IPL 2025: ಮೆಗಾ ಹರಾಜಿನಲ್ಲಿ ಯಾವ ದೇಶದ ಎಷ್ಟು ಆಟಗಾರರು ಮಾರಾಟವಾಗಿದ್ದಾರೆ?; ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಐಪಿಎಲ್ 2025ರ ಮೆಗಾ ಹರಾಜು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಮೆಗಾ ಹರಾಜಿನಲ್ಲಿ ಆಟಗಾರರು ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇನ್ನು ಕೆಲುವ ಆಟಗಾರರು ಸೂಪರ್ ಸ್ಟಾರ್ ಆಗಿದ್ದಾರೆ. ಈ ಬಾರಿಯ ಮೆಗಾ ಹರಾಜಿನಲ್ಲಿ ವೇಗದ ಬೌಲರ್‌ಗಳಿಗೆ ಬೇಡಿಕೆ ಹೆಚ್ಚಿತ್ತು. ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಮುಖೇಶ್ ಕುಮಾರ್ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ವೇಗದ ಬೌಲರ್‌ಗಳು ದುಬಾರಿ ಬೆಲೆಗೆ ಬಿಡ್ ಆದರು.
ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಕ್ಕೆ 27 ಕೋಟಿ ರೂ.ಗಳಿಗೆ ಬಿಡ್ ಆಗುವ ಮೂಲಕ ರಿಷಬ್ ಪಂತ್ ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆ ಮಾಡಿದ್ದಾರೆ. ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ನಂತರ ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗೆ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿದೆ. ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವೂ ಅಯ್ಯರ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು.

ಐಪಿಎಲ್ ಇತಿಹಾಸಿದಲ್ಲಿ ಅತಿ ಕಿರಿಯ ಆಟಗಾರ ಎನಿಸಿಕೊಂಡಿರುವ 13 ವರ್ಷದ ವೈಭವ್ ಸೂರ್ಯವಂಶಿ 1.10 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ.
ಯಾವ ದೇಶದ ಎಷ್ಟು ಆಟಗಾರರು?
ಐಪಿಎಲ್ 2025ರ ಮೆಗಾ ಹರಾಜಿಗೆ ಒಟ್ಟು 1574 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಬಿಸಿಸಿಐ
1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿತ್ತು. ಇದರಲ್ಲಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರಿದ್ದರು. ಇದರಲ್ಲಿ ಈ ಬಾರಿ ಮೆಗಾ ಹರಾಜಿನಲ್ಲಿ ಒಟ್ಟು 182 ಆಟಗಾರರು ಬಿಡ್ ಆಗಿದ್ದಾರೆ. ಭಾರತೀಯ ಆಟಗಾರರು ಹೆಚ್ಚು ಮಾರಾಟವಾಗಿದ್ದಾರೆ. ಭಾರತದ 120 ಆಟಗಾರರು ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ವಿದೇಶಿ ಆಟಗಾರರ ಬಗ್ಗೆ ನೋಡುವುದಾದರೆ, ದಕ್ಷಿಣ ಆಫ್ರಿಕಾದ 14 ಆಟಗಾರರು ಬಿಡ್ ಆಗಿರುವುದು ದಾಖಲೆಯಾಗಿದೆ.
ಭಾರತ: 120 ಆಟಗಾರರು
ದಕ್ಷಿಣ ಆಫ್ರಿಕಾ: 14 ಆಟಗಾರರು
ಆಸ್ಟ್ರೇಲಿಯಾ: 13 ಆಟಗಾರರು
ಇಂಗ್ಲೆಂಡ್: 12 ಆಟಗಾರರು
ನ್ಯೂಜಿಲೆಂಡ್: 7 ಆಟಗಾರರು
ಅಫ್ಘಾನಿಸ್ತಾನ: 6 ಆಟಗಾರರು
ಶ್ರೀಲಂಕಾ: 6 ಆಟಗಾರರು
ವೆಸ್ಟ್ ಇಂಡೀಸ್: 4 ಆಟಗಾರರು
ಯಾವ ದೇಶದ ಆಟಗಾರರು ಶ್ರೀಮಂತರು?
ವಿಶ್ವ ಶ್ರೀಮಂತ ಕ್ರಿಕೆಟ್ ಲೀಗ್‌ನ ಮೆಗಾ ಹರಾಜಿನಲ್ಲಿ ಭಾರತೀಯ ಆಟಗಾರರೇ ಹೆಚ್ಚು ಹಣ ಗಳಿಸಿದ್ದಾರೆ. ಒಟ್ಟು ಮಾರಾಟವಾಗಿರುವ 120 ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು 383.40 ಕೋಟಿ ರೂ. ಖರ್ಚು ಮಾಡಿವೆ.
ವಿದೇಶಿ ತಂಡಗಳ ಪೈಕಿ ಇಂಗ್ಲೆಂಡ್ ಆಟಗಾರರು ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ 12 ಆಟಗಾರರು ಮಾತ್ರ ಮಾರಾಟವಾಗಿದ್ದು, ಇವರಿಗಾಗಿ ಐಪಿಎಲ್ ಫ್ರಾಂಚೈಸಿಗಳು 70.25 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ.
ಭಾರತ: ರೂ 383.40 ಕೋಟಿ ರೂ.
ಇಂಗ್ಲೆಂಡ್: ರೂ 70.25 ಕೋಟಿ ರೂ.
ಆಸ್ಟ್ರೇಲಿಯಾ: ರೂ 66.70 ಕೋಟಿ ರೂ.
ದಕ್ಷಿಣ ಆಫ್ರಿಕಾ: ರೂ 47.50 ಕೋಟಿ ರೂ.
ನ್ಯೂಜಿಲೆಂಡ್: ರೂ 29.05 ಕೋಟಿ ರೂ.
ಅಫ್ಘಾನಿಸ್ತಾನ: ರೂ 21.95 ಕೋಟಿ ರೂ.
ಶ್ರೀಲಂಕಾ: ರೂ 13.95 ಕೋಟಿ ರೂ.
ವೆಸ್ಟ್ ಇಂಡೀಸ್: ರೂ 6.35 ಕೋಟಿ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications