For Quick Alerts
ALLOW NOTIFICATIONS  
For Daily Alerts
 

IPL 2025: ಈ ಸ್ಟಾರ್ ವಿಕೆಟ್‌ಕೀಪರ್ ಸಿಎಸ್‌ಕೆಗೆ ಬಂದ್ರೆ ಋತುರಾಜ್ ಗಾಯಕ್ವಾಡ್‌ಗೆ ಟೆಕ್ಷನ್ ಏಕೆ?

ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಐಪಿಎಲ್ 2022 ರ ನಂತರ ಮೊದಲ ಬಾರಿಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.

ಯಾವ ಫ್ರಾಂಚೈಸಿ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಅದರಲ್ಲೂ ಎಲ್ಲರ ಕಣ್ಣುಗಳು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮೇಲೆ ಇವೆ. ಏಕೆಂದರೆ ಮುಂದಿನ ಋತುವಿನಲ್ಲಿ ಎಂಎಸ್ ಧೋನಿ ಅನುಮಾನ ಎನ್ನಲಾಗುತ್ತಿದೆ.

How Could Rishabh Pant Arrival Affect Ruturaj Gaikwad Role at CSK in IPL 2025

ಇಂತಹ ಪರಿಸ್ಥಿತಿಯಲ್ಲಿ ಧೋನಿ ಅವರು ಮುಂದಿನ ಋತುವಿನಲ್ಲಿ ಆಡುವುದನ್ನು ನಿಲ್ಲಿಸಿದರೆ, ಅವರ ಸ್ಥಾನಕ್ಕೆ ಯಾರು ಎಂಬುದು ಪ್ರಶ್ನೆಯಾಗಿದೆ. ಕಳೆದ ಋತುವಿನಲ್ಲಿ ಧೋನಿ ನಾಯಕತ್ವವನ್ನು ತೊರೆದಿದ್ದರು. ಇದಾದ ಬಳಿಕ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವವನ್ನು ವಹಿಸಲಾಗಿತ್ತು. ಮುಂದಿನ ಋತುವಿನಲ್ಲಿಯೂ ಸಿಎಸ್‌ಕೆ ಪಾಳಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ.

ಧೋನಿ ನಿವೃತ್ತಿ?

ಹಲವು ವರ್ಷಗಳ ಊಹಾಪೋಹಗಳ ನಂತರ ಧೋನಿ ಅಂತಿಮವಾಗಿ ಮುಂಬರುವ ಐಪಿಎಲ್‌ನಿಂದ ನಿವೃತ್ತರಾಗುವ ಸಾಧ್ಯತೆಯಿದೆ. ಧೋನಿ ಅವರನ್ನು ಸಿಎಸ್‌ಕೆ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ಹೇಳಿವೆ. ವರದಿಗಳಿಗೆ ವಿರುದ್ಧವಾಗಿ ಸಿಎಸ್‌ಕೆ ಮಾಜಿ ನಾಯಕ ಧೋನಿ ಐಪಿಎಲ್‌ನಿಂದ ದೂರ ಸರಿಯುವುದು ಖಚಿತ ಎನ್ನಲಾಗುತ್ತಿದೆ.

ಧೋನಿ ನಿವೃತ್ತಿಯಾದರೆ, ಸಿಎಸ್‌ಕೆ ತಂಡಕ್ಕೆ ಖಂಡಿತವಾಗಿಯೂ ಹೊಸ ವಿಕೆಟ್‌ಕೀಪರ್-ಬ್ಯಾಟರ್ ಅಗತ್ಯವಿದೆ. ಇದಕ್ಕಾಗಿ ಐಪಿಎಲ್ 2025ರ ಹರಾಜಿನಲ್ಲಿ ಸಿಎಸ್‌ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರಿಗೆ ಗಾಳ ಹಾಕಲು ತಯಾರಿ ನಡೆಸಿದೆ. ರಿಷಬ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಬಹುದು ಎಂಬ ಚರ್ಚೆಗಳು ಕ್ರಿಕೆಟ್‌ ಗಲ್ಲಿಯಲ್ಲಿ ಶುರುವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಧೋನಿ ಸ್ಥಾನಕ್ಕೆ ಪಂತ್ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಋತುರಾಜ್ ಗಾಯಕ್ವಾಡ್‌ಗೆ ಟೆಕ್ಷನ್

ಎಂಎಸ್ ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಬಂದರೆ, ನಾಯಕತ್ವದ ಬದಲಾವಣೆಯ ಬಗ್ಗೆಯೂ ಸಿಎಸ್‌ಕೆ ಯೋಚಿಸಬಹುದು. ಈ ಸಂದರ್ಭದಲ್ಲಿ ಋತುರಾಜ್ ಗಾಯಕ್ವಾಡ್‌ ಅವರ ನಾಯಕತ್ವ ಕಳಚಿ ಬೀಳುವ ಸಾಧ್ಯತೆಗಳಿವೆ. ರಿಷಬ್ ಪಂತ್ ನಾಯಕನಾಗಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ವಿಕೆಟ್‌ಕೀಪರ್ ಆಗಿರುವುದರಿಂದ ಪಂದ್ಯದ ವೇಳೆ ಆಟಗಾರರನ್ನು ಫೀಲ್ಡಿಂಗ್ ನಿಲ್ಲಿಸಲು ಸಹಾಯವಾಗುತ್ತದೆ.

ಐಪಿಎಲ್ 2024ರ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಆದರೆ ಅವರ ನಾಯಕತ್ವದಲ್ಲಿ ತಂಡವು ಪ್ಲೇ ಆಫ್ ತಲುಪಲು ಸಾಧ್ಯವಾಗಿರಲಿಲ್ಲ. ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಸಿಎಸ್‌ಕೆ ಪ್ಲೇ ಆಫ್‌ಯಿಂದ ದೂರ ಉಳಿದಿತ್ತು. ಮುಂದಿನ ಋತುವಿನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ.

Story first published: Wednesday, September 11, 2024, 14:06 [IST]
Other articles published on Sep 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+