Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL2024: ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್‌ ಐಪಿಎಲ್‌ ಚಾಂಪಿಯನ್‌ ಆಗಿದ್ದೇಗೆ?

ಮೇ 26 ಸೋಮವಾರ, ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್‌ ಟೂರ್ನಿಯಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಭಾನುವಾರ ತೆರೆ ಕಂಡಿದೆ.

10 ತಂಡಗಳ ನಡುವೆ 70 ಲೀಗ್ ಹಂತದ ಪಂದ್ಯಗಳು, 3 ಪ್ಲೇ ಆಫ್ ಪಂದ್ಯಗಳ ಬಳಿಕ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಹೆಚ್‌) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

How Gautam Gambhir lead KKR to become the IPL 2024 champions

ಈ ಮೂಲಕ ಕೆಕೆಆರ್‌ ಐಪಿಎಲ್‌ ಇತಿಹಾಸದಲ್ಲಿ ಮೂರನೇ ಬಾರಿಗೆ ಚಾಂಪಿಯನ್‌ ಆದ ದಾಖಲೆ ಮಾಡಿದೆ. ಈ ಗೆಲುವಿನಲ್ಲಿ ಟೀಮ್‌ ಇಂಡಿಯಾದ ಮಾಜಿ ಎಡಗೈ ಬ್ಯಾಟರ್‌ ಮತ್ತು ಕೆಕೆಆರ್‌ ಮೆಂಟರ್ ಗೌತಮ್ ಗಂಭೀರ್ ಅವರು ದೊಡ್ಡ ಪಾತ್ರ ವಹಿಸಿದ್ದಾರೆ.

ಗೌತಮ್‌ ಗಂಭೀರ್‌ ಅವರ ಗೆಲುವಿನ ಮಂತ್ರ ತಂಡಕ್ಕೆ ಉಪಯುಕ್ತವಾಗಿದ್ದು, 10 ವರ್ಷಗಳ ಬಳಿಕ ಕೆಕೆಆರ್ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಹಾಗಾಗಿ ಗೌತಮ್ ಗಂಭೀರ್ ಅವರ ಈ ಗೆಲುವಿನ ಮಂತ್ರದ ಜೊತೆಗೆ ಕಟ್ಟುನಿಟ್ಟಿನ ವ್ಯಕ್ತಿತ್ವ ಕೆಕೆಆರ್‌ ತಂಡದ ಯಶಸ್ಸಿಗೆ ಕಾರಣವಾಗಿದೆ.

ಗೌತಮ್ ಮೈದಾನದಲ್ಲಿ ತುಂಬಾ ಗಂಭೀರವಾಗಿ ಕಾಣುತ್ತಾರೆ. ಅನೇಕ ಬಾರಿ ಅವರು ಮೈದಾನದಲ್ಲಿ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮೈದಾನದಲ್ಲಿ ಎಷ್ಟು ಸೀರಿಯಸ್ ಆಗಿ ಕಾಣುತ್ತಾರೋ, ತಂಡಕ್ಕೆ ಯಶಸ್ಸನ್ನೂ ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ಗಂಭೀರ್ ಮೈದಾನಕ್ಕೆ ಬರುವುದು ಗೆಲ್ಲಲು ಮಾತ್ರ ಎಂಬಂತೆ ಕಾಣಿಸುತ್ತಿರುತ್ತಾರೆ. ಹಾಗಾಗಿ ಗೆಲುವಿನ ಹಸಿವು ಇತರರಿಗಿಂತ ಗಂಭೀರ್‌‌ ಅವರಲ್ಲಿ ಹೆಚ್ಚಾಗಿ ಕಾಣಿಸುತ್ತಿರುತ್ತದೆ. ಇದನ್ನೆ ಮಾರ್ಗದರ್ಶಕರಾಗಿ ಗಂಭೀರ್‌ ತಮ್ಮ ತಂಡ ಕೆಕೆಆರ್‌ಗೆ ಆಕ್ರಮಣಕಾರಿ ಶೈಲಿ ಮತ್ತು ಗೆಲುವಿನ ಮನೋಭಾವವನ್ನು ಕಲಿಸಿದ್ದಾರೆ.

ಇದರಿಂದಾಗಿ ಐಪಿಎಲ್ 2024ರಲ್ಲಿ ಕೆಕೆಆರ್ ತಂಡ ಗಂಭೀರ್‌ ಮಾರ್ಗದರ್ಶನದಲ್ಲಿ ಆಕ್ರಮಣಕಾರಿಯಾಗಿ ಆಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ಪ್ರತಿ ನಾಕೌಟ್ ಪಂದ್ಯದಲ್ಲೂ ಗೆಲುವಿನ ಮಂತ್ರದೊಂದಿಗೆ ಅದ್ಭುತವಾಗಿ ಆಡುತ್ತಿದ್ದ ಕೆಕೆಆರ್‌ ಅಂತಿಮವಾಗಿ ಐಪಿಎಲ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದಕ್ಕೆ ಗಂಭೀರ್‌ ಅವರ ಮಾರ್ಗದರ್ಶನದ ದಾರಿಯೇ ಕಾರಣ.

ಇದೇ ವ್ಯಕ್ತಿತ್ವದಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ

ಗಂಭೀರ್‌ ತನ್ನ ವ್ಯಕ್ತಿತ್ವವನ್ನು ಎಂದಿಗೂ ಸ್ವಲ್ಪ ಕೂಡ ಬದಲಾವಣೆ ಮಾಡಿಕೊಂಡಿಲ್ಲ. ಆದರಿಂದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ಗಂಭೀರ್‌ ಮಿಂಚಿದ್ದಾರೆ. 2007ರ ಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಚಾಂಪಿಯನ್‌ ಆಗಲು ಗಂಭೀರ್‌ ಅವರ ಕೊಡುಗೆ ಮರೆಯುವಾಗಿಲ್ಲ.

ಇದಲ್ಲದೆ, ಶ್ರೀಲಂಕಾ ವಿರುದ್ಧ 2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಪರ ಅಬ್ಬರ ಗಂಭೀರ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ ಆಡಿದ್ದರು. ಭಾರತ 2008ರ ಏಷ್ಯಾ ಕಪ್‌ನ ಫೈನಲಿಸ್ಟ್ ಆಗಲು ಮತ್ತು 2010ರಲ್ಲಿ ಏಷ್ಯಾ ಕಪ್‌ ಚಾಂಪಿಯನ್ ಆಗಲು ಗಂಭೀರ್‌ ನೆರವಾಗಿದ್ದರು.

ಐಪಿಎಲ್‌ನಲ್ಲಿ ಗಂಭೀರ್‌ ಮೈಲಿಗಲ್ಲು

ಐಪಿಎಲ್‌ ಇತಿಹಾಸದಲ್ಲಿ ಯಶಸ್ವಿ ನಾಯಕ ಸಾಲಿನಲ್ಲಿ ಗೌತಮ್‌ ಗಂಭೀರ್‌ ಕೂಡ ನಿಲ್ಲುತ್ತಾರೆ. ಗಂಭೀರ್‌ 2011 ರಿಂದ 2017 ರವರೆಗೆ ಒಟ್ಟು 7 ಐಪಿಎಲ್ ಆವೃತ್ತಿಗಳಲ್ಲಿ ಕೆಕೆಆರ್‌ ತಂಡದ ನಾಯಕತ್ವ ವಹಿಸಿ ಮುನ್ನೆಡೆಸಿದ್ದಾರೆ.

ಈ ಅವಧಿಯಲ್ಲಿ ಐದು ಬಾರಿ ಕೆಕೆಆರ್‌ ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ದಿದ್ದಾರೆ. 2012 ಮತ್ತು 2014ರಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಲು ಗಂಭೀರ್‌ ಶ್ರಮವಹಿಸಿದ್ದಾರೆ. 2011, 2016 ಮತ್ತು 2017 ರಲ್ಲಿ ಕೆಕೆಆರ್‌ ಪ್ಲೇಆಫ್‌ ಪ್ರವೇಶಿಸಿತು.

ಕಳೆದ 2022 ಮತ್ತು 2023ರ ಐಪಿಎಲ್‌ ಋತುಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್‌ ಆಗಿದ್ದ ಗಂಭೀರ್ ತಂಡವನ್ನು‌ ಪ್ಲೇಆಫ್‌ಗೆ ಕರೆದೊಯ್ದಿದ್ದರು. ಬಳಿಕ 2024ರಲ್ಲಿ ತಮ್ಮ ಹಳೆಯ ತಂಡವಾದ ಕೆಕೆಆರ್‌ಗೆ ಮೆಂಟರ್‌ ಆಗಿ ಮರಳಿದ ಗಂಭೀರ್‌ ಮೊದಲ ಋತುವಿನಲ್ಲೇ ಚಾಂಪಿಯನ್‌ ಆಗಿದ್ದಾರೆ.

Story first published: Monday, May 27, 2024, 11:41 [IST]
Other articles published on May 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+