲಿ ವೇಗದ ಅರ್ಧಶತಕ ಸಹ ದಾಖಲಿಸಿದರು. ಇವರು ಕೇವಲ 11 ಎಸೆತಗಳಲ್ಲಿ 50 ರನ್ ಗಡಿ ದಾಟಿದರು.

Story first published: Wednesday, June 24, 2026, 22:56 [IST]
Other articles published on Jun 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+