For Quick Alerts
ALLOW NOTIFICATIONS  
For Daily Alerts
 

Virat Kohli Career: ಧೋನಿ, ಸೆಹ್ವಾಗ್ ಸೇರಿ ವಿರಾಟ್ ಕೊಹ್ಲಿಯ ಟೆಸ್ಟ್ ವೃತ್ತಿಜೀವನ ಉಳಿಸಿದ್ದು ಹೇಗೆ?

ಸದ್ಯ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಸ್ಟಾರ್ ವಿರಾಟ್ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಜೊತೆಗೆ ಭಾರತ ತಂಡದ ಚೇಸಿಂಗ್ ಮಾಸ್ಟರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.

21ನೇ ಶತಮಾನದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ವಿರಾಟ್ ಕೊಹ್ಲಿ, 2008ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಭಾರತ ತಂಡದ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಕಾಲಕ್ರಮೇಣ ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ತಮ್ಮ ಶ್ರೇಷ್ಠ ಆಟದ ಮೂಲಕ ಸ್ಥಾಪಿಸಿಕೊಂಡರು.

How Did MS Dhoni And Virender Sehwag Saves Virat Kohlis Test Cricket Career?

2011ರ ವಿಶ್ವಕಪ್‌ ನಂತರ ಭಾರತೀಯ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆಯಲು ಕೊಹ್ಲಿ ಒಂದು ವರ್ಷಕ್ಕಿಂತ ಕಡಿಮೆ ಸಮಯವನ್ನು ತೆಗೆದುಕೊಂಡರು. ಆದರೂ, ಅವರ ಮೊದಲ ವರ್ಷವು ಸವಾಲಿನಿಂದ ಕೂಡಿತ್ತು. ಆಗ ಟೆಸ್ಟ್ ತಂಡದಿಂದ ಹೊರಬೀಳಬೇಕಾಯಿತು ಮತ್ತು ಬೆಂಚ್ ಕಾಯಿಸಬೇಕಾಯಿತು. ಅಂತಿಮವಾಗಿ 2011-12ರಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ಅವಿಸ್ಮರಣೀಯ ಪ್ರವಾಸಕ್ಕೂ ಮುನ್ನ ಪುನರಾಗಮನ ಮಾಡಿದರು.

ಇಂಗ್ಲೆಂಡ್ ವಿರುದ್ಧ 4-0 ಅಂತರದ ಸೋಲಿನ ನಂತರ, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಅವಮಾನಕರ ಸೋಲನ್ನು ಅನುಭವಿಸಿತು. ಇದರ ಪರಿಣಾಮವಾಗಿ ಸರಣಿ ವೈಟ್‌ವಾಶ್ ಆಯಿತು. ಈ ವೇಳೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಫಾರ್ಮ್ ಅನ್ನು ಕಳೆದುಕೊಂಡಿದ್ದರು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ದುರ್ಬಲವಾಗಿಸಿದ್ದರು.

How Did MS Dhoni And Virender Sehwag Saves Virat Kohlis Test Cricket Career?

ಎಲ್ಲ ಬ್ಯಾಟ್ಸ್‌ಮನ್‌ಗಳಂತೆ ವಿರಾಟ್ ಕೊಹ್ಲಿ ಕೂಡ ಆಸ್ಟ್ರೇಲಿಯಾದಲ್ಲಿ ಕಳಪೆ ಪ್ರದರ್ಶನ ನೀಡಿದರು. ಮೊದಲ ಎರಡು ಟೆಸ್ಟ್‌ ಪಂದ್ಯಗಳಲ್ಲಿ 11, 0, 23 ಮತ್ತು 9 ರನ್‌ಗಳೊಂದಿಗೆ ಹೆಣಗಾಡಿದರು. ಸೋಲಿನ ಫಲಿತಾಂಶದಿಂದ ಭಾರತೀಯ ಆಯ್ಕೆಗಾರರು ಆಡುವ 11ರ ಬಳವನ್ನು ಬದಲಾಯಿಸಲು ಯೋಚಿಸಿದರು. ಆಗ ವಿರಾಟ್ ಕೊಹ್ಲಿ ಬದಲಿಗೆ ಹಾಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಅವಕಾಶ ನೀಡಲು ಚಿಂತಿಸಿದ್ದರು.

ರೋಹಿತ್ ಶರ್ಮಾ 2010ರಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯಕ್ಕೆ ಪದಾರ್ಪಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಗಾಯಕ್ಕೆ ತುತ್ತಾಗಿದ್ದರಿಂದ ಅವರ ಪದಾರ್ಪಣೆ ಪಂದ್ಯ ವಿಳಂಬವಾಯಿತು. ಆಸ್ಟ್ರೇಲಿಯಾ ವಿರುದ್ಧ ಪರ್ತ್ ಟೆಸ್ಟ್‌ ಪಂದ್ಯದಲ್ಲಿ ಆಡಲು ರೋಹಿತ್ ಸಿದ್ಧರಾಗಿದ್ದರೂ, ನಾಯಕ ಎಂಎಸ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಅವರು ವಿರಾಟ್ ಕೊಹ್ಲಿ ಪರ ನಿಂತರು.

ಆ ವೇಳೆ ನಾಯಕ ಎಂಎಸ್ ಧೋನಿಗೆ ಉಪನಾಯಕರಾಗಿದ್ದ ವೀರೇಂದ್ರ ಸೆಹ್ವಾಗ್ ಅವರು 2016ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡರು. ಅಡಿಲೇಡ್ ಟೆಸ್ಟ್‌ ಪಂದ್ಯದಲ್ಲಿ ಸೆಹ್ವಾಗ್ ಭಾರತದ ನಾಯಕರಾಗಿದ್ದರು, ಆಗ ವಿರಾಟ್ ಕೊಹ್ಲಿ ಶತಕ ಗಳಿಸಿದರು.

How Did MS Dhoni And Virender Sehwag Saves Virat Kohlis Test Cricket Career?

"2012ರಲ್ಲಿ ಭಾರತ ತಂಡದ ಆಯ್ಕೆಗಾರರು ಪರ್ತ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರನ್ನು ಆಡಿಸಲು ಬಯಸಿದ್ದರು. ಉಪನಾಯಕನಾಗಿ ನಾನು ಮತ್ತು ನಾಯಕ ಧೋನಿ ಸೇರಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ನಿರ್ಧರಿಸಿದೆವು. ಮುಂದಿನದು ಇತಿಹಾಸ," ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದರು.

ಕಠಿಣ ಪರ್ತ್ ಮೈದಾನದಲ್ಲಿ ವಿರಾಟ್ ಕೊಹ್ಲಿ 44 ಮತ್ತು 75 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ನಂತರ ಅಡಿಲೇಡ್‌ನಲ್ಲಿ ಭರ್ಜರಿ ಶತಕ ಬಾರಿಸಿದರು.

ವಿರಾಟ್ ಕೊಹ್ಲಿಯನ್ನು ಬೆಂಬಲಿಸುವ ನಿರ್ಧಾರವು ಫಲಪ್ರದವಾಗಿತ್ತು. ಅಂದಿನಿಂದ ಅವರು ಹಿಂತಿರುಗಿ ನೋಡಲಿಲ್ಲ. 2014-15ರ ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಎಂಎಸ್ ಧೋನಿ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಮೂರನೇ ಟೆಸ್ಟ್‌ ಪಂದ್ಯದ ನಂತರ ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಬಳಿಕ ವಿರಾಟ್ ಕೊಹ್ಲಿ ಪೂರ್ಣ ನಾಯಕತ್ವವನ್ನು ವಹಿಸಿಕೊಂಡರು. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದರು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ನಾಯಕತ್ವವನ್ನು ತ್ಯಜಿಸುವ ಹೊತ್ತಿಗೆ, 68 ಪಂದ್ಯಗಳಲ್ಲಿ 40 ಗೆಲುವುಗಳನ್ನು ದಾಖಲಿಸುವ ಮೂಲಕ ಭಾರತ ತಂಡದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರೆನಿಸಿಕೊಂಡರು.

Story first published: Sunday, June 25, 2023, 19:59 [IST]
Other articles published on Jun 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+