For Quick Alerts
ALLOW NOTIFICATIONS  
For Daily Alerts
 

2024ರ ಟಿ20 ವಿಶ್ವಕಪ್‌ನಲ್ಲಿ ಯಾರೂ ಗಳಿಸದ ಶತಕ; ಕಳೆದ 8 ಆವೃತ್ತಿಗಳಲ್ಲಿ ಬಂದ '100' ಎಷ್ಟು?

ಜೂನ್‌ 25 ಮಂಗಳವಾರ, ಪ್ರಸ್ತುತ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಯಶಸ್ವಿಯಾಗಿ ಅಂತಿಮ ಘಟ್ಟದತ್ತ ಸಾಗದೆ. 20 ತಂಡಗಳ ಪೈಕಿ ಭಾರತ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ಗೆ ಕ್ವಾಲಿಫೈಯರ್‌ ಆಗಿವೆ.

ಈ ಋತುವಿ ಟಿ20 ವಿಶ್ವಕಪ್‌ನಲ್ಲಿ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಇದರಿಂದಾಗಿ ಬ್ಯಾಟರ್‌ಗಳು ಸರಿಯಾಗಿ ಬ್ಯಾಟಿಂಗ್‌ ಮಾಡಲು ಸಾಧ್ಯವಾಗಲಿಲ್ಲ. ಜೊತೆಗೆ ಈ ಮೆಗಾ ಟೂರ್ನಿಯಲ್ಲಿ ಇದುವರೆಗೂ ಒಂದೇ ಒಂದು ಶತಕವನ್ನು ಗಳಿಸಲು ಯಾವ ಬ್ಯಾಟರ್‌ ಕೂಟ ಯಶಸ್ವಿಯಾಗಿಲ್ಲ.

How many centuries have batsmen scored in T20 World Cup editions

ಹಾಗಾಗಿ ಇಲ್ಲಿಯವರೆಗೆ ನಡೆದ ಟಿ20 ವಿಶ್ವಕಪ್‌ನ ಎಲ್ಲಾ ಆವೃತ್ತಿಗಳು ಮತ್ತು ಯಾವ ಬ್ಯಾಟರ್‌ ಯಾವ ಋತುವಿನಲ್ಲಿ ಶತಕಗಳನ್ನು ಹೊಡೆದಿರುವ ಬಗ್ಗೆ ಮಾಹಿತಿ ಇಲ್ಲಿದೆ.

ಇದುವರೆಗೆ ಟಿ20 ವಿಶ್ವಕಪ್‌ ಆವೃತ್ತಿಗಳಲ್ಲಿ ದಾಖಲಾದ ಶತಕಗಳು

1) ಟಿ20 ವಿಶ್ವಕಪ್ 2007: ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಮೊದಲ ಶತಕವನ್ನು ವೆಸ್ಟ್ ಇಂಡೀಸ್ ಬ್ಯಾಟರ್‌ ಕ್ರಿಸ್ ಗೇಲ್ ಗಳಿಸಿದರು. ಮೊದಲ ಆವೃತ್ತಿಯಲ್ಲೇ ಗೇಲ್‌ ಅವರು 117 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.

ಈ ಋತುವಿನಲ್ಲಿ, 2 ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ 117 ರನ್ ಗಳಿಸಲಾಯಿತು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಗೇಲ್ ಪಾತ್ರರಾದರು.

How many centuries have batsmen scored in T20 World Cup editions

2) ಟಿ20 ವಿಶ್ವಕಪ್ 2009: ಎರಡನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಯಾವುದೇ ಬ್ಯಾಟರ್‌ಗಳು ಶತಕ ಗಳಿಸಲು ಸಾಧ್ಯವಾಗಲಿಲ್ಲ. ಈ ಋತುವಿನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (96*) ಶ್ರೀಲಂಕಾದ ಅಗ್ರ ಬ್ಯಾಟರ್‌ ದಿಲ್ಕರತ್ನೆ ದಿಲ್ಶನ್ ಗಳಿಸಿದ್ದರು.

3) ಟಿ20 ವಿಶ್ವಕಪ್ 2010: ಭಾರತದ ಎಡಗೈ ಮಾಜಿ ಬ್ಯಾಟರ್‌ ಸುರೇಶ್ ರೈನಾ ಮತ್ತು ಶ್ರೀಲಂಕಾದ ಆರಂಭಿಕ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್‌ನ ಮೂರನೇ ಆವೃತ್ತಿಯಲ್ಲಿ ಶತಕಗಳನ್ನು ಗಳಿಸಿದ್ದರು.

ರೈನಾ 101 ರನ್‌ಗಳ ಇನಿಂಗ್ಸ್‌ ಆಡಿದರೆ, ಜಯವರ್ಧನೆ 100 ರನ್‌ಗಳ ಬಾರಿಸಿದ್ದರು. ಈ ಋತುವಿನಲ್ಲಿ ರೈನಾ 5 ಇನ್ನಿಂಗ್ಸ್‌ಗಳಲ್ಲಿ 219 ರನ್ ಮತ್ತು ಜಯವರ್ಧನೆ 6 ಇನ್ನಿಂಗ್ಸ್‌ಗಳಲ್ಲಿ 302 ರನ್ ಕಲೆ ಹಾಕಿದ್ದರು.

4) ಟಿ20 ವಿಶ್ವಕಪ್ 2012: ನ್ಯೂಜಿಲೆಂಡ್‌ನ ವಿಕೆಟ್‌ಕೀಪರ್ ಮತ್ತು ಬ್ಯಾಟರ್‌ ಬ್ರೆಂಡನ್ ಮೆಕಲಮ್ ನಾಲ್ಕನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ್ದರು. ಈ ಋತುವಿನಲ್ಲಿ ಮೆಕಲಮ್ 123 ರನ್‌ಗಳನ್ನು ಹೊಡೆದಿದ್ದರು. ಮೆಕಲಮ್‌ ಒಟ್ಟು 5 ಇನ್ನಿಂಗ್ಸ್‌ಗಳಲ್ಲಿ 212 ರನ್ ಗಳಿಸಿದ್ದರು.

5) ಟಿ20 ವಿಶ್ವಕಪ್ 2014: ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್‌ ಅಲೆಕ್ಸ್ ಹೇಲ್ಸ್ ಮತ್ತು ಪಾಕಿಸ್ತಾನದ ಶಹಜಾದ್ ಅಹ್ಮದ್ ಐದನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದರು.

ಹೇಲ್ಸ್ 116 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ಶಹಜಾದ್ 111 ರನ್ ಗಳನ್ನು ಹೊಡೆದಿದ್ದರು. ಈ ಋತುವಿನಲ್ಲಿ, ಹೇಲ್ಸ್ 4 ಇನ್ನಿಂಗ್ಸ್‌ಗಳಲ್ಲಿ 166 ರನ್ ಗಳಿಸಿದರು. ಶಹಜಾದ್ 4 ಇನ್ನಿಂಗ್ಸ್‌ಗಳಲ್ಲಿ 138 ರನ್ ಕಲೆ ಹಾಕಿದ್ದರು.

6) ಟಿ20 ವಿಶ್ವಕಪ್ 2016: ಬಾಂಗ್ಲಾದೇಶದ ಎಡಗೈ ಬ್ಯಾಟರ್‌ ತಮೀಮ್ ಇಕ್ಬಾಲ್ ಮತ್ತು ವೆಸ್ಟ್ ಇಂಡೀಸ್‌ನ ಸ್ಫೋಟಕ ಆರಂಭಿಕ ಕ್ರಿಸ್ ಗೇಲ್ ಟಿ20 ವಿಶ್ವಕಪ್‌ನ ಆರನೇ ಆವೃತ್ತಿಯಲ್ಲಿ ಶತಕಗಳನ್ನು ಗಳಿಸಿದರು.

ತಮೀಮ್ ಅಜೇಯ 103 ರನ್‌ ಗಳಿಸಿದ್ದರೆ, ಗೇಲ್ ಅಜೇಯ 100 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈ ಋತುವಿನಲ್ಲಿ ತಮೀಮ್ 6 ಇನ್ನಿಂಗ್ಸ್‌ಗಳಲ್ಲಿ 295 ರನ್ ಮತ್ತು ಗೇಲ್ 4 ಇನ್ನಿಂಗ್ಸ್‌ಗಳಲ್ಲಿ 113 ರನ್ ಗಳಿಸಿದ್ದರು.

7) ಟಿ20 ವಿಶ್ವಕಪ್ 2021: ಇಂಗ್ಲೆಂಡ್ ನಾಯಕ ಮತ್ತು ವಿಕೆಟ್‌ಕೀಪರ್ ಬ್ಯಾಟರ್‌ ಜೋಸ್ ಬಟ್ಲರ್ ಏಳನೇ ಆವೃತ್ತಿಯ T20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ್ದರು. ಬಟ್ಲರ್ ಈ ಋತುವಿನಲ್ಲಿ ಅಜೇಯ 101 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಬಟ್ಲರ್‌ ಒಟ್ಟು 6 ಇನ್ನಿಂಗ್ಸ್‌ಗಳಲ್ಲಿ 269 ರನ್ ಗಳಿಸಿದ್ದರು.

8) ಟಿ20 ವಿಶ್ವಕಪ್ 2022: ಎಂಟನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಶತಕ ಹೊಡೆದಿದ್ದರು. ಫಿಲಿಪ್ಸ್‌ 104 ರನ್‌ಗಳ ಶತಕ ಇನಿಂಗ್ಸ್‌ ಆಡಿದ್ದರು. ಒಟ್ಟು 5 ಇನ್ನಿಂಗ್ಸ್‌ಗಳಲ್ಲಿ 201 ರನ್ ಕಲೆ ಹಾಕಿದ್ದರು.

Story first published: Tuesday, June 25, 2024, 18:30 [IST]
Other articles published on Jun 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+