ಟಿ20 ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಭಾರತ ತಂಡದ ದಾಖಲೆ ಹೇಗಿದೆ?
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2024ರ ಐಸಿಸಿ ಟಿ20 ವಿಶ್ವಕಪ್‌ನ ಗುಂಪು 1ರ ತನ್ನ ಕೊನೆಯ ಸೂಪರ್ 8ರ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಐದನೇ ಬಾರಿಗೆ ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದೆ.
ಗುರುವಾರ, ಜೂನ್ 27ರಂದು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ ಸೆಣಸಾಡಲಿದ್ದು, 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಟೀಮ್ ಇಂಡಿಯಾ ಇದುವರೆಗೆ ಪ್ರಸಕ್ತ ಪಂದ್ಯಾವಳಿಯಲ್ಲಿ ಅಜೇಯರಾಗಿದ್ದು, ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಆದಾಗ್ಯೂ, ನಾಕೌಟ್ ಹಂತಗಳಲ್ಲಿ ಗೆಲ್ಲುವುದು ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವುದಕ್ಕಿಂತ ಭಿನ್ನವಾಗಿದೆ. ಇಲ್ಲಿ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಇರುತ್ತದೆ.
2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ನೊಂದಿಗೆ ಹಣಾಹಣಿಗೆ ಸಜ್ಜಾಗುತ್ತಿದ್ದಂತೆ, ನಾಕೌಟ್ ಹಂತಗಳಲ್ಲಿ ಭಾರತ ತಂಡದ ದಾಖಲೆಯನ್ನು ಗಮನಿಸೋಣ.
ಟಿ20 ವಿಶ್ವಕಪ್‌ನ ಎಲ್ಲಾ ಆವೃತ್ತಿಯಲ್ಲಿ ಭಾರತ ತಂಡದ ಪ್ರದರ್ಶನ
1) 2007 - ದಕ್ಷಿಣ ಆಫ್ರಿಕಾ - ಚಾಂಪಿಯನ್ಸ್
2) 2009 - ಇಂಗ್ಲೆಂಡ್ - ಸೂಪರ್ 8
3) 2010 - ವೆಸ್ಟ್ ಇಂಡೀಸ್ - ಸೂಪರ್ 8
4) 2012 - ಶ್ರೀಲಂಕಾ - ಸೂಪರ್ 8
5) 2014 - ಬಾಂಗ್ಲಾದೇಶ - ರನ್ನರ್ ಅಪ್
6) 2016 - ಭಾರತ - ಸೆಮಿಫೈನಲ್
7) 2021 - ಯುಎಇ - ಸೂಪರ್ 12
8) 2022 - ಆಸ್ಟ್ರೇಲಿಯಾ - ಸೆಮಿಫೈನಲ್

ನಾಕೌಟ್ ಹಂತದಲ್ಲಿ ಭಾರತ ತಂಡದ ದಾಖಲೆ
ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಋತುವಿನ ಮೊದಲ ಪ್ರಶಸ್ತಿ ವಿಜೇತ ತಂಡ ಭಾರತವಾಗಿದೆ. ಆದಾಗ್ಯೂ, 2007ರಿಂದ ಭಾರತೀಯ ಕ್ರಿಕೆಟ್ ತಂಡವು ಯಾವುದೇ ಟಿ20 ವಿಶ್ವಕಪ್ ಆವೃತ್ತಿಯನ್ನು ಗೆದ್ದಿಲ್ಲ. 2007ರ ಹೊರತಾಗಿ ಈವರೆಗೆ ಎರಡು ಬಾರಿ ಸೆಮಿಫೈನಲ್‌ಗೆ ತಲುಪಿದ್ದಾರೆ ಮತ್ತು ಒಮ್ಮೆ ಮಾತ್ರ ಫೈನಲ್‌ನಲ್ಲಿ ಆಡಿದ್ದಾರೆ.
ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು. ಟೀಮ್ ಇಂಡಿಯಾ 2014ರಲ್ಲಿ ಬಾಂಗ್ಲಾದೇಶದಲ್ಲಿ ಕೇವಲ ಒಂದು ಸೆಮಿಫೈನಲ್ ಪಂದ್ಯವನ್ನು ಮಾತ್ರ ಗೆದ್ದಿತ್ತು. ನಂತರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದರು.
ಭಾರತ vs ಇಂಗ್ಲೆಂಡ್ 2ನೇ ಸೆಮಿಫೈನಲ್: ಪಂದ್ಯ ರದ್ದಾದರೆ ಏನಾಗುತ್ತದೆ?
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಂತಗಳಲ್ಲಿ ಮಳೆ ಅಡ್ಡಿಪಡಿಸುವ ಸಾಧ್ಯತೆಗಳನ್ನು ಹೊಂದಿದೆ. ಮೊದಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳು ಇದ್ದರೂ, ಬಿಗಿಯಾದ ವೇಳಾಪಟ್ಟಿಯಿಂದಾಗಿ ಎರಡನೇ ಸೆಮಿಫೈನಲ್‌ಗೆ ಮಾತ್ರ ಮೀಸಲು ದಿನವಿಲ್ಲ.
ಎರಡನೇ ಸೆಮಿಫೈನಲ್ ಪಂದ್ಯವು ಮಳೆಯಿಂದ ರದ್ದುಗೊಂಡರೆ, ಭಾರತ ತಂಡವು ಸ್ವಯಂಚಾಲಿತವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಏಕೆಂದರೆ ಟೀಮ್ ಇಂಡಿಯಾ ಸೂಪರ್ 8ರ ಹಂತದಲ್ಲಿ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿತ್ತು.
ಇದು ಐಸಿಸಿ ನಿಯಮಗಳಿಗೆ ಅನುಸಾರವಾಗಿದ್ದು, ಇದು ಒಂದು ಸೆಮಿಫೈನಲ್ ಪಂದ್ಯವನ್ನು ರದ್ದುಗೊಳಿಸಿದರೆ ಅಥವಾ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡರೆ, ಸೂಪರ್ 8ರ ಹಂತದಲ್ಲಿ ಅಗ್ರಸ್ಥಾನ ಗಳಿಸಿದ ತಂಡವು ಮುನ್ನಡೆಯುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications